Tata Motors: ಭಾರತ ಎಂದೂ ಮರೆಯದ 7 ಅಪ್ರತಿಮ ಕಾರುಗಳನ್ನು ಕೊಟ್ಟು ಮರೆಯಾದ ಮಹಾನುಭಾವ!

Tata Motors: ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾದ ದಿವಂಗತ ರತನ್ ಟಾಟಾ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಭವಿಷ್ಯವನ್ನು ಮೊದಲೇ ಅರಿತಿದ್ದ ಅವರು, ಹಲವು ರಂಗಗಳಲ್ಲಿ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಯಾವ ಮಟ್ಟಿಗೆ ಅಂದ್ರೆ ಟಾಟಾ ಸಾಲ್ಟ್‌ನಿಂದ ಹಿಡಿದು ಟಾಟಾ ಸ್ಟೀಲ್‌ವರೆಗೆ ಬ್ರಾಂಡ್‌ ಹೆಸರು ಕೇಳುತ್ತಿದ್ದಂತೆ ಜನರು ವಿಶ್ವಾಸದಿಂದ ವಸ್ತುಗಳನ್ನು ಖರೀದಿಸುವ ಮಟ್ಟಕ್ಕೆ ತಮ್ಮ ಬ್ರಾಂಡ್‌ ಆಳವಾಗಿ ಬೇರೂರಿತ್ತು. ಟಾಟಾ ಕಾರುಗಳು ಕೂಡ ಅಷ್ಟೇ ಜನಪ್ರಿಯತೆ ಪಡೆದಿವೆ, ಭಾರತೀಯ ಆಟೋ ಉದ್ಯಮದಲ್ಲಿ ಟಾಟಾ ಮೋಟಾರ್ಸ್ ತಯಾರಿಸಿದ ಕೆಲವು ಮರೆಯಲಾಗದ ಕಾರುಗಳನ್ನು ಇಲ್ಲಿ ನೋಡೋಣ.

ಟಾಟಾ ಸಿಯೆರಾ: ಟಾಟಾ ಸಿಯೆರಾಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ವಾಹನವು ನಿಸ್ಸಂದೇಹವಾಗಿ ಆ ಸಮಯದಲ್ಲೇ ಫ್ಯೂಚರಿಸ್ಟಿಕ್ ಡಿಸೈನ್ ಹೊಂದಿತ್ತು. 1991 ರಲ್ಲಿ ಬಿಡುಗಡೆಯಾದ ಟಾಟಾ ಸಿಯೆರಾವು ಟಾಟಾ ಟೆಲ್ಕೋಲೈನ್ ಪಿಕಪ್ ಅನ್ನು ಆಧರಿಸಿತ್ತು. ಆಟೋ-ಲಾಕಿಂಗ್ ಹಿಂಭಾಗದ ಡಿಫರೆನ್ಷಿಯಲ್‌ಗಳು ಮತ್ತು ಮ್ಯಾನ್ಯುವಲ್ ಲಾಕಿಂಗ್ ಫ್ರಂಟ್ ಹಬ್‌ಗಳೊಂದಿಗೆ 4WD ಆಗಿ ಮಾರಾಟದಲ್ಲಿತ್ತು. ಇದು 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿತ್ತು.

tata-motors-7-iconic-cars-indica-sierra-estate-nano-nexon

ಟಾಟಾ ಎಸ್ಟೇಟ್: ಟಾಟಾ ಮೋಟಾರ್ಸ್ ಪರಿಚಯಿಸಿದ ಅತ್ಯದ್ಬುತ ಕಾರುಗಳಲ್ಲಿ 'ಟಾಟಾ ಎಸ್ಟೇಟ್' ಕೂಡ ಒಂದು, ಇದನ್ನು 1992 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಕೂಡ ಟಾಟಾ ಟೆಲ್ಕೊಲೈನ್ ಪಿಕಪ್ ಟ್ರಕ್ ಅನ್ನು ಆಧರಿಸಿದ್ದು, ಟ್ಯಾಕೋಮೀಟರ್ ಮತ್ತು ಪವರ್ ವಿಂಡೋಗಳಂತಹ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿತ್ತು. ಇದರ ವಿನ್ಯಾಸವು ಮರ್ಸಿಡಿಸ್ ಬೆಂಝ್ ಸ್ಟೇಷನ್ ವ್ಯಾಗನ್ ವಿನ್ಯಾಸವನ್ನು ಆಧರಿಸಿತ್ತು. ಪ್ಯೂಜೊ ಮೂಲದ 1.9-ಲೀಟರ್ ಡೀಸೆಲ್ ಎಂಜಿನ್ ಹೊಂದಿತ್ತು.

ಟಾಟಾ ಇಂಡಿಕಾ: ಡೀಸೆಲ್ ಎಂಜಿನ್ ಪಡೆದ ಮೊದಲ ಹ್ಯಾಚ್‌ಬ್ಯಾಕ್ ಇಂಡಿಕಾ, ಹಾಗೆಯೇ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಯಾಣಿಕ ಕಾರಾಗಿತ್ತು. ಅನಾವರಣಗೊಂಡ ಒಂದು ವಾರದೊಳಗೆ, ಟಾಟಾ ಇಂಡಿಕಾ 11,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿತ್ತು. 1998 ರಲ್ಲಿ ಬಿಡುಗಡೆಯಾದ ಇಂಡಿಕಾ 2018 ರಲ್ಲಿ ಸ್ಥಗಿತಗೊಂಡಿತು. ಬಳಿಕ, ಟಾಟಾ ಬೋಲ್ಟ್ ಮತ್ತು ಪ್ರಸ್ತುತ ಟಿಯಾಗೊಗೆ ದಾರಿ ಮಾಡಿಕೊಟ್ಟಿತು.

tata-motors-7-iconic-cars-indica-sierra-estate-nano-nexon

ಟಾಟಾ ನ್ಯಾನೋ: ರತನ್ ಟಾಟಾರವರ ಕನಸಿನ ಕೂಸಾಗಿದ್ದ ನ್ಯಾನೋ, ಪ್ರತಿಯೊಬ್ಬ ಭಾರತೀಯನಿಗೂ ಸ್ವಂತ ಕಾರನ್ನು ಹೊಂದುವ ಸಲುವಾಗಿ ಪರಿಚಯಿಸಲಾಗಿತ್ತು. 2008 ರಲ್ಲಿ ಬಿಡುಗಡೆಯಾಗಿ 2018 ರವರೆಗೆ ಉತ್ಪಾದನೆಯಲ್ಲಿತ್ತು, ಕಂಪನಿಯ ನಿರೀಕ್ಷೆಗಳು ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ವಿಫಲವಾಗಿ ಸ್ಥಗಿತಗೊಂಡಿತು. ನ್ಯಾನೋ ಇನ್ನಿಲ್ಲದಿದ್ದರೂ, ರತನ್ ಟಾಟಾ ಅವರು ಮಾತ್ರ ಅದನ್ನು ನಿತ್ಯ ಬಳಸುತ್ತಿದ್ದರು.

ಟಾಟಾ ಮಾಂಜಾ: 2009 ರಲ್ಲಿ ಬಿಡುಗಡೆಯಾಗಿದ್ದ ಮಾಂಜಾವನ್ನು ಐಷಾರಾಮಿ ಸೆಡಾನ್ ಆಗಿ ಮಾರಾಟ ಮಾಡಲಾಯಿತು. ಇದರಲ್ಲಿ ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಡ್ಯಾಶ್-ಇಂಟಿಗ್ರೇಟೆಡ್ ಆಡಿಯೊ ವ್ಯವಸ್ಥೆ, ಡೈಮಂಡ್-ಕಟ್ ಅಲಾಯ್-ವೀಲ್‌ಗಳನ್ನು ಹೊಂದಿತ್ತು. ಇಷ್ಟು ಫೀಚರ್‌ಗಳಿದ್ದರು ಕಾರಣಾಂತರಗಳಿಂದ ಉತ್ಪಾದನೆಯನ್ನು 2016 ರಲ್ಲಿ ಸ್ಥಗಿತಗೊಳಿಸಲಾಯಿತು.

tata-motors-7-iconic-cars-indica-sierra-estate-nano-nexon

ಟಾಟಾ ಸಫಾರಿ: ಸಫಾರಿಯು ಆಧುನಿಕ SUV ಡಿಸೈನ್‌ನೊಂದಿಗೆ ಹಾರ್ಡ್‌ಕೋರ್ ಆಫ್-ರೋಡರ್ ಆಗಿತ್ತು. 1998 ರಲ್ಲಿ ಬಿಡುಗಡೆಯಾಗಿ ಇಂದಿಗೂ ಮುನ್ನುಗ್ಗುತ್ತಿದೆ. ಸಫಾರಿಯನ್ನು ಇತರ ದೇಶಗಳಿಗೂ ರಫ್ತು ಮಾಡಲಾಯಿತು. ಇದು ಆರಂಭದಲ್ಲಿ 2.1-ಲೀಟರ್‌ ಡೀಸೆಲ್ ಎಂಜಿನ್‌ನಿಂದ ಆರಂಭಿಸಿ ಈಗ 3.0-ಲೀಟರ್‌ಗೆ ಬೆಳೆದಿದೆ. 2019 ರಲ್ಲಿ ಹಳೆಯ ಮಾದರಿ ಸ್ಥಗಿತಗೊಂಡು ಹ್ಯಾರಿಯರ್ ಮತ್ತು ಹೊಸ-ಜೆನ್ ಸಫಾರಿ ಹುಟ್ಟಿಕೊಂಡವು.

ಟಾಟಾ ನೆಕ್ಸಾನ್: ಇಂಡಿಕಾದಂತೆ ಪ್ರಸ್ತುತ ಸದ್ದು ಮಾಡುತ್ತಿರುವ ಕಾರೆಂದರು ಅದು ಹೊಸ ನೆಕ್ಸಾನ್, ಇದನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ನೀಡಲಾಗುತ್ತಿದೆ. ಆಟೋ ಉದ್ಯಮದ EV ವರ್ಗದಲ್ಲಿ ಅತೀ ಹೆಚ್ಚು ಮಾರಾಟ ಕಾಣುವ ಕಾರಾಗಿಯೂ ಟಾಟಾ ನೆಕ್ಸಾನ್ ಜನಪ್ರಿಯತೆ ಪಡೆದುಕೊಂಡಿದೆ. ಸುರಕ್ಷತೆಯಲ್ಲೂ ಗರಿಷ್ಟ ಗುಣಮಟ್ಟದೊಂದಿಗೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.

Article Published On: Friday, October 11, 2024, 23:23 [IST]
English summary
Tata motors 7 iconic cars indica sierra estate nano nexon
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+