TATA: ಗಮನಿಸಿ.. ಟಾಟಾದಿಂದ ಮಹತ್ವದ ಘೋಷಣೆ, ಏನದು?

ಟಾಟಾ ಮೋಟಾರ್ಸ್ (Tata Motors), ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಟಿಯಾಗೊ, ಟಿಗೂರ್, ಆಲ್ಟ್ರೋಜ್ ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತುದೆ. ಕಳೆದ ತಿಂಗಳು (ನವೆಂಬರ್-2024) ಕಂಪನಿಯು 47,063 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 39,981 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 2.2% ಪ್ರಗತಿಯಾಗಿದೆ.

ಟಾಟಾ ಕಂಪನಿಯು ಸೋಮವಾರ ಇವಿಗಳು ಸೇರಿದಂತೆ ಎಲ್ಲ ಪ್ರಯಾಣಿಕ ವಾಹನಗಳ (Passenger Vehicles) ಬೆಲೆಯನ್ನು ಶೇಕಡ 3% ವರೆಗೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಈಗಾಗಲೇ, ಆಡಿ, ಮರ್ಸಿಡಿಸ್, ಬಿಎಂಡಬ್ಲ್ಯೂ, ಹ್ಯುಂಡೈ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಕಂಪನಿಗಳು ಸಹ ಎಲ್ಲ ವಾಹನಗಳ ದರವನ್ನು ಏರಿಕೆ ಮಾಡುವುದಾಗಿ ತಿಳಿಸಿವೆ.

Tata Motors Increase Prices Of Passenger Vehicles From January 2025 Tiago to Safari

ಹಣದುಬ್ಬರ ಹಾಗೂ ತಯಾರಿಕಾ ವೆಚ್ಚವನ್ನು ಸರಿದೂಗಿಸಲು ಈ ಬೆಲೆ ಏರಿಕೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ನೂತನ ದರಗಳು 2025ರ ಜನವರಿಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಡಿಸೆಂಬರ್‌ನಲ್ಲಿ ಯಥಾಸ್ಥಿತಿಯಲ್ಲಿ ಬೆಲೆಗಳು ಮುಂದುವರಿಯಲಿದ್ದು, ಹೊಸ ಕಾರುಗಳನ್ನು ಗ್ರಾಹಕರು ಹಳೆಯ ದರಕ್ಕೆ ಖರೀದಿ ಮಾಡಬಹುದು.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮಾರಾಟಗೊಳಿಸುವ ವಿವಿಧ ಕಾರುಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಕಂಪನಿಯ ಟಿಯಾಗೊ (Tiago) ಆರಂಭಿಕ ಶ್ರೇಣಿ ಮಾದರಿ (ಎಂಟ್ರಿ ಲೆವೆಲ್ ಮಾಡೆಲ್) ಆಗಿದೆ. ಇದು ರೂ.5.65 ಲಕ್ಷದಿಂದ ರೂ.8.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಪಡೆದಿದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು.

Tata Motors Increase Prices Of Passenger Vehicles From January 2025 Tiago to Safari

ಟಾಟಾ ಟಿಗೂರ್ (Tata Tigor) ಜನಪ್ರಿಯ ಸೆಡಾನ್ ಆಗಿದ್ದು, ಕನಿಷ್ಠ ರೂ.6 ಲಕ್ಷ ಮತ್ತು ಗರಿಷ್ಠ ರೂ.9.40 (ಎಕ್ಷ ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19.28 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಕಾರಿನಲ್ಲಿಯೂ 5 ಜನರು ಪ್ರಯಾಣಿಸಬಹುದು.

ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ರೂ.6.65 ಲಕ್ಷದಿಂದ ರೂ.11.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಟರ್ಬೊ ಪೆಟ್ರೋಲ್, ಸಿಎನ್‌ಜಿ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಇದರಲ್ಲಿಯೂ 5 ಮಂದಿ ತೆರಳಬಹುದು.

Tata Motors Increase Prices Of Passenger Vehicles From January 2025 Tiago to Safari

ಟಾಟಾ ಹ್ಯಾರಿಯರ್ (Tata Harrier) ಪ್ರಖ್ಯಾತ ಎಸ್‌ಯುವಿಯಾಗಿದೆ. ರೂ.14.99 ಲಕ್ಷದಿಂದ ರೂ.25.89 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರಿನಲ್ಲಿ 5 ಮಂದಿ ಓಡಾಟ ನಡೆಸಬಹುದು.

ಟಾಟಾ ಸಫಾರಿ (Tata Safari) ಫ್ಯಾಮಿಲಿ ಎಸ್‌ಯುವಿ ಆಗಿದ್ದು, ಕನಿಷ್ಠ ರೂ.15.49 ಲಕ್ಷ ಹಾಗೂ ಗರಿಷ್ಠ ರೂ.26.79 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 14.50 ರಿಂದ 16.30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 9, 2024, 17:35 [IST]
English summary
Tata motors increase prices of passenger vehicles from january 2025 tiago to safari
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+