ಟಾಟಾ ಮೋಟಾರ್ಸ್ ಹೊಸ ಒಪ್ಪಂದ... ಇವಿ ವಾಣಿಜ್ಯ ವಾಹನ ಮಾಲೀಕರಿಗೆ ಸಿಹಿ ಸುದ್ದಿ

ದೇಶದಾದ್ಯಂತ 250 ಹೊಸ ವೇಗದ ಚಾರ್ಜಿಂಗ್ ಸ್ಟೇಷನ್‌ (Fast charging station)ಗಳನ್ನು ಸ್ಥಾಪಿಸುವ ಮೂಲಕ ತನ್ನ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಹಯೋಗ ಹೊಂದುತ್ತಿರುವುದಾಗಿ ಟಾಟಾ ಮೋಟಾರ್ಸ್ ಪ್ರಕಟಿಸಿದೆ. ಈ ಮೂಲಕ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ ಮತ್ತು ಕೊಚ್ಚಿ ಸೇರಿದಂತೆ 50 ಕ್ಕೂ ಹೆಚ್ಚು ನಗರಗಳಲ್ಲಿ ಈ ಹೊಸ ಚಾರ್ಜಿಂಗ್ ಸ್ಟೇಷನ್‌ಗಳು ಅಸ್ತಿತ್ವದಲ್ಲಿರುವ 540 ವಾಣಿಜ್ಯ ವಾಹನ ಚಾರ್ಜಿಂಗ್ ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ ಎಂದು ಟಾಟಾ ತಿಳಿಸಿದೆ.

ಏನಿದು ಒಪ್ಪಂದ?: ಟಾಟಾ ಮೋಟಾರ್ಸ್ ಈ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸೂಕ್ತವಾದ ಸ್ಥಳಗಳು ಮತ್ತು ಹತ್ತಿರದ ಡೀಲರ್‌ ಶಿಪ್‌ಗಳನ್ನು ಶಿಫಾರಸು ಮಾಡುತ್ತದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಅಗತ್ಯ ಹಾರ್ಡ್‌ವೇರ್ ಅನ್ನು ಪೂರೈಸುತ್ತದೆ, ಹಾಗೆಯೇ ಥಂಡರ್‌ಪ್ಲಸ್ ಸೊಲ್ಯೂಷನ್ಸ್ ಅವುಗಳನ್ನು ಸ್ಥಾಪಿಸಿ ನಿರ್ವಹಿಸುವುದು ಮೂರು ಕಂಪನಿಗಳ ಒಪ್ಪಂದವಾಗಿದೆ.

tata-motors-signs-mou-with-delta-electronics-and-thunderplus-solutions

ಪ್ರಸ್ತುತ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸುಧಾರಿತ ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಇದೆ. ಈ ನಿಟ್ಟಿನಲ್ಲಿ ಹೊಸ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ ಇ-ಕಾಮರ್ಸ್ ಕಂಪನಿಗಳು, ಪಾರ್ಸೆಲ್ ಮತ್ತು ಕೊರಿಯರ್ ಸೇವಾ ಪೂರೈಕೆದಾರರು ಸೇರಿದಂತೆ ಇತರ ಕೈಗಾರಿಕೆಗಳಲ್ಲಿ ವಾಣಿಜ್ಯ EV ವಾಹನಗಳ ಖರೀದಿಯನ್ನು ಹೆಚ್ಚಿಸುತ್ತವೆ.

ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಬಿಸಿನೆಸ್ ಹೆಡ್ ವಿನಯ್ ಪಾಠಕ್ ಮಾತನಾಡಿ, "ನಮ್ಮ ಪ್ರಯತ್ನವು ಕಾರ್ಬನ್-ಮುಕ್ತ ಸರಕು ಸಾಗಣೆಯನ್ನು ಹೆಚ್ಚಿಸುವುದು ಹಾಗೂ ಹೆಚ್ಚಿನ ಬಳಕೆಯ ಮಾರ್ಗಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದಾಗಿದೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಹಕರಿಗೆ ಆದಾಯ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು.

ಡೆಲ್ಟಾ ಎಲೆಕ್ಟ್ರಾನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಮಾತನಾಡಿ, ಟಾಟಾ ಮೋಟಾರ್ಸ್ ಮತ್ತು ಥಂಡರ್‌ಪ್ಲಸ್‌ನೊಂದಿಗಿನ ಈ ಸಹಯೋಗವು ಭಾರತದ ಎಲೆಕ್ಟ್ರಿಕ್ ಭವಿಷ್ಯಕ್ಕೆ ಗಮನಾರ್ಹ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಸುಧಾರಿತ ಚಾರ್ಜಿಂಗ್ ತಂತ್ರಜ್ಞಾನವು ರಾಷ್ಟ್ರವ್ಯಾಪಿ ಬಳಕೆದಾರರಿಗೆ ಇವಿ ವಾಣಿಜ್ಯ ವಾಹನದ ಅನುಭವವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.

ಥಂಡರ್ ಪ್ಲಸ್ ಸಿಇಒ ರಾಜೀವ್ YSR ಮಾತನಾಡಿ, ನಮ್ಮ ಗಮನವು ಎಲೆಕ್ಟ್ರಿಕ್ ವಾಣಿಜ್ಯ ವಾಹನ ಗ್ರಾಹಕರಿಗೆ ಉನ್ನತ ದರ್ಜೆಯ ಚಾರ್ಜಿಂಗ್ ಪರಿಹಾರಗಳೊಂದಿಗೆ ಅನುಕೂಲ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ. ಚಾರ್ಜ್ ಪಾಯಿಂಟ್ ಅನ್ನು ಪ್ರತಿ ಮನೆಗೆ ಕೈಗೆಟುಕುವಂತೆ ಮಾಡುವುದು ಈ ಸಹಯೋಗದ ಗುರಿಯಾಗಿದೆ ಎಂದರು.

ಟಾಟಾ ಮೋಟಾರ್ಸ್ ಪ್ರಸ್ತುತ ವಾಣಿಜ್ಯ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ Ace EV ಅನ್ನು ಒದಗಿಸುತ್ತಿದೆ. ಇದು ಸುಧಾರಿತ ನಾಲ್ಕು-ಚಕ್ರದ ಇ-ಕಾರ್ಗೋ ವಾಹನವಾಗಿದ್ದು, ದೇಶಾದ್ಯಂತ 150 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸೇವಾ ಕೇಂದ್ರಗಳಲ್ಲಿ ಲಭ್ಯವಿದೆ. ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಮ್ ಮತ್ತು ಉತ್ತಮ-ವರ್ಗದ ಅಪ್‌ಟೈಮ್‌ಗಾಗಿ ದೃಢವಾದ ಸಮುಚ್ಚಯಗಳನ್ನು ಹೊಂದಿದೆ.

Tata UniEVerse ನ ಅಪಾರ ಸಾಮರ್ಥ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡು, Ace EVಯು ಸಂಬಂಧಿತ ಟಾಟಾ ಗ್ರೂಪ್ ಕಂಪನಿಗಳ ಸಹಯೋಗದಿಂದ ಉತ್ತಮ ಜನಪ್ರಿಯತೆ ಪಡೆದಿದೆ. ಹೊಸ Ace EV ಅನ್ನು ದೇಶಾದ್ಯಂತ ಎಲ್ಲಾ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಡೀಲರ್‌ಶಿಪ್‌ಗಳಲ್ಲಿ ಖರೀದಿಸಬಹುದು ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

Article Published On: Thursday, August 22, 2024, 12:48 [IST]
English summary
Tata motors signs mou with delta electronics and thunderplus solutions
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+