ಮಾರುಕಟ್ಟೆ ಶೇಕ್: 24 Km ಮೈಲೇಜ್, ಗೇಮ್-ಚೇಂಜಿಂಗ್ ಫೀಚರ್ಸ್‌ಗಳೊಂದಿಗೆ ಬಂದ ಹೊಸ ಟಾಟಾ ಕಾರು
ಗರಿಷ್ಟ ಗುಣಮಟ್ಟದ ಕಾರುಗಳ ನಿರ್ಮಾಣ ಕಂಪನಿಯಾಗಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಐಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಸಿಎನ್‌ಜಿ ವಿಭಾಗದಲ್ಲಿ ಸದ್ಯ ದೇಶದ ಅತಿದೊಡ್ಡ ಕಾರು ಮಾರುತಿ ಸುಜುಕಿಯು ಅಗ್ರಸ್ಥಾನದಲ್ಲಿದೆ. ಇದಕ್ಕೆ ಪೈಪೋಟಿ ನೀಡಿ ಸಿಎನ್‌ಜಿ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಟಾಟಾ ಕಂಪನಿಯು ಸಜ್ಜಾಗುತ್ತಿದೆ. ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ (Tata Nexon CNG) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9 ಲಕ್ಷದಿಂದ ರೂ.14.50 ಲಕ್ಷವಾಗಿದೆ.ಈ ಟಾಟಾ ನೆಕ್ಸಾನ್ ಐಸಿಎನ್‌ಜಿ ಕಾರು ಐದು ಗೇಮ್-ಚೇಂಜಿಂಗ್ ಫೀಚರ್ಸ್‌ಗಳನ್ನು ಹೊಂದಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಎಂಜಿನ್: ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿಯಲ್ಲಿ 1.2-ಲೀಟರ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 100 hp ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನೆಕ್ಸಾನ್ ಪೆಟ್ರೋಲ್ ಮಾದರಿಗಿಂತ 20 hp ಪವರ್ ಕಡಿಮೆ ಆದರೆ ಟಾರ್ಕ್‌ನಲ್ಲಿ ಹೊಂದಾಣಿಕೆಯಾಗುತ್ತದೆ. ಈ ಎಂಜಿನ್ ನೊಂದಿಗೆ ಪ್ರಸ್ತುತ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಿದೆ. ಈ ಮಾದರ್ಯು 24 ಕಿ.ಮೀ ಮೈಲೇಜ್ ನೀಡುತ್ತದೆ.

6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್: ಟಾಟಾ ಮೋಟಾರ್ಸ್ ನೆಕ್ಸಾನ್ ಸಿಎನ್‌ಜಿಯ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಆರು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಜ್ಜುಗೊಳಿಸಿದೆ, ಇದು ಭಾರತದಲ್ಲಿ ಸಿಎನ್‌ಜಿ ವಾಹನಗಳಿಗೆ ಮೊದಲನೆಯದು. ಆದರೆ ಟಿಯಾಗೊ ಸಿಎನ್‌ಜಿ ಮತ್ತು ಟಿಗೊರ್ ಸಿಎನ್‌ಜಿಯಲ್ಲಿ ಲಭ್ಯವಿರುವಂತೆಯೇ ನೆಕ್ಸಾನ್ ಸಿಎನ್‌ಜಿಗೆ ಟಾಟಾ ಎಎಮ್‌ಟಿ ಟ್ರಾನ್ಸ್‌ಮಿಷನ್ ಅನ್ನು ಸಹ ನೀಡಿದ್ದರೆ ಅದು ಉತ್ತಮವಾಗಿರುತ್ತದೆ.
10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್: ಟಾಟಾ ನೆಕ್ಸಾನ್ ಬಣ್ಣದ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಮೊದಲ CNG ವಾಹನವಾಗಿದೆ. ಬಹು ವೀಕ್ಷಣಾ ವಿಧಾನಗಳು ಮತ್ತು ಗ್ರಾಹಕೀಕರಣ ಆಯ್ಕೆಗಳನ್ನು ನೀಡುವುದರಿಂದ, Apple CarPlay ಮತ್ತು Android Auto ಬಳಸುವಾಗ ಡಿಸ್ ಪ್ಲೇ ಯಲ್ಲಿ ನ್ಯಾವಿಗೇಶನ್ ಅನ್ನು ಪ್ರದರ್ಶಿಸುತ್ತದೆ.

ವೆಂಟಿಲೇಟೆಡ್ ಫ್ರಂಟ್ ಸೀಟುಗಳು: ಟಾಟಾ ನೆಕ್ಸಾನ್ ಸಿಎನ್‌ಜಿಯ ಮತ್ತೊಂದು ಉತ್ತಮ ವೈಶಿಷ್ಟ್ಯವೆಂದರೆ ಈ ಕಾರಿನಲ್ಲಿ ವೆಂಟಿಲೆಟಡ್ ಫ್ರಂಟ್ ಸೀಟುಗಳನ್ನು ಹೊಂದಿವೆ. ಇದು ದೂರದ ಪ್ರಯಾಣದಲ್ಲಿ ಹೆಚ್ಚು ಉಪಯುಕ್ತವಾಗಿದೆ. ಅಲ್ಲದೇ ಬೆಸಿಗೆ ಕಾಲದಲ್ಲಿ ನೀವು ಪ್ರಯಾಣಿಸುವಾಗ ಹೆಚ್ಚು ಪ್ರಯೋಜನೆಕಾರಿಯಾಗಿದೆ. ಗ್ರಾಹಕರನ್ನು ಸೆಳೆಯಲು ಈ ಫೀಚರ್ ಹೆಚ್ಚು ಉಪಯುಕ್ತವಾಗಿದೆ.
ಪನೋರಮಿಕ್ ಸನ್‌ರೂಫ್: ಟಾಟಾ ನೆಕ್ಸಾನ್ ಐಸಿಎನ್‌ಜಿ ಕಾರು ಖರೀದಿದಾರರು ಇನ್ನು ಮುಂದೆ ತಮ್ಮ ಪೆಟ್ರೋಲ್ ಕೌಂಟರ್‌ಪಾರ್ಟ್‌ಗಳಿಗೆ ಹೋಲಿಸಿದರೆ ಅದೇ ರೀತಿಯ ಫೀಚರ್ಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಟಾಟಾ ನೆಕ್ಸಾನ್ ಸಿಎನ್‌ಜಿ ಈಗ ಹೆಚ್ಚು ಇಷ್ಟಪಡುವ ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಇದು ಚಾಲನಾ ಅನುಭವಕ್ಕೆ ಮತ್ತಷ್ಟು ಐಷಾರಾಮಿ ಟಚ್ ನೀಡುತ್ತದೆ.

ಈ ಐದು ದೊಡ್ಡ ಸೇರ್ಪಡೆಗಳ ಹೊರತಾಗಿ, Nexon CNG 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ನೆಕ್ಸಾನ್ CNG ಟಾಟಾದ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ, ಇದು 321 ಲೀಟರ್ ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications