Tata: ಶೋರೂಂಗೆ ಬಂತು ಕಲ್ಲು ಬಂಡೆಯಂತಿರುವ ಟಾಟಾ ನೆಕ್ಸಾನ್‌ ಸಿಎನ್‌ಜಿ ಕಾರು.. 24 Km ಮೈಲೇಜ್, ಬೆಲೆ ಇಷ್ಟೇನಾ?

ಟಾಟಾ ಮೋಟಾರ್ಸ್ (Tata Motors), ಸುರಕ್ಷಿತ ಕಾರು ತಯಾರಿಕೆಗೆ ಹೆಸರುವಾಸಿಯಾಗಿದೆ. ಈ ವರ್ಷ ವಿವಿಧ ಹೊಚ್ಚ ಹೊಸ ಕಾರುಗಳನ್ನು ಮಾರಾಟಕ್ಕೆ ತಂದಿದೆ. ಕೆಲವೇ ದಿನಗಳ ಹಿಂದೆ, ಗರಿಷ್ಠ ಮೈಲೇಜ್ ನೀಡುವ ನೆಕ್ಸಾನ್‌ ಸಿಎನ್‌ಜಿ (Nexon CNG) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಸದ್ಯ, ದೇಶಾದ್ಯಂತ ಹಲವು ಶೋರೂಂಗಳಿಗೆ ಈ ಕಾರನ್ನು ತಲುಪಿಸುವ ಕಾರ್ಯಕ್ಕೆ ಕಂಪನಿ ಚಾಲನೆ ನೀಡಿದೆ. ನೂತನ ಕಾರನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

ಹೊಸ ಟಾಟಾ ನೆಕ್ಸಾನ್‌ ಸಿಎನ್‌ಜಿ (Tata Nexon CNG) ಎಸ್‌ಯುವಿ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಕಾರು, ರೂ.8.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್ ಮತ್ತು ಫಿಯರ್‌ಲೆಸ್ ಪ್ಲಸ್ ಎಸ್ ಎಂಬ ಆಕರ್ಷಕ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ.

Tata Nexon CNG Car Starts Reaching Showrooms 24 Km Mileage 5 Seater Details

ಈ ಟಾಟಾ ನೆಕ್ಸಾನ್‌ ಸಿಎನ್‌ಜಿ ಕಾರು 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 99 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 170 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ನೂತನ ಟಾಟಾ ನೆಕ್ಸಾನ್‌ ಸಿಎನ್‌ಜಿ ಎಸ್‌ಯುವಿ 24 ಕೆಎಂ/ಕೆಜಿವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಯಬಹುದು. ಈ ಕಾರು, ಡುಯಲ್-ಸಿಲಿಂಡರ್ ತಂತ್ರಜ್ಞಾನ (ಟೆಕ್ನಲಾಜಿ) ಹೊಂದಿದ್ದರೂ ಸಹ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 321 ಲೀಟರ್‌ನ ಬೂಟ್ ಸ್ಪೇಸ್‌ನ್ನು ಹೊಂದಿದೆ.

Tata Nexon CNG Car Starts Reaching Showrooms 24 Km Mileage 5 Seater Details

ನೆಕ್ಸಾನ್‌ ಸಿಎನ್‌ಜಿ ಎಸ್‌ಯುವಿಯು ಹೊರಭಾಗದ ವಿನ್ಯಾಸ (ಡಿಸೈನ್) ಇಂಧನ ಚಾಲಿತ ನೆಕ್ಸಾನ್‌ ಕಾರಿನಂತೆಯೇ ಇದೆ. ಆದರೂ ಈ ಕಾರು ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ಬ್ಲೈಂಡ್ ಸ್ಪಾಟ್, ಬ್ಲೈಂಡ್ ಸ್ಪಾಟ್ ಮಾನಿಟರ್‌, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಇಂಧನ ಚಾಲಿತ ಟಾಟಾ ನೆಕ್ಸಾನ್‌ ಎಸ್‌ಯುವಿ ರೂ.8 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು) ಮತ್ತು ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು) ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Tata Nexon CNG Car Starts Reaching Showrooms 24 Km Mileage 5 Seater Details

ಟಾಟಾ ನೆಕ್ಸಾನ್‌ ಇವಿ (Tata Nexon EV) ಕೂಡ ಖರೀದಿಗೆ ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರು ರೂ.12.49 ರಿಂದ ರೂ.17.19 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 40.5 ಹಾಗೂ 46.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 390 ರಿಂದ 489 ಕಿಲೋಮೀಟರ್‌ವರೆಗೆ ಓಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 8, 2024, 12:50 [IST]
English summary
Tata nexon cng car starts reaching showrooms 24 km mileage 5 seater details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+