ನಂ.1 ಕಂಪನಿಗೆ ನಡುಕ ಹುಟ್ಟಿಸಿದ ರತನ್ ಟಾಟಾ ಬ್ರ್ಯಾಂಡ್: ಸಿಎನ್‌ಜಿ ವಿಭಾಗದಲ್ಲೂ ಅಗ್ರಸ್ಥಾನಕ್ಕೇರುತ್ತಾ?
ಗರಿಷ್ಟ ಗುಣಮಟ್ಟದ ಕಾರುಗಳ ನಿರ್ಮಾಣ ಕಂಪನಿಯಾಗಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಐಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇತರ ಸಿಎನ್‌ಜಿ-ಚಾಲಿತ ಎಸ್‌ಯುವಿಗಳಿಗಿಂತ ಹೆಚ್ಚು ಪವರ್ ಫುಲ್ ಆಗಿದೆ. ಐಸಿಎನ್‌ಜಿ ವಿಭಾಗದಲ್ಲಿ ಸದ್ಯ ದೇಶದ ಅತಿದೊಡ್ಡ ಕಾರು ಮಾರುತಿ ಸುಜುಕಿಯು ಅಗ್ರಸ್ಥಾನದಲ್ಲಿದೆ. ಇದಕ್ಕೆ ಪೈಪೋಟಿ ನೀಡಿ ಸಿಎನ್‌ಜಿ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಟಾಟಾ ಕಂಪನಿಯು ಸಜ್ಜಾಗುತ್ತಿದೆ. ಹೊಸದಾಗಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಐಸಿಎನ್‌ಜಿ (Tata Nexon CNG) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9 ಲಕ್ಷದಿಂದ ರೂ.14.50 ಲಕ್ಷವಾಗಿದೆ.
ಈ ಟಾಟಾ ನೆಕ್ಸಾನ್ ಐಸಿಎನ್‌ಜಿ ಮಾದರಿಯು ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು CNG ತಂತ್ರಜ್ಞಾನದ ಪರಿಚಯವು ಈಗ ಈ ಎಸ್‍ಯುವಿಗೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಲಿದೆ. ಟಾಟಾ ಮೋಟಾರ್ಸ್ ತನ್ನ ಸಿಎನ್‌ಜಿ-ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ತನ್ನ ಒಟ್ಟಾರೆ ಮಾರಾಟದ ಸುಮಾರು 21 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಮತ್ತು ನೆಕ್ಸಾನ್ ಈಗ ಪರ್ಯಾಯ ಇಂಧನ ಆಯ್ಕೆಯೊಂದಿಗೆ ಬರಲು ಇದು ಪ್ರಾಥಮಿಕ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಪವರ್‌ಟ್ರೇನ್: ಟಾಟಾ ನೆಕ್ಸಾನ್ ಐಸಿಎನ್‌ಜಿ ಮಾದರಿಯಲ್ಲಿ 1.2-ಲೀಟರ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 100 hp ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನೆಕ್ಸಾನ್ ಪೆಟ್ರೋಲ್ ಮಾದರಿಗಿಂತ 20 hp ಪವರ್ ಕಡಿಮೆ ಆದರೆ ಟಾರ್ಕ್‌ನಲ್ಲಿ ಹೊಂದಾಣಿಕೆಯಾಗುತ್ತದೆ. ಈ ಎಂಜಿನ್ ನೊಂದಿಗೆ ಪ್ರಸ್ತುತ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಿದೆ. ಈ ಮಾದರ್ಯು 24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಬೂಟ್ ಸ್ಪೇಸ್: ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿಯಲ್ಲಿ ಬೂಟ್ ಸ್ಪೇಸ್ ಅದರ ಪೆಟ್ರೋಲ್ ಪ್ರತಿರೂಪಕ್ಕೆ ಹೋಲಿಸಿದರೆ ಕೇವಲ 61 ಲೀಟರ್ ಗಳಷ್ಟು ಬೂಟ್ ಸ್ಪೇಸ್ ಕಡಿಮೆಯಾಗಿದೆ. ಟಾಟಾದ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ. ಈ ಟಾಟಾ ನೆಕ್ಸಾನ್ ಸಿಎನ್‌ಜಿ ಎಸ್‍ಯುವಿಯಲ್ಲಿ 321 ಲೀಟರ್ ಬೂಟ್ ಸಾಮರ್ಥ್ಯವನ್ನು ಹೊಂದಿದೆ. ಇದು 60-ಲೀಟರ್ CNG ಟ್ಯಾಂಕ್ ಅನ್ನು ಹೊಂದಿದೆ.

ರೂಪಾಂತರಗಳು ಮತ್ತು ಬೆಲೆಗಳು: ಟಾಟಾ ನೆಕ್ಸಾನ್ iCNG ಮಾದರಿಯು ಸ್ಮಾರ್ಟ್ (O), Smart +, Smart +S, ಪ್ಯೂರ್, ಪ್ಯೂರ್ S, ಕ್ರಿಯೇಟಿವ್, ಕ್ರಿಯೇಟಿವ್ + ಮತ್ತು ಫಿಯರ್‌ಲೆಸ್ + PS ಎಂಬ ಎಂಟು ರೂಪಾಂತರಗಳಲ್ಲಿ ಲಭ್ಯವಿದೆ. ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿಯ ಪ್ಯೂರ್ ರೂಪಾಂತರದ ಬೆಲೆಯು ರೂ.10.69 ಲಕ್ಷವಾದರೆ ಪ್ಯೂರ್ ಎಸ್ ರೂಪಾಂತರದ ಬೆಲೆಯು ರೂ.11 ಲಕ್ಷವಾಗಿದೆ.
ಇದರ ನಂತರ ಕ್ರಿಯೇಟಿವ್ ರೂಪಾಂತರದ ಬೆಲೆಯು ರೂ.11.69 ಲಕ್ಷ ಮತ್ತು ಕ್ರಿಯೇಟಿವ್ + ರೂಪಾಂತರದ ಬೆಲೆಯು ರೂ.12.19 ಲಕ್ಷವಾಗಿದೆ. ಇನ್ನು ಈ ನೆಕ್ಸಾನ್ ಸಿಎನ್‌ಜಿ ಮಾದರಿಯ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.14.50 ಲಕ್ಷವಾಗಿದೆ. ಬೆಲೆಗಳು ನೋಡಿದರೆ ಇದು ಹೆಚ್ಚು ದುಬಾರಿಯಾಗಿಲ್ಲ. ಗ್ರಾಹಕರನ್ನು ಸೆಳೆಯಬಹುದಾದ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ಫೀಚರ್ಸ್: ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿಯು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನ್ಯಾವಿಗೇಷನ್‌ನೊಂದಿಗೆ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಅಸಿಸ್ಟ್ ಪನರೊಮಿಕ್ ಸನ್‌ರೂಫ್, ಮುಂಭಾಗ ವಿಂಟಿಲೆಟಡ್ ಸೀಟುಗಳು ಮತ್ತು ಕ್ಲೈಮೆಂಟ್ ಕಂಟ್ರೋಲ್ ಯುನಿಟ್ ಅನ್ನು ಒಳಗೊಂಡಿದೆ. ಬೆಲೆಗೆ ಸಂಬಂಧಿಸಿದಂತೆ, ನೆಕ್ಸಾನ್ ಸಿಎನ್‌ಜಿಯು ಮಾರುತಿ ಬ್ರೆಝಾ, ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ ಎಕ್ಸ್‌ಟರ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಂತಹ ಇತರ ಸಿಎನ್‌ಜಿ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.
ಸೇಫ್ಟಿ ಫೀಚರ್ಸ್: ಸುರಕ್ಷತೆಗಾಗಿ ರೈನ್ ಸೆನ್ಸಾರ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಎಬಿಎಸ್ ಮತ್ತು ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, ಆಟೋ ಡಿಮ್ಮಿಂಗ್ ಐಆರ್‌ವಿಎಂಗಳು ಮತ್ತು ಎ ಜೊತೆಗೆ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ.


Click it and Unblock the Notifications