ಸೇಫ್ಟಿಯಲ್ಲಿ ಗರಿಷ್ಟ ಅಂಕ: ಹೊಸ ಕಾರು ಕೊಳ್ಳುವವರಿಗೆ ಭರ್ಜರಿ ಡಿಸ್ಕೌಂಟ್... ಇದು ಟಾಟಾದ ಹೊಸ ಅಧ್ಯಾಯ!
ಭಾರತದ ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಟಾಟಾ ಮೋಟಾರ್ಸ್‌ನ ಪ್ರಸಿದ್ದ ಕಾರು ಮಾದರಿಗಳಲ್ಲಿ ಟಾಟಾ ಟೊಯಾಗೋ ಮತ್ತು ಟಾಟಾ ನೆಕ್ಸಾನ್ ಇವಿ ಸಹ ಹೌದು. ಇದರಲ್ಲಿ ಟಾಟಾ ನೆಕ್ಸ್ಆನ್ ಇವಿ, ಸದ್ಯಕ್ಕೆ ಕಾಂಪಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಭಾರತದಲ್ಲಿ ಮಾರಾಟವಾಗುವ ಅತ್ಯಂತ ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಸಹ ಒಂದು. ನಿಮಗೆ ತಿಳಿದಿರುವಂತೆ ಟಾಟಾ ನೆಕ್ಸಾನ್ ಕಾರು ಮಾದರಿಯು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಸೇರಿದಂತೆ ಮೂರು ಮಾದರಿಯಲ್ಲಿ ಸಹ ಲಭ್ಯವಿದೆ.
ಇದೀಗ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್‌ಗೆ (TATA Nexon EV) ಕಂಪನಿ ಭಾರೀ ಡಿಸ್ಕೌಂಟ್ ಅನ್ನು ಕಂಪನಿ ನೀಡುತ್ತಿದೆ. ಮಾಹಿತಿಗಳ ಪ್ರಕಾರ ಕಂಪನಿಯು 2023 ಮತ್ತು 2024 ಎರಡೂ ವರ್ಷದ ಮಾಡೆಲ್‌ಗಳಿಗೆ ಸುಮಾರು ರೂ. 60,000 ದಿಂದ1.35 ಲಕ್ಷ ರೂಗಳವರೆಗೆ ಡಿಸ್ಕೌಂಟ್ ಸಿಗುತ್ತಿದ್ದು, ಗ್ರಾಹಕರು ಅದಕ್ಕೆ ತಕ್ಕದಾಗಿ ಮಾಡೆಲ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

2023 ರ ಮಾಡೆಲ್‌ಗಳಿಗೆ ಸುಮಾರು ರೂ1.35 ಲಕ್ಷ ರೂಗಳ ಡಿಸ್ಕೌಂಟ್ ಅನ್ನು ಕಂಪನಿ ಈ ತಿಂಗಳೂ ನೀಡುತ್ತಿದೆ. ಅದೇ ೨೦೨೪ರ ಮಾಡೆಲ್‌ಗಳಿಗೆ ರೂ ೮೫ ಸಾವಿರ ವರೆಗೆ ಡಿಸ್ಕೌಂಟ್ ಸಿಗುತ್ತದೆ. ಈ ಟಾಟಾ ನೆಕ್ಸಾನ್ ಇವಿಯನ್ನು ಭಾರತ್ NCAP (Bharat NCAP) ಕ್ರ್ಯಾಶ್-ಟೆಸ್ಟ್ ಮಾಡಿದೆ ಮತ್ತು ಐದು ಸ್ಟಾರ್ ಗಳ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇದು ಹ್ಯಾರಿಯರ್, ಸಫಾರಿ ಮತ್ತು ಪಂಚ್ ಇವಿ ನಂತರ ಸ್ವದೇಶಿ ಕ್ರ್ಯಾಶ್ ಪರೀಕ್ಷೆಗೆ ಒಳಪಡುವ ನಾಲ್ಕನೇ ಮಾದರಿಯಾಗಿದೆ.
ನಡೆಸಲಾದ ಎರಡು ಟೆಸ್ಟ್ ಗಳು 'ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್' ಅನ್ನು ಒಳಗೊಂಡಿವೆ, ಇದರಲ್ಲಿ ಎಲೆಕ್ಟ್ರಿಕ್ ಎಸ್‍ಯುವಿ 16 ರಲ್ಲಿ 14.26 ಅಂಕಗಳನ್ನು ಗಳಿಸಿತು ಮತ್ತು 'ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್', ಅಲ್ಲಿ ಅದು 16 ರಲ್ಲಿ 15.60 ಅಂಕಗಳನ್ನು ಗಳಿಸಿತು. ಇನ್ನು ಕ್ರ್ಯಾಶ್-ಟೆಸ್ಟ್‌ನಲ್ಲಿ ಮಕ್ಕಳ ವಿಭಾಗಕ್ಕೆ ಸಂಬಂಧಿಸಿದಂತೆ, ನೆಕ್ಸಾನ್ ಇವಿಯು 23.95 ಡೈನಾಮಿಕ್ ಸ್ಕೋರ್ ಗಳಿಸಿದೆ.

ಮುಂಬರುವ ದಿನಗಳಲ್ಲಿ ಈ ಕಾರಿಗೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಬಹುದು. ಈ ಟಾಟಾ ನೆಕ್ಸಾನ್ ಇವಿ ಮಾದರಿಯು ಎಂಆರ್ ರೂಪಾಂತರ 30 kWh ಹಾಗೂ ಎಲ್ಆರ್ ರೂಪಾಂತರ 40.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಈ ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಕ್ರಮವಾಗಿ, 127 bhp ಹಾಗೂ 143 bhp ಗರಿಷ್ಠ ಪವರ್, 215 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರು, ಇಕೋ, ಸಿಟಿ ಹಾಗೂ ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದ್ದು, ಎಂಆರ್ ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 325 km ಮತ್ತು ಎಲ್ಆರ್ ರೂಪಾಂತರ 465 km ರೇಂಜ್ ನೀಡುತ್ತದೆ. ನೆಕ್ಸಾನ್ ಇವಿ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇವೆರೆಡು ಕಾರುಗಳ ಬ್ಯಾಟರಿ ಪ್ಯಾಕ್, 10-80% ಚಾರ್ಜ್ ಆಗಲು 56 ನಿಮಿಷ ಬೇಕಾಗುತ್ತದೆ. ಅದೇ ಮನೆಯ ವಿದ್ಯುತ್ ಬಳಕೆಯಲ್ಲಿ 10 ಗಂಟೆಗೂ ಹೆಚ್ಚಿನ ಕಾಲಾವಕಾಶ ಬೇಕು.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ವಿನ್ಯಾಸ ದೃಷ್ಟಿಯಿಂದ ಆಕರ್ಷಕ ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ ಸ್ಟ್ರಿಪ್ ಅನ್ನು ಪಡೆದಿದೆ. ಈ ಟಾಟಾ ನೆಕ್ಸಾನ್ ಇವಿ, ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್ ಫ್ಲೇಮ್ ರೆಡ್ ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ತಮ್ಮ ಮೆಚ್ಚಿನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications