20 ಲಕ್ಷ ಮಾರಾಟವಾದ ಈ ಟಾಟಾ ಕಾರು: ಹೊಸದಾಗಿ ಕೊಳ್ಳುವವರಿಗೆ ಭರ್ಜರಿ ಉಡುಗೊರೆ ಕೊಡುತ್ತಿರುವ ಟಾಟಾ!
ಭಾರತದಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ಈಚೆಗೆ ಟಾಟಾ ಮೋಟಾರ್ಸ್ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸೃಷ್ಟಿಸಿರುವ ಅಲೆ ಏನೆಂಬುದು ಎಲ್ಲರಿಗೂ ಗೊತ್ತು. ಇದನ್ನು ಒಂದು ಗಾದೆ ಮಾತಿನ ಜೊತೆ ಬೆರೆಸಿ ಹೇಳುವುದಾದರೆ, ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಇದಕ್ಕೆ ಒಂದು ಪ್ರಮುಖ ಉದಾಹರಣೆಯನ್ನು ತೆಗೆದುಕೊಳ್ಳುವಾಗ ಟಾಟಾ ನೆಕ್ಸಾನ್ ಬಗ್ಗೆ ಮಾತನಾಡಬೇಕು. ಫೈವ್ ಸ್ಟಾರ್ ರೇಟಿಂಗ್, ಅತ್ಯಾಧುನಿಕ ಫೀಚರ್‌ಗಳು ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಹೊಂದಿರುವ ಈ ಕಾರನ್ನು ಕೊಳ್ಳುವವರಿಗೆ ಟಾಟಾ ಇದೀಗ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದು, ಅದೇನೆಂದು ನೋಡೋಣ.
2017ರಲ್ಲಿ ದೇಶೀಯ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಗೆ ಟಾಟಾ ನೆಕ್ಸಾನ್ (Nexon) ಅನ್ನು ಪರಿಚಯಿಸಿದ್ದು ಭಾರೀ ಖ್ಯಾತಿ ಗಳಿಸಿದೆ. ಇಲ್ಲಿಯತನಕ ಈ ಕಾರು ಸುಮಾರು ೨ ಮಿಲಿಯನ್ ಅಥವಾ ಇಪ್ಪತ್ತು ಲಕ್ಷಕ್ಕೂ ಅಧಿಕ ಯೂನಿಟ್ ಮಾರಾಟವಾಗಿರುವ ಹಿನ್ನಲೆಯಲ್ಲಿ ಕಾರಿಗೆ ಕಂಪನಿಯು ಭರ್ಜರಿ ಆಫರ್ ಅನ್ನು ನೀಡುತ್ತಿದೆ.

ಇಪ್ಪತ್ತು ಲಕ್ಷಕ್ಕೂ ಅಧಿಕ ಮಾರಾಟವಾದ ಹಿನ್ನಲೆಯಲ್ಲಿ ಕಂಪನಿ ಹೊಸ ನೆಕ್ಸಾನ್ ಕಾರು ಕೊಳ್ಳುವವರಿಗೆ ನೀಡುತ್ತಿರುವ ಕೊಡುಗೆ ಏನೆಂದು ತಿಳಿದರೆ ನೀವು ಅವಕ್ಕಾಗುವುದು ಖಂಡಿತ. ಹೌದು, ಟಾಟಾ ಕಂಪನಿಯು ಇದೀಗ ಈ ಕಾರಿನ ಬೆಲೆಯನ್ನು ಕಂಪನಿ ಸುಮಾರು 7.99 ಲಕ್ಷದಿಂದ ಆರಂಭಿಸಿದ್ದು, ಸುಮಾರು ಒಂದು ಲಕ್ಷದವರೆ ಇತರ ಬೆನಿಫಿಟ್‌ಗಳನ್ನು ಕಂಪನಿ ಉಚಿತವಾಗಿ ನೀಡುತ್ತಿದೆ.
ನೆಕ್ಸಾನ್ ಎಸ್‌ಯುವಿ, ರಸ್ತೆಯಲ್ಲಿ ಹೋಗುವಾಗ, ಒಂದು ಕ್ಷಣ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುವಂತಹ ನೋಟವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಸಾಕಷ್ಟು ಬದಲಾವಣೆಗಳನ್ನು ಪಡೆದಿದೆ. ನೆಕ್ಸಾನ್‌ನ ಹೊರಭಾಗದ ವಿನ್ಯಾಸವೂ ಬಹುತೇಕ ಕಂಪನಿಯ ಕರ್ವ್ವ್ (Curvv) ಕಾನ್ಸೆಪ್ಟ್ ಕಾರಿಗೆ ಹೋಲಿಕೆಯಾಗುತ್ತದೆ.

ನವೀಕರಿಸಿದ ನೆಕ್ಸಾನ್ ಎಸ್‌ಯುವಿ, ಅತ್ಯಾಕರ್ಷಕ ಹೆಡ್‌ಲ್ಯಾಂಪ್ಸ್ ಹೊಂದಿದ್ದು, ಟರ್ನ್ ಸಿಗ್ನಲ್‌ಗಳಾಗಿ ಎಲ್‌ಇಡಿ ಡಿಆರ್‌ಎಲ್‌ಗಳು ಕಾರ್ಯನಿರ್ವಹಿಸುತ್ತವೆ. ಮುಂಭಾಗ, ಬಂಪರ್‌ನ ಕೆಳಭಾಗದಲ್ಲಿ ನೂತನವಾಗಿರುವ ದೊಡ್ಡದಾದ ಗ್ರಿಲ್‌ಯಿದೆ. ಬಂಪರ್‌ನ ಎರಡು ಬದಿಯಲ್ಲಿರುವ ಸಿ - ಆಕಾರದ ಸ್ಥಳದಲ್ಲಿ ಹೆಡ್‌ಲ್ಯಾಂಪ್ಸ್ ಇದ್ದು, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡ ಕಾಣಬಹುದು.
ಈ ನೆಕ್ಸಾನ್ ಕಾರು, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ, ಡೇಟೋನಾ ಗ್ರೇ ಮತ್ತು ಫ್ಲೇಮ್ ರೆಡ್. ಮುಖ್ಯವಾಗಿ, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಬಣ್ಣಗಳನ್ನು ಹೊಂದಿರುವ ಕಾರು, ವೈಟ್ ಅಥವಾ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಸಿಗುತ್ತದೆ.

ಪ್ರಿಸ್ಟಿನ್ ವೈಟ್ ಹಾಗೂ ಫಿಯರ್‌ಲೆಸ್ ಪರ್ಪಲ್ ಬಣ್ಣವನ್ನು ಪಡೆದಿರುವ ಕಾರು, ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಮಾತ್ರ ದೊರೆಯುತ್ತದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ. ಸೀದಾ ಕ್ಯಾಬಿನ್ ಒಳಭಾಗಕ್ಕೆ ಹೋಗೋಣ. ಇಲ್ಲಿನ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಪಡೆದಿದೆ. ಡ್ಯಾಶ್ ಬೋರ್ಡ್ ಥ್ರೀ ಲೇಯರ್ಡ್, ಥ್ರೀ ಟೋನ್ ಸೆಟಪ್ ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್, ಎಮರ್ಜೆನ್ಸಿ ಹಾಗೂ ಬ್ರೇಕ್ ಡೌನ್ ಕಾಲ್ ಅಸ್ಸಿಸ್ಟನ್ಸ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.
ನೆಕ್ಸಾನ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಅಥವಾ 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಅಥವಾ 7 ಸ್ವೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಕಾರು, 113.3 bhp ಪವರ್ ಮತ್ತು 260 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಈ ಮೂಲಕ ಅತ್ಯಂತ ಪವರ್ ಫುಲ್ ಆಗಿದೆ.


Click it and Unblock the Notifications