ರತನ್ ಟಾಟಾರ ಹೆಸರುಳಿಸಿದ ನೆಕ್ಸಾನ್: ಮತ್ತೊಮ್ಮೆ 5-ಸ್ಟಾರ್ ರೇಟಿಂಗ್, ಪ್ರತಿಸ್ಪರ್ಧಿಗಳಿಗೆ ನಡುಕ!
ಭಾರತದಲ್ಲಿ ಸುರಕ್ಷಿತ ವಾಹನಗಳೆಂದರೆ ಸಾಕು ಮೊದಲು ನೆನಪಾಗುವ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ (Tata Motors) ಗುರ್ತಿಸಿಕೊಂಡಿದೆ. ಬ್ರಾಂಡ್‌ನ ಈ ಮಟ್ಟದ ಬೆಳವಣಿಗೆಗೆ ರತನ್ ಟಾಟಾ ಅವರ ಶ್ರಮ ತುಂಬಾ ಇದೆ. ಆದ್ರೆ ಟಾಟಾ ಅವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಅವರು ಇಲ್ಲದಿದ್ದರೂ ಅವರ ಕಾರುಗಳು ಮಾತ್ರ ಅದೇ ಗುಣಮಟ್ಟದೊಂದಿಗೆ ಮುನ್ನುಗ್ಗುತ್ತಿವೆ. ಇಂದು ಭಾರತ್ ಎನ್‌ಸಿಎಪಿ (Bharat NCAP) ಬಿಡುಗಡೆ ಮಾಡಿದ ಕ್ರಾಷ್ ಟೆಸ್ಟ್ ರೇಟಿಂಗ್‌ನಲ್ಲಿ ಟಾಟಾ ನೆಕ್ಸಾನ್ ತನ್ನ ಗುಣಮಟ್ಟವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ. 5-ಸ್ಟಾರ್ ರೇಟಿಂಗ್ ಗಳಿಸಿ ರತನ್ ಟಾಟಾರ ಹೆಸರನ್ನು ಉಳಿಸಿದೆ.
ಹೊಸದಾಗಿ ನಿರ್ವಹಿಸಲಾದ ಭಾರತ್ ಎನ್‌ಸಿಎಪಿ ಕ್ರ್ಯಾಷ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಫಿಯರ್‌ಲೆಸ್ ಡೀಸೆಲ್ ಎಎಂಟಿ ಮಾಡಲ್ ಅನ್ನು ಬಳಸಲಾಗಿತ್ತು. ಈ ಸಬ್ - 4 ಮೀಟರ್ ಎಸ್‌ಯುವಿ ವಯಸ್ಕ ಪ್ರಯಾಣಿಕರ ಸುರಕ್ಷತೆ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಯಲ್ಲಿ ಒಟ್ಟಾರೆ 5-ಸ್ಟಾರ್ ರೇಟಿಂಗ್ ಗಳಿಸಿದೆ.

ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ, ಟಾಟಾ ನೆಕ್ಸಾನ್ 32 ಅಂಕಗಳಿಗೆ 29.41 ಅಂಕಗಳನ್ನು ಗಳಿಸಿತು. ಫ್ರಂಟಲ್ ಆಫ್ಸೆಟ್ ತಡೆಗೋಡೆ ಪರೀಕ್ಷೆಯಲ್ಲಿ 16 ಅಂಕಗಳಿಗೆ 14.65 ಅಂಕಗಳನ್ನು ಪಡೆದರೆ, ಸೈಡ್ ಮೂವಬಲ್ ತಡೆಗೋಡೆ ಪರೀಕ್ಷೆಯಲ್ಲಿ 16 ಅಂಕಗಳಿಗೆ 14.76 ಅಂಕಗಳನ್ನು ಪಡೆದುಕೊಂಡಿದೆ. ಈ ಅಂಕಗಳು ಮೌಲ್ಯಮಾಪಕರನ್ನು ಅಚ್ಚರಿಗೊಳಿಸಿವೆ.
ಇನ್ನು ಮಕ್ಕಳ ಸುರಕ್ಷತೆಯಲ್ಲಿ ನೆಕ್ಸಾನ್ 49 ಅಂಕಗಳಿಗೆ ಗೌರವಾನ್ವಿತ 43.83 ಅಂಕಗಳನ್ನು ಗಳಿಸಿತು. ಒಟ್ಟಾರೆಯಾಗಿ, ಟಾಟಾ ನೆಕ್ಸಾನ್‌ಗೆ ವಯಸ್ಕ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಭಾರತ್ ಎನ್‌ಸಿಎಪಿ 5 ಸ್ಟಾರ್‌ಗಳನ್ನು ನೀಡಿದೆ. ಈ ಕ್ರ್ಯಾಷ್ ಟೆಸ್ಟ್ ಫಲಿತಾಂಶವು ಮತ್ತೊಮ್ಮೆ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟವನ್ನು ಜಗತ್ತಿದೆ ತೋರಿದೆ.

ಪ್ರತಿಸ್ಪರ್ಧಿಗಳಿಗೆ ನಡುಕ: ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೊನೆಟ್ ಕಾರುಗಳು 5-ಸ್ಟಾರ್ ರೇಟಿಂಗ್‌ನಿಂದ ದೂರ ಉಳಿದಿವೆ. ಉಳಿದಂತೆ ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಹೀಂದ್ರಾ ಎಕ್ಸ್‌ಯುವಿ 300 (ಈಗ ಎಕ್ಸ್‌ಯುವಿ 3 ಎಕ್ಸ್‌ಒ) ಮತ್ತು ಮಹೀಂದ್ರಾ ಥಾರ್ 3-ಡೋರ್‌ನಂತಹ ಕಾರುಗಳು ಮಾತ್ರ 4-ಸ್ಟಾರ್‌ಗಳನ್ನು ಗಳಿಸಿವೆ.
ಟಾಟಾ ನೆಕ್ಸಾನ್ ಬೆಲೆ: ಟಾಟಾ ನೆಕ್ಸಾನ್ ಬೆಲೆಯು ಪೆಟ್ರೋಲ್ ಬೇಸ್ ವೇರಿಯೆಂಟ್ ಬೆಲೆ ರೂ. 8 ಲಕ್ಷದಿಂದ (ಎಕ್ಸ್ ಶೋರೂಂ) ಆರಂಭವಾಗುತ್ತದೆ. ಟಾಪ್ ಎಂಡ್ ಡೀಸೆಲ್ ಬೆಲೆಯು 15.50 (ಎಕ್ಸ್ ಶೋರೂಂ) ಲಕ್ಷವಿದೆ. ನೆಕ್ಸಾನ್ ಸಿಎನ್‌ಜಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.99 ಲಕ್ಷಗಳಾಗಿದೆ. ಸಿಎನ್‌ಜಿ ವೆರಿಯೆಂಟ್‌ಗಳು ಟರ್ಬೋಚಾರ್ಜ್ಡ್ ಎಂಜಿನ್ ಮತ್ತು ಸನ್‌ರೂಫ್ ಜೊತೆಗೆ ಬರುತ್ತವೆ.

ವೈಶಿಷ್ಟ್ಯಗಳು: ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್), ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ (ಕ್ರಿಯೇಟಿವ್ +), ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, ವೈರ್ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications