TATA: ತಕ್ಷಣ ಶೋರೂಂಗೆ ಹೋಗಿ.. 95,000 ರಿಯಾಯಿತಿ, 8 ಲಕ್ಷಕ್ಕೆ ಈ ಹೊಸ ಕಾರು!

ಟಾಟಾ ಮೋಟಾರ್ಸ್ (Tata Motors) ಸುರಕ್ಷಿತ ವಾಹನ ತಯಾರಿಕೆಗೆ ಹೆಸರುವಾಸಿಯಾಗಿದೆ. ಈ ಅಕ್ಟೋಬರ್‌ನಲ್ಲಿ ನೆಕ್ಸಾನ್ (Nexon) ಎಸ್‌ಯುವಿ ಖರೀದಿಗೆ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ. ಈ ಕಾರು ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನೀವು ನೂತನ ನೆಕ್ಸಾನ್ ಎಸ್‌ಯುವಿ ತೆಗೆದುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ಕಾರಿನ ಯಾವ ರೂಪಾಂತರ (ವೇರಿಯೆಂಟ್) ಎಷ್ಟು ಹಣಕಾಸಿನ ಪ್ರಯೋಜನ ಹೊಂದಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಚ್ಚ ಹೊಸ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿಯ ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್ ಹೊರತುಪಡಿಸಿದ 2024ರ ಎಲ್ಲ ಪೆಟ್ರೋಲ್ ರೂಪಾಂತರಗಳು, ಒಟ್ಟು ರೂ.25,000 ವರೆಗೆ ರಿಯಾಯಿತಿ ಹೊಂದಿವೆ. ಅದರಲ್ಲಿ ರೂ.15,000 ಗ್ರಾಹಕ ರಿಯಾಯಿತಿ (Consumer Discount) ಮತ್ತು 10,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ (Exchange/ Scrappage bonus) ಕೂಡ ಸೇರಿವೆ.

Tata Nexon Suv Get Upto Rs 95 000 Discount In-October 2024 Rs 8 Lakh Starting Price Details

ಈ ನೆಕ್ಸಾನ್ ಕಾರಿನ ಸ್ಮಾರ್ಟ್(ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್ ಹೊರತುಪಡಿಸಿದ 2024ರ ಎಲ್ಲ ಡೀಸೆಲ್ ರೂಪಾಂತರಗಳು, ಬರೋಬ್ಬರಿ ರೂ.25,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. ಇದರೊಳಗೆ ರೂ.15,000 ಗ್ರಾಹಕ ರಿಯಾಯಿತಿ ಅಥವಾ ನಗದು ರಿಯಾಯಿತಿ ಹಾಗೂ ರೂ.10,000 ವಿನಿಮಯ/ ಸ್ಕ್ರ್ಯಾಪ್ ಬೋನಸ್‌ಗಳು ಇವೆ.

ಇದೇ ಟಾಟಾ ನೆಕ್ಸಾನ್ ಎಸ್‌ಯುವಿಯ 2024ರ ಪ್ಯೂರ್ & ಪ್ಯೂರ್ ಎಸ್ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳು ರೂ.20,000 ವರೆಗೆ ರಿಯಾಯಿತಿ ಒಳಗೊಂಡಿವೆ. ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್ ಪೆಟ್ರೋಲ್ ರೂಪಾಂತರಗಳು ರೂ.10,000 ಮತ್ತು ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್ ಡೀಸೆಲ್ ರೂಪಾಂತರಗಳು ರೂ.10,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ.

Tata Nexon Suv Get Upto Rs 95 000 Discount In-October 2024 Rs 8 Lakh Starting Price Details

ಟಾಟಾ ನೆಕ್ಸಾನ್ ಕಾರಿನ 2023ರ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳು, ರೂ.25,000 ರಿಂದ ರೂ.40,000 ವರೆಗೆ ರಿಯಾಯಿತಿ ಹೊಂದಿವೆ. ಅದೇ ರೀತಿಯಲ್ಲಿ 2023ರ ನವೀಕರಣಗೊಳ್ಳದ ಹಳೆಯ ನೆಕ್ಸಾನ್ ಪೆಟ್ರೋಲ್ ರೂಪಾಂತರಗಳು ರೂ.95,000 ಮತ್ತು ಡೀಸೆಲ್ ರೂಪಾಂತರಗಳು ರೂ.80,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ರೂ.8 ರಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಓಡಾಟ ನಡೆಸಬಹುದು.

ಈ ಕಾರು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು), ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, October 12, 2024, 9:00 [IST]
English summary
Tata nexon suv get upto rs 95000 discount in october 2024 rs 8 lakh starting price details
Read more on tata motors india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+