24 Km ಮೈಲೇಜ್... 8 ಲಕ್ಷದ ಈ ಪ್ರಖ್ಯಾತ ಟಾಟಾ ಕಾರನ್ನು ಖರೀದಿಸಬೇಕೇ.. ಕಡಿಮೆ EMI, ಆನ್-ರೋಡ್ ಬೆಲೆ ಎಷ್ಟು?

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ಸುರಕ್ಷಿತ ಕಾರು ತಯಾರಿಕೆಗೆ ಹೆಸರುವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ನೆಕ್ಸಾನ್ (Nexon) ಜನಪ್ರಿಯ ಎಸ್‌ಯುವಿಯಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನೀವು ನೂತನ ಕಾರನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ನೆಕ್ಸಾನ್ ಎಸ್‌ಯುವಿ ಉತ್ತಮ ಆಯ್ಕೆಯಾಗಲಿದೆ. ಬನ್ನಿ.. ಈ ಹೊಸ ಕಾರಿನ ಆನ್-ರೋಡ್ ಬೆಲೆ ಮೈಲೇಜ್ ಮತ್ತು ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿ ತಿಳಿಯೋಣ.

ಬೆಂಗಳೂರಿನಲ್ಲಿ ಹೊಚ್ಚ ಹೊಸ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ವಿವಿಧ ರೂಪಾಂತರಗಳಲ್ಲಿ (ವೇರಿಯೆಂಟ್) ಗ್ರಾಹಕರಿಗೆ ದೊರೆಯುತ್ತದೆ. ಇದರ ಸ್ಮಾರ್ಟ್ ಪ್ಲಸ್ ಡೀಸೆಲ್ (Smart Plus Diesel) ರೂಪಾಂತರ, ರೂ.9.99 ಲಕ್ಷ ಆನ್-ರೋಡ್ ದರ ಹೊಂದಿದೆ. ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಈ ಕಾರನ್ನು ಮನೆಗೆ ತಂದರೆ ರೂ.6.99 ಲಕ್ಷ ಸಾಲವಿರುತ್ತದೆ. ಶೇಕಡ 8% ಬಡ್ದಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.14,193 ಇಎಂಐ ಕಟ್ಟಬೇಕು.

Tata Nexon Suv On-Road Price Mileage And Emi Details

ನೆಕ್ಸಾನ್ ಕಾರಿನ ಸ್ಮಾರ್ಟ್ ಪ್ಲಸ್ ಎಸ್ ಡೀಸೆಲ್ (Smart Plus S Diesel) ರೂಪಾಂತರ, ರೂ.10.50 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಈ ಕಾರನ್ನು ರೂ.3 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.7.50 ಲಕ್ಷದಷ್ಟು ಸಾಲ ಬಾಕಿಯಿರುತ್ತದೆ. ಅದಕ್ಕೆ 8% ಬಡ್ದಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.15,207 ಇಎಂಐ ಪಾವತಿ ಮಾಡಬೇಕು.

ಹೊಸ ನೆಕ್ಸಾನ್ ಎಸ್‌ಯುವಿಯ ಪ್ಯೂರ್ ಡೀಸೆಲ್ (Pure Diesel) ರೂಪಾಂತರ, ರೂ.11 ಲಕ್ಷ ಆನ್-ರೋಡ್ ದರ ಹೊಂದಿದೆ. ಇದನ್ನು ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.8 ಲಕ್ಷ ಸಾಲ ಉಳಿಯುತ್ತದೆ. ಶೇಕಡ 8% ಬಡ್ದಿ ದರದಲ್ಲಿ 5 ವರ್ಷದ ಅವಧಿಗೆ (60-ತಿಂಗಳು) ಮಾಸಿಕ ರೂ.16,919 ಇಎಂಐ ಕಟ್ಟಬೇಕಾಗುತ್ತದೆ.

Tata Nexon Suv On-Road Price Mileage And Emi Details

ಟಾಟಾ ನೆಕ್ಸಾನ್ ಕಾರಿನ ಪ್ಯೂರ್ ಎಸ್ ಸಿಎನ್‌ಜಿ (Pure S CNG) ರೂಪಾಂತರ, ರೂ.10.99 ಲಕ್ಷ ಆನ್-ರೋಡ್ ಬೆಲೆ ಪಡೆದಿದೆ. ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ಖರೀದಿಸಿದರೆ, ರೂ.7.99 ಲಕ್ಷ ಸಾಲವಿರುತ್ತದೆ. ಶೇಕಡ 8% ಬಡ್ದಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.16,221 ಇಎಂಐ ಪಾವತಿಸಬೇಕು.

ನೂತನ ನೆಕ್ಸಾನ್ ಕಾರಿನ ಕ್ರಿಯೇಟಿವ್ ಪ್ಲಸ್ ಸಿಎನ್‌ಜಿ (Creative Plus CNG) ರೂಪಾಂತರ, ರೂ.12.19 ಲಕ್ಷ ಆನ್-ರೋಡ್ ದರ ಒಳಗೊಂಡಿದೆ. ಈ ಕಾರನ್ನು ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ಮನೆಗೆ ತಂದರೆ, ರೂ.10.19 ಲಕ್ಷ ಸಾಲ ಬಾಕಿಯಿರುತ್ತದೆ. 8% ಬಡ್ದಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.19,436 ಇಎಂಐ ತುಂಬಬೇಕು.

Tata Nexon Suv On-Road Price Mileage And Emi Details

ಟಾಟಾ ನೆಕ್ಸಾನ್ ಎಸ್‌ಯುವಿಯ ಕ್ರಿಯೇಟಿವ್ ಪೆಟ್ರೋಲ್ (Creative Petrol) ರೂಪಾಂತರ, ರೂ.11.10 ಲಕ್ಷ ಆನ್-ರೋಡ್ ಬೆಲೆ ಹೊಂದಿದೆ. ಇದನ್ನು ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟುವ ಮೂಲಕ ಖರೀದಿ ಮಾಡಿದರೆ, ರೂ.8.10 ಲಕ್ಷ ಸಾಲ ಉಳಿಯುತ್ತದೆ. ಶೇಕಡ 8% ಬಡ್ದಿ ಹಾಕಿ 5 ವರ್ಷದ ಅವಧಿಗೆ ಮಾಸಿಕ ರೂ.16,424 ಪಾವತಿ ಮಾಡಬೇಕು.

ನೂತನ ನೆಕ್ಸಾನ್ ಕಾರು, ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 17.01 ರಿಂದ 24 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡುತ್ತದೆ. ಈ ಕಾರಿನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಯಬಹುದು. ಜೊತೆಗೆ 382 ಲೀ. ಬೂಟ್ ಸ್ಪೇಸ್‌ನ್ನು ಹಾಗೂ 2,498 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಈ ಎಸ್‌ಯುವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಸಿ, ವೈರ್‌ಲೆಸ್ ಚಾರ್ಜಿಂಗ್ & ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಸೇರಿದಂತೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 - ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ಈ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Thursday, November 7, 2024, 17:36 [IST]
English summary
Tata nexon suv on road price mileage and emi details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+