ಟಾಟಾ ಪವರ್-ಟಾಟಾ ಮೋಟಾರ್ಸ್ ಒಪ್ಪಂದ: ವಾಣಿಜ್ಯ ಇವಿಗಳಿಗಾಗಿ 200 ವೇಗದ ಚಾರ್ಜಿಂಗ್ ಕೇಂದ್ರಗಳು

ಟಾಟಾ ಪವರ್ ಇವಿ ಚಾರ್ಜಿಂಗ್ ಸೊಲ್ಯೂಷನ್ಸ್ ಲಿಮಿಟೆಡ್, ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾನಂತಹ ಮೆಟ್ರೋ ನಗರಗಳಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗಾಗಿ 200 ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಟಾಟಾ ಮೋಟಾರ್ಸ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಈ ಉಪಕ್ರಮವು ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ವಿಶೇಷ ಚಾರ್ಜಿಂಗ್ ಸುಂಕಗಳನ್ನು ಒದಗಿಸುತ್ತದೆ, ಇದರ ಪರಿಣಾಮವಾಗಿ ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಅದರ ಗ್ರಾಹಕರಿಗೆ ಲಾಭದಾಯಕತೆ ಹೆಚ್ಚಾಗುತ್ತದೆ ಎಂದು ಟಾಟಾ ತಿಳಿಸಿದೆ.

ಚಾರ್ಜಿಂಗ್ ನೆಟ್‌ವರ್ಕ್‌ನ ಈ ಯೋಜಿತ ವಿಸ್ತರಣೆಯೊಂದಿಗೆ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಳಕೆದಾರರು ಯಾವುದೇ ರೇಂಜ್ ಆತಂಕವಿಲ್ಲದೇ ನಗರಗಳಲ್ಲಿ ಸುಧೀರ್ಘ ಪ್ರಯಾಣ ಮಾಡಬಹುದು. ಇನ್ನು ದೇಶದಾದ್ಯಂತ ಶೀಘ್ರದಲ್ಲೇ ಸುಮಾರು 1,000 ಆಯಕಟ್ಟಿನ ವೇಗದ ಚಾರ್ಜರ್‌ಗಳ ಪ್ರಯೋಜನ ಪಡೆಯಲಿದ್ದಾರೆ ಎಂದು ಟಾಟಾ ಭರವಸೆ ನೀಡಿದೆ.

tata-power-and-tata-motors-sign-mou-to-set-up-200-fast-charging-stations

ಮುಖ್ಯವಾಗಿ ಟಾಟಾ ಮೋಟಾರ್ಸ್ ಭಾರತದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನವಾಗಿ Ace EV ಅನ್ನು ನೀಡುತ್ತಿದೆ. ಇದನ್ನು ರಾಷ್ಟ್ರವ್ಯಾಪಿ 150 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸೇವಾ ಕೇಂದ್ರಗಳು ಬೆಂಬಲಿಸುತ್ತಿವೆ. Ace EVಯು ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು 'ಫ್ಲೀಟ್ ಎಡ್ಜ್' ಟೆಲಿಮ್ಯಾಟಿಕ್ಸ್ ಅನ್ನು ಒಳಗೊಂಡಿದೆ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸ್ಮಾರ್ಟ್ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇದು ಹೀಗಿದ್ದರೇ ಮತ್ತೊಂದೆಡೆ 'ಟಾಟಾ ಪವರ್' ತನ್ನ ನೆಟ್‌ವರ್ಕ್ ಅನ್ನು EZ ಚಾರ್ಜ್‌ನ ಬ್ರಾಂಡ್ ಹೆಸರಿನಲ್ಲಿ 1,00,000 ಹೋಮ್ ಚಾರ್ಜರ್‌ಗಳು, 5,500 ಕ್ಕೂ ಹೆಚ್ಚು ಸಾರ್ವಜನಿಕ, ಅರೆ-ಸಾರ್ವಜನಿಕ ಮತ್ತು ಫ್ಲೀಟ್ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ 530 ನಗರಗಳು ಮತ್ತು ಪಟ್ಟಣಗಳಲ್ಲಿ 1,100 ಕ್ಕೂ ಹೆಚ್ಚು ಬಸ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ವಿಸ್ತರಿಸಿದೆ.

tata-power-and-tata-motors-sign-mou-to-set-up-200-fast-charging-stations

ಈ ಚಾರ್ಜರ್‌ಗಳನ್ನು ಹೆದ್ದಾರಿಗಳು, ಹೋಟೆಲ್‌ಗಳು, ಮಾಲ್‌ಗಳು, ಆಸ್ಪತ್ರೆಗಳು, ಕಚೇರಿಗಳು, ವಸತಿ ಸಂಕೀರ್ಣಗಳು ಇತ್ಯಾದಿಗಳಂತಹ ವೈವಿಧ್ಯಮಯ ಮತ್ತು ಪ್ರವೇಶಿಸಬಹುದಾದ ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ನಿಯೋಜಿಸಲಾಗಿದೆ. ಈ ಸಂಘಟಿತ ಪ್ರಯತ್ನವು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯ ವೇಗದ ಬೆಳವಣಿಗೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಟಾಟಾ ಹೇಳಿದೆ.

ಟಾಟಾ ಮೋಟಾರ್ಸ್‌ನ ಎಸ್‌ಸಿವಿ ಮತ್ತು ಪಿಯು ಉಪಾಧ್ಯಕ್ಷ ವಿನಯ್ ಪಾಠಕ್ ಮಾತನಾಡಿ, "ಟಾಟಾ ಪವರ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ನಾವು ಸಂತೋಷಪಡುತ್ತೇವೆ. ವಿಶ್ವದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿವುದು ನಮ್ಮ ಪ್ರಯತ್ನವಾಗಿದೆ. ಪರಿಸರ ಸ್ನೇಹಿ ವಾಹನಗಳ ಮೂಲಕ ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ ಎಂದರು.

ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್‌ನ ಸಿಇಒ ದೀಪೇಶ್ ನಂದಾ ಮಾತನಾಡಿ, ದೇಶದಾದ್ಯಂತ ಅತಿ ದೊಡ್ಡ EV ಚಾರ್ಜಿಂಗ್ ನೆಟ್‌ವರ್ಕ್‌ಗಳಲ್ಲಿ ಒಂದನ್ನು ಹೊಂದಿರುವ ಟಾಟಾ ಪವರ್ ದೇಶಾದ್ಯಂತ ತನ್ನ ವಿಶ್ವಾಸಾರ್ಹ ಚಾರ್ಜಿಂಗ್ ಪರಿಹಾರಗಳ ಮೂಲಕ ಎಲೆಕ್ಟ್ರಿಕ್ ವಾಹನ ಮಾಲೀಕರನ್ನು ಸಕ್ರಿಯಗೊಳಿಸುತ್ತಿದೆ ಎಂದರು.

ಸಾರ್ವಜನಿಕ, ಅರೆ-ಸಾರ್ವಜನಿಕ, ಬಸ್/ಫ್ಲೀಟ್ ಮತ್ತು ಹೋಮ್ ಚಾರ್ಜರ್‌ಗಳಂತಹ ವಿವಿಧ ವಿಭಾಗಗಳಲ್ಲಿ, ನಾವು ವಾಣಿಜ್ಯ ವಾಹನ ಚಾರ್ಜಿಂಗ್ ವಿಭಾಗಕ್ಕೆ ವಿಸ್ತರಿಸುತ್ತಿದ್ದೇವೆ. ಈ ಹೊಸ ಸಹಯೋಗವು ಭಾರತದಾದ್ಯಂತ ವಿಶ್ವಾಸಾರ್ಹ EV ಚಾರ್ಜಿಂಗ್ ನೆಟ್‌ವರ್ಕ್ ಇ-ಮೊಬಿಲಿಟಿಯನ್ನು ವೇಗಗೊಳಿಸುವ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದರು.

Article Published On: Saturday, September 14, 2024, 13:00 [IST]
English summary
Tata power and tata motors sign mou to set up 200 fast charging stations
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+