Tata: 6.13 ಲಕ್ಷ ಬೆಲೆಯ ಪುಟ್ಟ ಟಾಟಾ ಕಾರು: ಅಕ್ಟೋಬರ್‌ನಲ್ಲಿ 15 ಸಾವಿರ ಕಾರುಗಳ ಮಾರಾಟ!
ಭಾರತೀಯ ಕಾರು ತಯಾರಕರು ಎಸ್‌ಯುವಿ, ಮಿಡ್‌ಸೈಜ್ ಎಸ್‌ಯುವಿ, ಸೆಡಾನ್‌ನಂತಹ ಹಲವು ವಿಭಾಗಗಳಲ್ಲಿ ಕಾರುಗಳನ್ನು ನನೀಡುತ್ತಿದ್ದರೂ, ಪ್ರಮುಖವಾಗಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ಮಾತ್ರ ಕಡೆಗಣಿಸುವುದಿಲ್ಲ. ಏಕೆಂದರೆ ಭಾರತದಲ್ಲಿ ಕೈಗೆಟುಕುವ ಬೆಲೆಯ ಸಣ್ಣ ಕಾರುಗಳಿಗೆ ಭಾರೀ ಬೇಡಿಕೆ ಇದೆ. ಟಾಟಾ, ಮಹೀಂದ್ರಾ, ಹ್ಯುಂಡೈ, ಮಾರುತಿ, ಕಿಯಾದಂತಹ ಹಲವು ಬ್ರಾಂಡ್‌ಗಳು ಈ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಮಾರಾಟವನ್ನು ಕಾಣುತ್ತಿವೆ. ಅಂದಹಾಗೆ ಟಾಟಾ ಮೋಟಾರ್ಸ್ ಕೂಡ ಈ ಬಾರಿ ತನ್ನ ಜನಪ್ರಿಯ ಮಾದರಿಯಾದ ಟಾಟಾ ಪಂಚ್ ಕಾಂಪ್ಯಾಟಕ್ಟ್ ಎಸ್‌ಯುವಿ ಉತ್ತಮ ಮಾರಾಟವನ್ನು ದಾಖಲು ಮಾಡಿದೆ.
2024 ಅಕ್ಟೋಬರ್ ಕಾರು ಮಾರಾಟದಲ್ಲಿ ಒಟ್ಟಾರೆ ಉತ್ತಮ ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್, ತನ್ನ ಟಾಟಾ ಪಂಚ್‌ನ 15,740 ಕಾರುಗಳ ಮಾರಾಟದೊಂದಿಗೆ ಮುನ್ನುಗ್ಗಿದೆ, ಇದು 2023 ಅಕ್ಟೋಬರ್‌ನಲ್ಲಿ ಮಾರಾಟವಾಗಿದ್ದ 15,317 ಕಾರುಗಳಿಗಿಂತ ಹೆಚ್ಚು. ಈ ಮೂಲಕ ವಾರ್ಷಿಕವಾಗಿ ಶೇ3 ರಷ್ಟು ಬೆಳವಣಿಗೆ ಸಾಧಿಸಿದೆ. ಈ ಮಟ್ಟದ ಬೇಡಿಕೆ ಪಡೆದಿರುವ ಪಂಚ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಬೆಲೆ: ಪೆಟ್ರೋಲ್-ಮ್ಯಾನುವಲ್ ರೂಪಾಂತರಗಳು 6.13 ಲಕ್ಷ ರೂ.ಗಳಿಂದ 9.45 ಲಕ್ಷ ರೂ.ಗಳವರೆಗೆ ಇದ್ದು, ಆಟೋಮ್ಯಾಟಿಕ್ ರೂಪಾಂತರಗಳು 7.60 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ಇದೆ. ಇದರಲ್ಲಿ ಸಿಎನ್‌ಜಿ ರೂಪಾಂತರಗಳ ಬೆಲೆಯು ರೂ.7.23 ಲಕ್ಷದಿಂದ ರೂ.9.90 ಲಕ್ಷಗಳಾಗಿದೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ).
ಎಂಜಿನ್: ಟಾಟಾ ಪಂಚ್ ಕೇವಲ ಒಂದು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಅದು 1.2-ಲೀಟರ್ ಮೂರು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಖರೀದಿಸಬಹುದಾಗಿದೆ. ಇದೇ ಎಂಜಿನ್ ಅನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಪಡೆಯಬಹುದು. ಪೆಟ್ರೋಲ್ ಎಂಜಿನ್ 88 ಬಿಹೆಚ್ ಪವರ್ ಹಾಗೂ 115 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿಯಲ್ಲಿ 73.5 ಬಿಹೆಚ್ ಪವರ್ ಹಾಗೂ 103 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಫೀಚರ್ಸ್: ಕೂಲ್ಡ್ ಗ್ಲೋವ್ ಬಾಕ್ಸ್, ಸಿಂಗಲ್ ಪ್ಯಾನ್ ಸನ್ ರೂಫ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಟಾಟಾ ಪಂಚ್‌ನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಜೊತೆಗೆ ರಿಯರ್ ವೆಂಟ್‌ಗಳೊಂದಿಗೆ ಆಟೋ ಎಸಿ ಮತ್ತು ಎತ್ತರ - ಸರಿಹೊಂದಿಸಬಹುದಾದ ಡ್ರೈವರ್ ಸೀಟ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.
ಮೈಲೇಜ್: ಟಾಟಾ ಪಂಚ್ 5-ಸ್ಪೀಡ್ ಪೆಟ್ರೋಲ್-ಮ್ಯಾನುವಲ್‌ನಲ್ಲಿ 20.09 ಕಿ.ಮೀ ಮತ್ತು ಎಎಂಟಿನಲ್ಲಿ 18.8 ಕಿ.ಮೀ ಮೈಲೇಜ್ ನೀಡುತ್ತದೆ. ಸಿಎನ್‌ಜಿ ಆವೃತ್ತಿಯು 26 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಟಾಟಾ ಪಂಚ್ ಅನ್ನು ಗ್ಲೋಬಲ್ ಎನ್‌ಸಿಎಪಿ 2021 ರಲ್ಲಿ ಕ್ರ್ಯಾಶ್ - ಟೆಸ್ಟ್ ಮಾಡಿತು, ಅಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ.

ಸುರಕ್ಷತಾ ಫೀಚರ್‌ಗಳು: ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 2 ಏರ್ ಬ್ಯಾಗ್‌ಗಳು, ಮಾರ್ಗಸೂಚಿಗಳೊಂದಿಗೆ ರಿವರ್ಸಿಂಗ್ ಕ್ಯಾಮೆರಾ, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು ಎಬಿಎಸ್, ಇಬಿಡಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು 5-ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications