ರತನ್ ಟಾಟಾ ರೀತಿಯಲ್ಲೇ ಜನಮೆಚ್ಚಿದ ಟಾಟಾ ಕಾರು: ಕೇವಲ 9.9 ಲಕ್ಷಕ್ಕೆ 421 ಕಿಮೀ ರೇಂಜ್!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದೇ ಕಾರಣದಿಂದ ಎಲೆಕ್ಟ್ರಿಕ್ ಬೈಕ್ ಸೇರಿದಂತೆ ನಾನಾ ರೀತಿಯ ಎಲೆಕ್ಟ್ರಿಕ್ ಕಾರುಗಳು ಸಹ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಅದರಲ್ಲಂತೂ ಟಾಟಾ ಮೋಟಾರ್ಸ್ ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ಇತ್ತೀಚೆಗಷ್ಟೇ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯನ್ನಯ ಮಾರುಕಟ್ಟೆಗೆ ತಂದಿತ್ತು. ಇಂದು ನಾವು ಟಾಟಾ ಮೋಟಾರ್ಸ್‌ನ ಪಂಚ್ ಎಲೆಕ್ಟ್ರಿಕ್ ಬಗ್ಗೆ ನೋಡಲಿದ್ದೇವೆ.
ಟಾಟಾ ಪಂಚ್ ಎಲೆಕ್ಟ್ರಿಕ್ ಬಗ್ಗೆ ನೋಡುವುದಾದರೆ, ಸದ್ಯಕ್ಕೆ ಭಾರತದಲ್ಲಿ ಸಿಗುತ್ತಿರುವ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್ ಅನ್ನು ಆಳುತ್ತಿರುವ ಕಾರು ಇದೆಂದರೆ ತಪ್ಪಾಗಲಾರದು. ಇದಕ್ಕೆ ಪ್ರಮುಖ ಕಾರಣ ಈ ಕಾರು ನೀಡುವ ಪರ್ಫಾಮೆನ್ಸ್ ಮತ್ತು ಇದರ ಬೆಲೆ. ಹೌದು, ಇಂದು ಈ ಕಾರು ಇಷ್ಟೊಂದು ಹೆಸರು ಮಾಡಲು, ಮಾರಾಟವಾಗಲು ಪ್ರಮುಖ ಕಾರಣಗಳೇನು ಎಂಬುದನ್ನು ನೋಡೋಣ.

ಡಿಸೈನ್: ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್ ಸೆಟ್‌ಅಪ್ ಅನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿನ ಗ್ರಿಲ್ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಇದು ಮಾತ್ರವಲ್ಲದೇ ಕಾರಿನ ಗ್ರಿಲ್‌ನಲ್ಲಿಯೇ ನಿಮಗೆ ಚಾರ್ಜಿಂಗ್ ಸಾಕೆಟ್ ಸಹ ದೊರಕಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಇಂಬು ನೀಡುತ್ತದೆ ಎನ್ನಬಹುದು.
ಇಷ್ಟು ಮಾತ್ರವಲ್ಲದೇ ಹೊಸ ಟಾಟಾ ನೆಕ್ಸಾನ್‌ನಂತೆ ಈ ಕಾರಿನಲ್ಲೂ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಇದ್ದು, ಈ ಕಾರಿನ ಡಿಸೈನ್ ಅನ್ನು ಮತ್ತಷ್ಟು ಪ್ರೀಮಿಯಂ ಗೊಳಿಸುತ್ತಿದೆ. ಇನ್ನು ಈ ಡಿಆರ್‌ಎಲ್‌ನ ಮಧ್ಯ ಕೆಳಭಾಗದಲ್ಲಿಯೇ ಟಾಟಾ ಲೋಗೋ ಸಹ ದೊರಕುತ್ತದೆ. ಇನ್ನು ಈ ಲೋಗೋ ಕಪ್ಪು ಮತ್ತು ಬಿಳುಪು ಫಿನಿಶಿಂಗ್‌ನಲ್ಲಿ ನೀಡಿದ್ದಾರೆ. ಬಂಪರ್ ಸಹ ಸಾಧಾರಣ ಪಂಚ್‌ಗಿಂತಲೂ ಕೊಂಚ ವಿಭಿನ್ನವಾಗಿದೆ.

ಇಂಟೀರಿಯರ್: ಈ ಕಾರಿನ ಒಳಭಾಗದಲ್ಲಿ ಗಮನಿಸಿದರೆ ಎಲ್ಲಾ ಸೀಟ್‌ಗಳಲ್ಲಿಯೂ ಅಂಡರ್ ಥೈ ಸಪೋರ್ಟ್ ಮತ್ತು ಲೆಗ್‌ರೂಮ್, ಹೆಡ್ ರೂಮ್ ಸಾಕಷ್ಟಿದೆ. ಹಿಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವುದು ಸೂಕ್ತ. ಮುಂಭಾಗಕ್ಕೆ ಬಂದರೆ ಈ ಕಾರಿನಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಸಿಗುತ್ತದೆ. ಮಧ್ಯಭಾಗದಲ್ಲಿ 10.25 ಇಂಚ್‌ನ ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಂ ಸಿಗುತ್ತಿದ್ದು, ಇದರಲ್ಲಿ ಹದಿನೇಳಕ್ಕೂ ಅಧಿಕ ಆ್ಯಪ್‌ಗಳು ಲಭ್ಯವಿದೆ.
ಇನ್ನು ಚಾಲಕನಿಗೆ ಹೆಚ್ಚು ಸಹಕಾರಿಯಾಗಲು ಈ ಕಾರಿನಲ್ಲಿ 10.25 ಇಂಚ್‌ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ನೀಡಿದ್ದು, ಇದರಲ್ಲಿ ಕಾರಿನ ಕುರಿತಾದ ಎಲ್ಲಾ ಮಾಹಿತಿಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಎಸಿ ವೆಂಡ್ಸ್‌ಗಳಲ್ಲಿ ಕ್ರೋಮ್ ಬಣ್ಣದ ಫಿನಿಶಿಂಗ್ ನೀಡಿದ್ದು ಇದರ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಸಿ ಬಟನ್‌ಗಳನ್ನು ಬಿಟ್ಟು ಇತರ ಎಲ್ಲಾ ವಿಷಯಗಳಿಗೂ ಸಹ ಟಚ್ ಪ್ಯಾನೆಲ್ ಅನ್ನು ನೀಡಿರುವುದು ಈ ಕಾರಿನ ಅನುಭವವನ್ನು ಪ್ರೀಮಿಯಂ ಗೊಳಿಸುತ್ತದೆ.
ಬ್ಯಾಟರಿ ಮತ್ತು ಪವರ್: ಟಾಟಾ ಮೋಟಾರ್ಸ್ ಈ ಕಾರಿಗೆ ಎರಡು ವೇರಿಯಂಟ್ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್ ಇವಿ ಮತ್ತು ಇನ್ನೊಂದು ಟಾಟಾ ಪಂಚ್ ಇವಿ ಲಾಂಗ್ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್ ನೀಡುವುದರ ಜೊತೆಗೆ 80.46bhp/ 114Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ.
ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಈ ಕಾರಿನ ಬೆಲೆ ಸುಮಾರು 9.99 ಲಕ್ಷ ಎಕ್ಸ್ ಶೋ ರೂಮ್‌ನಿಂದ ಆರಂಭವಾಗುತ್ತದೆ.
ಇನ್ನು ಟಾಟಾ ಪಂಚ್ ಇವಿಯ ಎಲ್ಲಾ ವೇರಿಯಂಟ್‌ಗಳಲ್ಲಿಯೂ 3.3kWh ಚಾರ್ಜರ್ ಜೊತೆಗೆ ಬರುತ್ತಿದ್ದು ಇದರ ಸಹಾಯದಿಂದ ಈ ಕಾರು ಸಂಪೂರ್ಣ ಚಾರ್ಜ್ ಆಗಲು ಬೇಸ್ ವೇರಿಯಂಟ್ 9.4 ಗಂಟೆಗಳು ಮತ್ತು ಲಾಂಗ್ ರೇಂಜ್ ವೇರಿಯಂಟ್ 13.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 7.2kWh ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಸಹ ಲಭ್ಯವಿದ್ದು ಇದರ ಸಹಾಯದಿಂದ ಬೇಸ್ ವೇರಿಯಂಟ್ 3.6 ಗಂಟೆಗಳು ಮತ್ತು ಲಾಂಗ್ ರೇಂಜ್ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಟಾಟಾ ಪಂಚ್ ಇವಿಯ ಆಕ್ಸಿಲರೇಷನ್ ನೋಡುವುದಾದರೆ, 0-100km/h ತಲುಪಲು ಇದು ಕೇವಲ 9.5 ಸೆಕೆಂಡ್ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದ್ದು, ಇದರ ಟಾಪ್ ಸ್ಪೀಡ್ 140km/h. ಇನ್ನು ಈ ಕಾರಿನಲ್ಲಿ ಇಕೋ, ಸ್ಪೋರ್ಟ್ಸ್ ಮತ್ತು ಸಿಟಿ ಎಂಬ ಮೂರು ಡ್ರೈವಿಂಗ್ ಮೋಡ್‌ಗಳು ಸಹ ದೊರಕುತ್ತದೆ. ಇದರಲ್ಲಿ ರೀಜೆನ್ ಬ್ರೇಕಿಂಗ್ ವ್ಯವಸ್ಥೆಯೂ ದೊರಕುತ್ತದೆ.


Click it and Unblock the Notifications