ಟಾಟಾ ಕಂಪನಿ ಪವರ್: ಇದೇ ದೇಶದ ನಂಬರ್ 1 ಸುರಕ್ಷಿತ ಎಲೆಕ್ಟ್ರಿಕ್ ಕಾರು.. ಬರೀ 10 ಲಕ್ಷ, ಯಾವುದು?

ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP), ಗುರುವಾರ ಮಹೀಂದ್ರಾ ಎಕ್ಸ್‌ಯುವಿ400 (Mahindra XUV400) ಎಲೆಕ್ಟ್ರಿಕ್ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಈ ಹಿಂದೆ ಟಾಟಾ ಕರ್ವ್ ಇವಿ (Tata Curvv EV), ನೆಕ್ಸಾನ್ ಇವಿ (Nexon EV) ಹಾಗೂ ಪಂಚ್ ಇವಿ (Punch EV) ಸಹ 5-ಸ್ಟಾರ್ ರೇಟಿಂಗ್ ಪಡೆದಿದ್ದವು. ಎಲ್ಲ ಕಾರುಗಳು ಗರಿಷ್ಠ ರೇಟಿಂಗ್ ಗಳಿಸಿವೆ. ಅದರ ಹೊರತಾಗಿಯೂ ಇವುಗಳಲ್ಲಿ ದೇಶದ ಅತ್ಯಂತ ಸುರಕ್ಷಿತ ಕಾರು ಯಾವುದೆಂಬ ಚರ್ಚೆ ಆರಂಭವಾಗಿದೆ. ನಾವಿಲ್ಲಿ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ.

ಭಾರತ್ ಎನ್‌ಸಿಎಪಿ, ಈ ನಾಲ್ಕು ಎಲೆಕ್ಟ್ರಿಕ್ ಕಾರುಗಳಿಗೆ ವಯಸ್ಕರ ರಕ್ಷಣೆ ವಿಭಾಗ (Adult Occupant Protection) ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) ನೀಡಿರುವ ಅಂಕಗಳನ್ನು ಪರಿಗಣಿಸದಾಗ 'ಟಾಟಾ ಪಂಚ್ ಇವಿ' ಅತ್ಯಂತ ಸುರಕ್ಷಿತ ಕಾರಾಗಿ ಹೊರಹೊಮ್ಮುತ್ತದೆ. ಉಳಿದ ಕಾರುಗಳು ಕೂಡ ಪಂಚ್ ಇವಿಯಂತೆ 5-ಸ್ಟಾರ್ ರೇಟಿಂಗ್ ಪಡೆದಿವೆ. ಆದರೆ, ಅವುಗಳು ಪಡೆದ ಅಂಕಗಳು ಮಾತ್ರ ಸ್ವಲ್ಪ ಕಡಿಮೆಯಿದೆ.

Tata Punch Ev Become Number 1 Safety Electric Car In India

ಟಾಟಾ ಪಂಚ್ ಇವಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.46 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ. ಟಾಟಾ ಕರ್ವ್ ಇವಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 30.81 ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.83 ಅಂಕಗಳನ್ನು ಪಡೆಯಲು ಯಶಸ್ವಿಯಾಗಿದೆ.

ಮಹೀಂದ್ರಾ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರು ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 30.38 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 43.00 ಅಂಕಗಳನ್ನು ಪಡೆದಿದೆ. ಟಾಟಾ ನೆಕ್ಸಾನ್ ಇವಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 29.86 ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.95 ಅಂಕಗಳನ್ನು ಗಳಿಸಿದೆ.

Tata Punch Ev Become Number 1 Safety Electric Car In India

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್), 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೋಲ್‌-ಓವರ್ ಮಿಟಿಗೇಶನ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇತರೆ ರೂಪಾಂತರಗಳು ಹೆಚ್ಚುವರಿಯಾಗಿ 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಹಿಲ್ ಡಿಸೆಂಟ್ ಕಂಟ್ರೋಲ್‌ನ್ನು ಪಡೆದಿವೆ.

ನೂತನ ಟಾಟಾ ಪಂಚ್ ಇವಿ ರೂ.9.99 ಲಕ್ಷ ಲಕ್ಷದಿಂದ ರೂ.14.29 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್ ಹಾಗೂ ಎಂಪವರ್ಡ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಹೊಂದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣಬಹುದು.

Tata Punch Ev Become Number 1 Safety Electric Car In India

ಟಾಟಾ ಪಂಚ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದರ 25 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಕಾರಿನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 82 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 114 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 265 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.

ಮತ್ತೊಂದು 35 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ಕಾರಿನಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 122 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 190 (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 365 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ.

ಹೊಸ ಟಾಟಾ ಪಂಚ್ ಇವಿ ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್ಪ್ಲೇಗಳು (10.25-ಇಂಚು), ಆಂಡ್ರಾಯ್ಡ್ ಆಟೋ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.

Article Published On: Saturday, November 16, 2024, 11:30 [IST]
English summary
Tata punch ev become number 1 safety electric car in india
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+