ಹುಟ್ಟುಹಬ್ಬದ ದಿನ ಮಾಲೀಕನಿಗೆ '25 ಲಕ್ಷ' ಬೆಲೆಬಾಳುವ ಉಡುಗೊರೆ ನೀಡಿದ ಟಾಟಾ ಪಂಚ್: ನಾವೂ ಕೂಡ ಶಾಕ್!
ಟಾಟಾ ಕಂಪನಿಯು ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಇಳಿಸಿದ್ದು, ಆ ಎಲ್ಲಾ ಕಾರುಗಳಿಗೂ ಹಲವಾರು ಹೊಸ ಹೊಸ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ. ಟಾಟಾ ಕಾರುಗಳ ಇನ್ನೊಂದು ಪ್ರಮುಖ ವಿಶೇಷತೆ ಏನೆಂದರೆ ಬಹುತೇಕ ಎಲ್ಲಾ ಕಾರುಗಳಿಗೂ ಸಹ ಸಾಕಷ್ಟು ವೇರಿಯಂಟ್ ಲಭ್ಯವಿರುತ್ತದೆ. ವೇರಿಯಂಟ್‌ನ ಬೆಲೆ ಹೆಚ್ಚಾಗುತ್ತಾ ಹೋದಂತೆ ಹೆಚ್ಚುವರಿ ಫೀಚರ್‌ಗಳು ನಿಮ್ಮ ಕಾರುಗಳಿಗೆ ಸೇರಿಕೊಳ್ಳುತ್ತಾ ಹೋಗುತ್ತವೆ. ಇಲ್ಲೊಂದು ಕಡೆ ಟಾಟಾ ಕಾರಿನಲ್ಲಿ ಅದೇ ರೀತಿಯ ಫೀಚರ್ ಒಂದು ಯಾವ ರೀತಿಯಾಗಿ ಮಾಲೀಕನ ಮನಸ್ಸು ಗೆದ್ದಿದೆ ಎಂದು ನೋಡೋಣ.
ಇಲ್ಲೊಂದು ಕಡೆ ಮಾಲೀಕನೊಬ್ಬ ತನ್ನ ಹುಟ್ಟುಹಬ್ಬದ ದಿನ ಟಾಟಾ ಪಂಚ್ ( Tata Punch EV) ಒಳಗೆ ಹೋಗಿದ್ದಾನೆ. ಅಲ್ಲಿ ಡ್ಯಾಶ್ ಬೋರ್ಡ್‌ನಲ್ಲಿ ಆತನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಆ ಕಾರು ತಿಳಿಸಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಆ ಟ್ವಿಸ್ಟ್ ಏನೆಂದು ನೋಡುವುದಕ್ಕೂ ಮುನ್ನ ಕಾರು ಹೇಗೆ ಶೂಭಾಶಯ ಕೋರುತ್ತದೆ ಎಂದು ನೋಡೋಣ.

ಟಾಟಾ ಕಾರುಗಳಲ್ಲಿ ನಿಮ್ಮ ಪ್ರೊಫೈಲ್ ಅನ್ನು ಸೇರಿಸಬಹುದಾಗಿದೆ. ಇದರಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿಷಯಗಳನ್ನು ತುಂಬಬೇಕಾಗುತ್ತದೆ. ಹೀಗೆ ಅದರಲ್ಲಿ ಸಂಗ್ರಹವಾದ ವಿವರಗಳ ಆಧಾರದ ಮೇರೆಗೆ ಕಾರು ನಿಮಗೆ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸುತ್ತದೆ.
ಇನ್ನು ಟ್ವಿಸ್ಟ್ ಏನೆಂದು ನೋಡುವುದಾದರೆ, ಕಾರು ಶೂಭಾಶಯ ತಿಳಿಸುವುದರ ಜೊತೆಗೆ ಆತನ ಕಾರನ್ನು ಸಹ ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ತೋರಿಸಿದೆ. ಆದರೆ ಅಲ್ಲಿ ಕಂಡು ಬರಬೇಕಾಗಿದ್ದು ಟಾಟಾ ಪಂಚ್ ಇವಿ. ಆದರೆ ಕಂಡು ಬಂದಿದ್ದು ಟಾಟಾ ಹ್ಯಾರಿಯರ್. ಮೊದಲಿಗೆ ಮಾಲೀಕನಿಗೆ ಆಶ್ಚರ್ಯವಾದರೂ, ಆ ನಂತರದಲ್ಲಿ ಸಾವರಿಸಿಕೊಂಡು ಇದೊಂದು ಗ್ಲಿಚ್ ಎಂದು ಅರಿವಾಗಿದೆ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದುಬಾರಿ ಕಾರನ್ನು ಕಂಡುದುದರಿಂದ ಮಾನಸಿಕವಾಗಿ ಆತನಿಗೆ ಖುಷಿಯಾಗಿದ್ದಂತೂ ನಿಜ.

ಇನ್ನು ಟಾಟಾ ಪಂಚ್ ಎಲೆಕ್ಟ್ರಿಕ್ ಬಗ್ಗೆ ನೋಡುವುದಾದರೆ, ಮೊದಲ ನೋಟದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ (TATA Punch Electric) ಅನ್ನು ನೋಡಿದರೆ ಥೇಟ್ ಟಾಟಾ ಪಂಚ್ ಐಸಿಇ ಎಂಜಿನ್ ಕಾರಿನಂತೆಯೇ ಕಾಣುತ್ತದೆ. ಇದರ ಗಾತ್ರ ಮತ್ತು ಇತರ ಬಹುತೇಕ ಡಿಸೈನ್ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು ಪೆಟ್ರೋಲ್ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿ ಲಭ್ಯವಿರುವುದೇ ಪ್ರಮುಖವಾದ ಬದಲಾವಣೆ. ಆದರೆ ಇದರಲ್ಲಿ ಆ ಕಾರಿಗಿಂತಲೂ ಹಲವು ಫೀಚರ್‌ಗಳನ್ನು ಸೇರಿಸಲಾಗಿದೆ.
ಟಾಟಾ ಮೋಟಾರ್ಸ್ ಈ ಕಾರಿಗೆ ಎರಡು ವೇರಿಯಂಟ್ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್ ಇವಿ ಮತ್ತು ಇನ್ನೊಂದು ಟಾಟಾ ಪಂಚ್ ಇವಿ ಲಾಂಗ್ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್ ನೀಡುವುದರ ಜೊತೆಗೆ 80.46bhp/ 114Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ.
ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.
ಇನ್ನು ಟಾಟಾ ಪಂಚ್ ಇವಿಯ ಎಲ್ಲಾ ವೇರಿಯಂಟ್‌ಗಳಲ್ಲಿಯೂ 3.3kWh ಚಾರ್ಜರ್ ಜೊತೆಗೆ ಬರುತ್ತಿದ್ದು ಇದರ ಸಹಾಯದಿಂದ ಈ ಕಾರು ಸಂಪೂರ್ಣ ಚಾರ್ಜ್ ಆಗಲು ಬೇಸ್ ವೇರಿಯಂಟ್ 9.4 ಗಂಟೆಗಳು ಮತ್ತು ಲಾಂಗ್ ರೇಂಜ್ ವೇರಿಯಂಟ್ 13.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 7.2kWh ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಸಹ ಲಭ್ಯವಿದ್ದು ಇದರ ಸಹಾಯದಿಂದ ಬೇಸ್ ವೇರಿಯಂಟ್ 3.6 ಗಂಟೆಗಳು ಮತ್ತು ಲಾಂಗ್ ರೇಂಜ್ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications