11 ಲಕ್ಷ ಬೆಲೆಯ ಬೆಸ್ಟ್ ಟಾಟಾ ಇವಿ ಕಾರು: 6 ಏರ್‌ಬ್ಯಾಗ್, ಸನ್‌ರೂಫ್, 421 ಕಿ.ಮೀ ರೇಂಜ್
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿಯಾದ ಟಾಟಾ ಪಂಚ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು 10.99 ಲಕ್ಷ (ex-showroom) ರೂ.ನಿಂದ ಆರಂಭವಾಗುತ್ತದೆ. ಇನ್ನು ಇದರಲ್ಲಿ ಟಾಪ್ ಎಂಡ್ ಆವೃತ್ತಿಯಾದ ಟಾಟಾ ಪಂಚ್ ಅಡ್ವೆಂಚರ್ 12.49 ಲಕ್ಷ (ex-showroom) ರೂ. ಬೆಲೆಯಿದೆ. ಡಿಸೈನ್ ವಿಷಯಕ್ಕೆ ಬಂದರೆ ಈ ಕಾರು ಥೇಟ್ ಟಾಟಾ ಪಂಚ್ ಐಸಿಇ ಎಂಜಿನ್ ಕಾರಿನಂತೆಯೇ ಕಾಣುತ್ತದೆ. ಇದರ ಗಾತ್ರ ಮತ್ತು ಇತರ ಬಹುತೇಕ ಡಿಸೈನ್ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು, ಪೆಟ್ರೋಲ್ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿ ಆಗಿದೆ ಅಷ್ಟೇ.
ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್ ಸೆಟ್‌ಅಪ್ ಅನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿನ ಗ್ರಿಲ್ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಇದು ಮಾತ್ರವಲ್ಲದೇ ಕಾರಿನ ಗ್ರಿಲ್‌ನಲ್ಲಿಯೇ ನಿಮಗೆ ಚಾರ್ಜಿಂಗ್ ಸಾಕೆಟ್ ಸಹ ನೀಡಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಆಕರ್ಷಕ ಲುಕ್ ನಿಡುತ್ತದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ. ಈ ಯುನಿಟ್ Apple CarPlay ಮತ್ತು Android Auto ಎರಡಕ್ಕೂ ಕನೆಕ್ಟ್ ಆಗುತ್ತದೆ. ನವೀಕರಿಸಿದ ಸೆಂಟರ್ ಕನ್ಸೋಲ್ ಈಗ ಟಚ್ ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ಅನ್ನು ಸಂಯೋಜಿಸಿದೆ. ಹೆಚ್ಚುವರಿಯಾಗಿ ಟಾಟಾ ಪಂಚ್ ಇವಿ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್‌ನಲ್ಲಿ ಟಾಟಾ ಲೋಗೋವನ್ನು ನೀಡಲಾಗಿದೆ.
ಹೊಸ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿ, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು AQI ಡಿಸ್ಪ್ಲೇ, ಏರ್ ಪ್ಯೂರಿಫೈಯರ್ ಜೊತೆಗೆ ಆಟೋ ಫೋಲ್ಡ್ ORVM ಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲೆಥೆರೆಟ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಸನ್‌ರೂಫ್ ನೀಡಲಾಗಿದೆ.

ಸುರಕ್ಷತೆ ವಿಚಾರಕ್ಕೆ ಬಂದರೆ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಡಿಸ್ಕ್ ಬ್ರೇಕ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ವ್ಯೂವ್ ಮಿರರ್‌ಗಳು ಲಭ್ಯವಿದೆ. ಬ್ಯಾಟರಿ ಮತ್ತು ರೇಂಜ್ ಬಗ್ಗೆ ಹೇಳುವುದಾದ್ರೆ, ಟಾಟಾ ಮೋಟಾರ್ಸ್ ಈ ಕಾರಿನಲ್ಲಿ ಎರಡು ವೇರಿಯಂಟ್‌ಗಳನ್ನು ಪರಿಚಯಿಸಿದೆ.
ಒಂದು ಟಾಟಾ ಪಂಚ್ ಇವಿ ಮತ್ತು ಇನ್ನೊಂದು ಟಾಟಾ ಪಂಚ್ ಇವಿ ಲಾಂಗ್ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ರೇಂಜ್ ನೀಡುವುದರ ಜೊತೆಗೆ 80.46bhp ಪವರ್ ಹಾಗೂ 114Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ರೇಂಜ್ ನೀಡುವುದರ ಜೊತೆಗೆ 120.7bhp ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.
10,000 ರೂ.ವರೆಗಿನ ರಿಯಾಯಿತಿ: ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ (Tata Punch EV) ಮೇಲೆ ಈ ತಿಂಗಳು 10,000 ರೂ.ವರೆಗಿನ ಪ್ರಯೋಜನಗಳೊಂದಿಗೆ ನೀಡಲಾಗುತ್ತಿದೆ. ಈ ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಮತ್ತು ಸ್ಟಾಕ್‌ನ ಲಭ್ಯತೆಗೆ ಅವಲಂಬಿಸುತ್ತದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ರಿಯಾಯಿತಿಯ ಬಗ್ಗ್ ನಿಖರವಾದ ಮಾಹಿತಿ ತಿಳಿಯಲು ಹತ್ತರದ ಡೀಲರ್‌ಶಿಪ್‌ಗೆ ಭೇಟಿ ನೀಡಿ.


Click it and Unblock the Notifications