ಟಾಟಾಗೆ ಸೆಡ್ಡು ಹೊಡೆಯಲು ಚೀನಾ ಕಾರು ಸಜ್ಜು: ಎಂಜಿ ವಿಂಡ್ಸರ್‌ನಲ್ಲಿ ಅಂಥಾ ವಿಶೇಷತೆಗಳೇನಿವೆ?
ಎಂಜಿ ವಿಂಡ್ಸರ್ ಇವಿ ಭಾರತೀಯ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರಿನೊಂದಿಗೆ ಅದೃಷ್ಟ ಪರೀಕ್ಷಿಸಿಕೊಳ್ಳಲು ಸಜ್ಜಾಗಿದೆ. ಆದ್ರೆ ಟಾಟಾ ಮೋಟಾರ್ಸ್ ಪ್ರಸ್ತುತ ಶೇ85 ರಷ್ಟು ಪಾಲನ್ನು ಈಗಾಗಲೇ ಹೊಂದಿದೆ. ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಮತ್ತು ಪಂಚ್ ಇವಿ ಸೇರಿದಂತೆ ಭಾರತದ ಕೆಲವು ಜನಪ್ರಿಯ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ. ಟಾಟಾ ಪಂಚ್ ಇವಿ, ಮಾರುಕಟ್ಟೆಗೆ ತಡವಾಗಿ ಪ್ರವೇಶಿಸಿದ್ದರೂ ಸಾಕಷ್ಟು ಗಮನ ಸೆಳೆದಿದೆ. ಈಗ, ಎಂಜಿ ವಿಂಡ್ಸರ್ ಬಿಡುಗಡೆಯೊಂದಿಗೆ ಇದು ಸವಾಲನ್ನು ಎದುರಿಸುವ ನಿರೀಕ್ಷೆಯಿದೆ.
ವಿಂಡ್ಸರ್ ಇವಿ vs ಪಂಚ್ ಇವಿ ವಿಶೇಷತೆಗಳು: ಎಂಜಿ ವಿಂಡ್ಸರ್ ಇವಿ 38 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರ ಪವರ್‌ಫುಲ್ ಮೋಟಾರ್ 134 ಬಿಹೆಚ್‌ಪಿ ಪವರ್ ಮತ್ತು 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 331 ಕಿ.ಮೀ ಚಲಿಸುತ್ತದೆ.

ಇತ್ತ ಟಾಟಾ ಪಂಚ್ ಇವಿ ವಿಷಯಕ್ಕೆ ಬಂದರೆ 25 ಕಿಲೋವ್ಯಾಟ್ ಹಾಗೂ 35 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರ 25 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು 80 ಬಿಹೆಚ್‌ಪಿ ಪವರ್ ಮತ್ತು 114 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಪಂಚ್ ಇವಿಯ 35 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಲಾಂಗ್ ರೇಂಜ್ ಕಾರು ಹೆಚ್ಚು ಶಕ್ತಿಶಾಲಿ ಮೋಟರ್ ಅನ್ನು ಹೊಂದಿದೆ. ಇದು 120 ಬಿಹೆಚ್‌ಪಿ ಪವರ್ ಮತ್ತು 190 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪಂಚ್ ಇವಿ ಒಂದು ಬಾರಿ ಚಾರ್ಜ್ ಮಾಡಿದರೆ 365 ಕಿ.ಮೀ ಓಡಿಸಬಹುದು ಎಂದು ಟಾಟಾ ಹೇಳಿದೆ.

ಬೆಲೆ: ಎಂಜಿ ವಿಂಡ್ಸರ್ ಇವಿ ಮೂರು ಟ್ರಿಮ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರು 9.99 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದ್ದರೆ, ಬ್ಯಾಟರಿ ಚಂದಾದಾರಿಕೆ ಪ್ರತಿ ಕಿ.ಮೀಗೆ 3.5 ರೂ. ಇದೆ. ಇನ್ನು ಟಾಟಾ ಪಂಚ್ ಇವಿ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷದಿಂದ ರೂ.14.29 ಲಕ್ಷಗಳಾಗಿದೆ. ಇದು ಎರಡೂ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಸ್ಪರ ನಿಕಟವಾಗಿ ಸ್ಪರ್ಧಾತ್ಮಕವಾಗಿಸುತ್ತದೆ.
ಎಂಜಿ ವಿಂಡ್ಸರ್ ಇವಿಯ ಸಂಪೂರ್ಣ ಬೆಲೆ ಪಟ್ಟಿಯನ್ನು ಎಂಜಿ ಮೋಟಾರ್ ಇನ್ನೂ ಬಹಿರಂಗಪಡಿಸಿಲ್ಲ. ಇದು ವಾಹನದ ಬೆಲೆಗೆ ಹೆಚ್ಚುವರಿಯಾಗಿ ಬ್ಯಾಟರಿ ಚಂದಾದಾರಿಕೆ ಪ್ರೋಗ್ರಾಂನೊಂದಿಗೆ ಬರುತ್ತದೆ ಎಂಬ ಅಂಶಗಳನ್ನು ಪರಿಗಣಿಸಿ, ಯಾವ ಎಲೆಕ್ಟ್ರಿಕ್ ಎಸ್‌ಯುವಿ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂಬುದನ್ನು ನೋಡಬೇಕಾಗಿದೆ.
ಈ ಎರಡೂ ಕಾರುಗಳು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಆದರೆ ಎಂಜಿ ವಿಂಡ್ಸರ್ ಪಂಚ್ ಇವಿಗೆ ಹೋಲಿಸಿಕೊಂಡರೆ ತುಸು ಹೆಚ್ಚಿನ ಹೆಚ್ಚಿನ ಪ್ರೀಮಿಯಂ ಫೀಚರ್ಸ್ ಹೊಂದಿದೆ. ಈ ಎರಡೂ ಕಾರುಗಳು ಸದ್ಯ ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಹಾಗೂ ರೇಂಜ್ ನೀಡುವ ಬೆಸ್ಟ್ ಆಯ್ಕೆಗಳಾಗಿವೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications