ಗುಣಮಟ್ಟದಲ್ಲಿ 5-ಸ್ಟಾರ್ ರೇಟಿಂಗ್... ಅಗ್ಗದ ಬೆಲೆಯ ಟಾಟಾ ಕಾರಿದು... ಮಾರಾಟದಲ್ಲಿ ನಂ.1

ಭಾರತದಲ್ಲಿ ಟಾಟಾ ಕಾರುಗಳಿಗೆ ಭಾರೀ ಬೇಡಿಕೆ ಇದೆ, ಅದರಲ್ಲೂ ಗುಣಮಟ್ಟದ ವಿಷಯದಲ್ಲಿ ರಾಜಿಯಿಲ್ಲದೇ ಗ್ರಾಹಕರಿಗೆ ವಿಶ್ವಾಸಾರ್ಹ ವಾಹನಗಳನ್ನು ಕಂಪನಿ ಒದಗಿಸುತ್ತಿದೆ. ಇತರ ಬ್ರಾಂಡ್‌ಗಳಿಗೆ ಹೋಲಿಸಿಕೊಂಡರೆ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕಾರುಗಳನ್ನು ನೀಡುತ್ತಿರುವ ಕಾರಣ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಕಳೆದ ಜುಲೈ ತಿಂಗಳಲ್ಲಿಯೂ ದಾಖಲೆಯ ಮಟ್ಟದಲ್ಲಿ ಟಾಟಾ ಕಾರುಗಳು ಮಾರಾಟವಾಗಿವೆ. ಅದರಲ್ಲೂ ಟಾಟಾ ಪಂಚ್ ಮಧ್ಯಮ ವರ್ಗದವರಿಗೆ ವರದಾನವಾಗಿದೆ. ಈ ಕಾರಿನ ವರ್ಷಾರ್ಧದ ಮಾರಾಟ ಅಂಕಿ ಅಂಶಗಳು ಹಾಗೂ ವಿಶೇಷತೆಗಳನ್ನು ಇಲ್ಲಿ ನೋಡೋಣ.

ದೇಶದಲ್ಲಿ ಮಧ್ಯಮ ವರ್ಗದ ಕುಟುಂಬಗಳು ಹಚ್ಚಾಗಿವೆ, ಈ ವರ್ಗದ ಕುಟುಂಬಗಳು ಅಗ್ಗದ ಬೆಲೆ, ಗುಣಮಟ್ಟ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಹೆಚ್ಚಾಗಿ ಪರಿಗಣಿಸುತ್ತವೆ. ಈ ಎಲ್ಲಾ ವಿಷಯಗಳಿಗೆ ಹೇಳಿಮಾಡಿಸಿದ ಕಾರೆಂದರೆ ಟಾಟಾ ಪಂಚ್, ಹಾಗಾಗಿಯೇ ವರ್ಷದ ಮೊದಲಾರ್ಧದಲ್ಲಿ ಅತೀ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಆಗಿ ಮಿಂಚುತ್ತಿದೆ.

tata-punch-sales-report-h1-2024-64-per-cent-growth

2024 ರ ಮೊದಲಾರ್ಧ (ಜನವರಿ-ಜೂನ್) ಮಾರಾಟದಲ್ಲಿ ಅಗ್ರ 10 ಸ್ಥಾನಗಳಲ್ಲಿ ಎಸ್‌ಯುವಿಗಳು ಪ್ರಾಬಲ್ಯ ಹೊಂದಿವೆ, ನಂತರ ಹ್ಯಾಚ್‌ಬ್ಯಾಕ್‌ಗಳು ಆನಂತರ ಎಂಪಿವಿಗಳು ಇವೆ. ಇನ್ನು ಟಾಟಾ ಪಂಚ್ ವಿಷಯಕ್ಕೆ ಬಂದರೆ ಪ್ರತಿ ತಿಂಗಳ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಮೈಕ್ರೋ-ಎಸ್‌ಯುವಿ 2024 ರ ಮೊದಲಾರ್ಧ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ, ಬರೋಬ್ಬರಿ 1.10 ಲಕ್ಷ ಯುನಿಟ್ ಕಾರುಗಳು ಮಾರಾಟವಾಗಿವೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ ಟಾಟಾ ಪಂಚ್ ಕಾರುಗಳಿಗೆ ಹೋಲಿಸಿದರೆ ಶೇ64 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಸಂಖ್ಯೆಗಳಲ್ಲಿ ಶೇ53 ರಷ್ಟು ಪೆಟ್ರೋಲ್ ಪವರ್ ಟ್ರೇನ್ ಆದರೆ, ಸಿಎನ್‌ಜಿ ರೂಪಾಂತರಗಳು ಶೇ33 ಮತ್ತು ಎಲೆಕ್ಟ್ರಿಕ್ ಪಂಚ್ ಆವೃತ್ತಿಯು ಶೇ14 ರಷ್ಟು ಪಾಲನ್ನು ಪಡೆದಿದೆ.

tata-punch-sales-report-h1-2024-64-per-cent-growth

ಟಾಟಾ ಪಂಚ್ ವಿಶೇಷತೆಗಳು: ಟಾಟಾ ಪಂಚ್ ಕಾರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.6.13 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆಯು ರೂ.10.20 ಲಕ್ಷಗಳಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದ್ದು, ಬೆಲೆಗಳು 7.60 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಸಿಎನ್‌ಜಿ ರೂಪಾಂತರಗಳು 7.23 ಲಕ್ಷ ರೂ.ಗಳಿಂದ ಲಭ್ಯವಿದೆ.

ಎಂಜಿನ್: 1.2-ಲೀಟರ್, 3 ಸಿಲಿಂಡರ್, ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದೆ. ಇದು 86 ಪಿಎಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿ ಟ್ರಾನ್ಸ್ ಮಿಷನ್ ನೊಂದಿಗೆ ಹೊಂದಬಹುದು. ಹಾಗೆಯೇ ಇದನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಹೊಂದಬಹುದು, ಇದು ಮ್ಯಾನುವಲ್ ನೊಂದಿಗೆ ಮಾತ್ರ ಬರುತ್ತದೆ.

tata-punch-sales-report-h1-2024-64-per-cent-growth

ಮೈಲೇಜ್: ಟಾಟಾ ಪಂಚ್ 5 - ಸ್ಪೀಡ್ ಮ್ಯಾನುವಲ್ 20.09 ಕಿ.ಮೀ ಮತ್ತು ಎಎಂಟಿ ಟ್ರಾನ್ಸ್ ಮಿಷನ್ 18.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಟಾಟಾ ಹೇಳಿಕೊಂಡಿದೆ. ನಮ್ಮ ಪ್ರಕಾರ ನಗರದಲ್ಲಿ 13.86 ಕಿ.ಮೀ ಮತ್ತು ಹೆದ್ದಾರಿಯಲ್ಲಿ 17.08 ಕಿ.ಮೀ ಪಡೆಯಬಹುದು.

ಸುರಕ್ಷತೆ: ಪಂಚ್ ಕಾರಿನಲ್ಲಿ 2 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ಟಿಪಿಎಂಎಸ್, ರಿವರ್ಸಿಂಗ್ ಕ್ಯಾಮೆರಾ, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು 5 ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Monday, August 5, 2024, 19:39 [IST]
English summary
Tata punch sales report h1 2024 64 per cent growth
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+