ಹಬ್ಬಕ್ಕೆ ಸಾಮಾನ್ಯ ಜನರು ಕಾರು ಖರೀದಿಸಲು ರತನ್ ಟಾಟಾ ಕಂಪನಿಯಿಂದ ಈ ಕಾರಿಗೆ ಭರ್ಜರಿ ಡಿಸ್ಕೌಂಟ್
ಗರಿಷ್ಟ ಗುಣಮಟ್ಟದ ಕಾರುಗಳ ನಿರ್ಮಾಣ ಕಂಪನಿಯಾಗಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಈ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ತನ್ನ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿರುವ ಕಾರಣ 2024ರ ನವೀಕೃತ ಪಂಚ್ (Tata Punch Facelift) ಎಸ್‌ಯುವಿಯನ್ನು ಪರಿಚಯಿಸಿದೆ. ಇತ್ತೀಚೆಗೆ ಮೈಕ್ರೋ ಎಸ್‌ಯುವಿ ಸೆಗ್ಮೆಂಟಿನಲ್ಲಿ ಸಿಟ್ರನ್ ಸಿ3 ಮತ್ತು ಹ್ಯುಂಡೈ ಎಕ್ಸ್‌ಟರ್ ಕಾರುಗಳು ಸುಧಾರಿತ ಫೀಚರ್‌ಗಳೊಂದಿಗೆ ಪೈಪೋಟಿ ನೀಡುತ್ತಿವೆ. ಅಲ್ಲದೇ ಟಾಟಾ ಪಂಚ್ ಕೂಡ ನವೀಕರಣಗೊಂಡು ಸುಧೀರ್ಘ ಸಮಯದಿಂದ ಟಾಟಾ ಪಂಚ್‌ಗೆ ಅಪ್‌ಡೇಟ್‌ಗಳನ್ನು ನೀಡಿ ಬಿಡುಗಡೆ ಮಾಡಲಾಗಿದೆ.
ಮೊದಲಿನಿಂದಲು ಟಾಟಾ ಪಂಚ್ (Tata Punch) ತನ್ನ ವಿಭಾಗದಲ್ಲಿ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಉತ್ತಮ ನಿರ್ಮಾಣ ಗುಣಮಟ್ಟ, ಯೋಗ್ಯ ವೈಶಿಷ್ಟ್ಯಗಳು, ಕಡಿಮೆ ಬೆಲೆ ಸೇರಿದಂತೆ ತನ್ನ ಗ್ರಾತಕ್ಕೆ ತಕ್ಕಂತೆ ಎಂಜಿನ್ ಪವರ್‌ನೊಂದಿಗೆ ಗ್ರಾಹಕರ ಮೆಚ್ಚುಗೆ ಪಡೆದಿದೆ. ಹಾಗಾದ್ರೆ 2024ರ ನವೀಕೃತ ಟಾಟಾ ಪಂಚ್ ಎಸ್‌ಯುವಿ ಮಧ್ಯಮ ವರ್ಗದ ಜನರಿಗೆ ಉತ್ತಮ ಆಯ್ಕೆಯಾಗಿದೆ. ಈ ಟಾಟಾ ಪಂಚ್ ಎಸ್‍ಯುವಿಗೆ ಹಬ್ಬದ ಸೀಸನ್ ನಲ್ಲಿ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ.

ಜನಪ್ರಿಯ ಟಾಟಾ ಪಂಚ್ ಮೆಕ್ರೋ ಎಸ್‌ಯುವಿಯಾಗಿದೆ. ಈ ಕಾರಿನ 2024ರ ಟಾಟಾ ಪಂಚ್ ಎಸ್‍ಯುವಿಯ ರೂಪಾಂತರಗಳ ಮೇಲೆ ರೂ.15,000 ದಿಂದ ರೂ.18,000ವರೆಗೆ ರಿಯಾಯಿತಿ ಘೋಷಿಸಿದರೆ. 2023ರ ಪಂಚ್ ಮಾಡೆಲ್ ಮೇಲೆ ಸಹ ರೂ.15,000 ದಿಂದ ರೂ.18,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಸದ್ಯಕ್ಕೆ ಈ ಟಾಟಾ ಪಂಚ್ ರೂ.6.13 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.
ಸಿಟ್ರನ್ ಸಿ3 ಮತ್ತು ಹ್ಯುಂಡೈ ಎಕ್ಸ್‌ಟರ್‌ಗೆ ಪ್ರತಿಸ್ಪರ್ಧಿಯಾಗಿರುವ ಪಂಚ್, ವೇರಿಯೆಂಟ್ ಶ್ರೇಣಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಪರಿಷ್ಕರಣೆಯನ್ನು ಪಡೆಯುತ್ತದೆ. ಫೀಚರ್ ಸೆಟ್‌ನಿಂದ ಪ್ರಾರಂಭಿಸಿ, 2024ರ ಪಂಚ್ ಈಗ ಸೆಂಟರ್ ಕನ್ಸೋಲ್‌ನಲ್ಲಿ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಹಿಂಭಾಗದಲ್ಲಿ ಎಸಿ ವೆಂಟ್‌ಗಳನ್ನು ಒಳಗೊಂಡಿವೆ.

ಇದರೊಂದಿಗೆ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಹೊಸ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಮುಂಭಾಗದಲ್ಲಿ ಆರ್ಮ್ ರೆಸ್ಟ್ ನೀಡಲಾಗಿದೆ. ಈ ಟಾಟಾ ಪಂಚ್ ಪ್ಯೂರ್, ಪ್ಯೂರ್ (O), ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಡ್ವೆಂಚರ್ S, ಅಡ್ವೆಂಚರ್ ಪ್ಲಸ್ ಎಸ್, ಅಕಾಂಪ್ಲಿಶ್ಡ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್, ಕ್ರಿಯೇಟಿವ್ ಪ್ಲಸ್ ಎಸ್ ಎಂಬ ವೇರಿಯೆಂಟ್‌ಗಳನ್ನು ಹೊಂದಿವೆ.
ಈ ಟಾಟಾ ಪಂಚ್ ಎಸ್‍ಯುವಿಯಲ್ಲಿ 1.2 - ಲೀಟರ್, ಮೂರು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ. ಒಟ್ಟು ಏಳು ಆವೃತ್ತಿಗಳಲ್ಲಿ ನೀಡಲಾಗುವ ಸಿಎನ್‌ಜಿ ಟ್ರಿಮ್ ಕೂಡ ಆಫರ್ ನಲ್ಲಿದೆ.

ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ ಕಾರು ಹಳೆಯ ಪಂಚ್‌ನಂತೆ ಅದೇ 87 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದೆಡೆ ಹಳೆಯ ಪಂಚ್ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 2024ರ ಆಗಸ್ಟ್‌ವರೆಗೆ ಬರೋಬ್ಬರಿ 4 ಲಕ್ಷ ಯುನಿಟ್ ಪಂಚ್ ಎಸ್‌ಯುವಿಗಳು ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








