TATA: ಗಮನಿಸಿ.. ಸರ್ಕಾರದ ಮಾರ್ಗಸೂಚಿ, ಟಾಟಾದ ಎಲೆಕ್ಟ್ರಿಕ್ ಕಾರುಗಳ 'ರೇಂಜ್' ಕಡಿಮೆ ಆಯ್ತು!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ರೇಂಜ್ (ಮೈಲೇಜ್) ನಿರ್ಧರಿಸುವ ಸಲುವಾಗಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಅದರ ಬೆನ್ನಲ್ಲೇ ಜನಪ್ರಿಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ (Tata Motors) ಕರ್ವ್ ಇವಿ (Curvv EV), ನೆಕ್ಸಾನ್ ಇವಿ (Nexon EV), ಪಂಚ್ ಇವಿ (Punch EV) ಹಾಗೂ ಟಿಯಾಗೊ ಇವಿಗಳು (Tiago EV) ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮಿಸುವ ದೂರದ ಬಗ್ಗೆ ನೀಡುತ್ತಿದ್ದ ಅಂಕಿಅಂಶದಲ್ಲಿ ಭಾರಿ ಬದಲಾವಣೆ ಮಾಡಿದೆ. ಸರಳವಾಗಿ ಹೇಳಬೇಕಾದರೆ, ಈ ಎಲೆಕ್ಟ್ರಿಕ್ ಕಾರುಗಳ 'ರೇಂಜ್' ಕಡಿಮೆಯಾಗಿದೆ.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ನೂತನ ಎಲೆಕ್ಟ್ರಿಕ್ ವಾಹನಗಳನ್ನು (Electric Vehicles) ಪಿ1 ಹಾಗೂ ಪಿ2 ಎಂಬ ಎರಡು ಹಂತದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಪಿ1 ಎಂಬುದು ನಗರ ಚಾಲನೆ ಮತ್ತು ಪಿ2 ಎಂಬುದು ಹೆದ್ದಾರಿ ಚಾಲನೆಯನ್ನು ಪ್ರತಿನಿಧಿಸುತ್ತದೆ. ಈ ಹಿಂದೆ, ನಗರ ಚಾಲನೆ (ಪಿ1) ಆಧಾರದ ಮೇಲೆ ರೇಂಜ್‌ನ್ನು ನಿರ್ಧರಿಸಲಾಗುತ್ತಿತ್ತು. ಸದ್ಯ ನಗರ ಚಾಲನೆ ಹಾಗೂ ಹೆದ್ದಾರಿ ಚಾಲನೆಗೆ ಅನುಗುಣವಾಗಿ ಒಟ್ಟಾರೆ ರೇಂಜ್ (ಮೈಲೇಜ್) ಅಂಕಿಸಂಖ್ಯೆಯನ್ನು ನೀಡಲಾಗುತ್ತದೆ.

Tata Reduces Claimed Range Of Curvv EV Nexon EV Punch EV tiago ev details

ಇದರೊಟ್ಟಿಗೆ ಮೋಟಾರ್ಸ್ 'ಸಿ75' ಎಂಬ ಆಂತರಿಕ ಪರೀಕ್ಷೆಯಲ್ಲಿಯೂ ಕಾರುಗಳ ರೇಂಜ್‌ನ್ನು ನಿರ್ಣಯಿಸುತ್ತದೆ. ಇದು ನೈಜ ಚಾಲನಾ ಪರಿಸ್ಥಿತಿ (Real Driving Conditions), ತಾಪಮಾನ (Temperature), ಹೆಚ್ಚಿನ ವೇಗ (Higher speeds) ಸೇರಿದಂತೆ ವಿವಿಧ ಮಾನದಂಡಗಳನ್ನು ಒಳಗೊಂಡಿದೆ. ಈ ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಭರ್ತಿ ಚಾರ್ಜ್‌ನಲ್ಲಿ ಕಂಪನಿಯ ಎಲೆಕ್ಟ್ರಿಕ್ ಕಾರೊಂದು ಕ್ರಮಿಸುವ ದೂರವನ್ನು ಅಳೆಯಲಾಗುತ್ತದೆ.

ಈಚೆಗೆ ಬಿಡುಗಡೆಯಾಗಿದ್ದ ಟಾಟಾ ಕರ್ವ್ ಇವಿ (Tata Curvv EV) 55 ಕೆಡಬ್ಲ್ಯೂಹೆಚ್ ಮತ್ತು 45 ಕೆಡಬ್ಲ್ಯೂಹೆಚ್ ಎಂಬ 2 ವಿಧದ ಬ್ಯಾಟರಿ ಪ್ಯಾಕ್‌ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಕಾರು ಬಿಡುಗಡೆಯಾದಾಗ ಪೂರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 585 ಕಿಲೋಮೀಟರ್‌ ಹಾಗೂ 502 ಕಿಲೋಮೀಟರ್‌ ರೇಂಜ್ (ಮೈಲೇಜ್) ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿತ್ತು. ಪ್ರಸ್ತುತ 502 ಕಿಲೋಮೀಟರ್‌ ಮತ್ತು 430 ಕಿಲೋಮೀಟರ್‌ಗಳಿಗೆ ರೇಂಜ್‌ನ್ನು ಪರಿಷ್ಕರಿಸಲಾಗಿದೆ.

Tata Reduces Claimed Range Of Curvv EV Nexon EV Punch EV tiago ev details

ಸಿ75 ಅನ್ವಯ, ನೂತನ ಟಾಟಾ ಕರ್ವ್ ಇವಿಯ 55 ಕೆಡಬ್ಲ್ಯೂಹೆಚ್ ರೂಪಾಂತರವು (ವೇರಿಯೆಂಟ್) 400 ರಿಂದ 425 ಕಿಲೋಮೀಟರ್‌ ಹಾಗೂ 45 ಕೆಡಬ್ಲ್ಯೂಹೆಚ್ ರೂಪಾಂತರವು 300 ರಿಂದ 350 ಕಿಲೋಮೀಟರ್‌ ರೇಂಜ್ ನೀಡುತ್ತದೆ. ದೇಶೀಯವಾಗಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಕರ್ವ್ ಇವಿ ರೂ.17.49 ಲಕ್ಷದಿಂದ ರೂ.21.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಹಿಂದೆ ಟಾಟಾ ನೆಕ್ಸಾನ್ ಇವಿಯ (Tata Nexon EV) 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದ ರೂಪಾಂತರ 465 ಕಿಲೋಮೀಟರ್‌ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿತ್ತು. ಈಗ, ಅದು 390 ಕಿಲೋಮೀಟರ್ ಆಗಿದೆ. 30 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ರೂಪಾಂತರದ ರೇಂಜ್‌ನ್ನು 325 ಕಿಲೋಮೀಟರ್‌ಗಳಿಂದ 275 ಕಿಲೋಮೀಟರ್‌ಗೆ ಬದಲಾಯಿಸಲಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ 'ಸಿ75' ರೇಂಜ್‌ನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ.

ಟಾಟಾ ಪಂಚ್ ಇವಿಯ (Tata Punch EV) ರೇಂಜ್‌ನ್ನು 35 ಕೆಡಬ್ಲ್ಯೂಹೆಚ್ ಹಾಗೂ 25 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಕ್ರಮವಾಗಿ 365 ಕಿಲೋಮೀಟರ್‌ ಮತ್ತು 265 ಕಿಲೋಮೀಟರ್‌ಗಳಿಗೆ ಬದಲಾವಣೆ ಮಾಡಲಾಗಿದೆ. ಟಿಯಾಗೊ ಇವಿ (Tiago EV) ರೇಂಜ್‌ನ್ನು 19.2 ಕೆಡಬ್ಲ್ಯೂಹೆಚ್ ಹಾಗೂ 24 ಕೆಡಬ್ಲ್ಯೂಹೆಚ್ ಬ್ಯಾಟರಿಗೆ ತಕ್ಕಂತೆ 221 ಕಿಲೋಮೀಟರ್‌ ಮತ್ತು 275 ಕಿಲೋಮೀಟರ್‌ಗಳಿಗೆ ಪರಿಷ್ಕರಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 4, 2024, 13:31 [IST]
English summary
Tata reduces claimed range of curvv ev nexon ev punch ev tiago ev details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+