Tata: ಟಾಟಾ ಸಫಾರಿ EV ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?

ಭಾರತೀಯ ಆಟೋ ಉದ್ಯಮದಲ್ಲಿ ಟಾಟಾ ಮೋಟಾರ್ಸ್(Tata Motors), ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಸ್ಥಾನವನ್ನು ಉಳಿಸಿಕೊಳ್ಳಲು ತನ್ನ ಲೈನಪ್‌ನಲ್ಲಿರುವ ಇತರ ಮಾದರಿಗಳನ್ನು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಈ ಪಟ್ಟಿಯಲ್ಲಿ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಲೆಕ್ಟ್ರಿಕ್ ಕಾರುಗಳಿದ್ದು, ಈ ಎರಡೂ ಎಲೆಕ್ಟ್ರಿಕ್ ಕಾರುಗಳ ಪರೀಕ್ಷೆಗಳು ಜೋರಾಗಿ ನಡೆಯುತ್ತಿವೆ. ವರದಿಗಳ ಪ್ರಕಾರ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಲೆಕ್ಟ್ರಿಕ್ ಕಾರುಗಳು ಕ್ರಮವಾಗಿ 2024 ಹಬ್ಬದ ಸೀಸನ್ ಮತ್ತು 2025ರ ಮಾರ್ಚ್‌ ವೇಳೆಗೆ ಬರುವ ನಿರೀಕ್ಷೆಯಿದೆ.

ಟಾಟಾ ಮೋಟಾರ್ಸ್ ಮುಂದಿನ ಐದು ವರ್ಷಗಳಲ್ಲಿ ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ವಿಭಾಗಗಳಲ್ಲಿ 10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಟಾಟಾದ 2024ರ ಉತ್ಪನ್ನ ಯೋಜನೆಗಳ ಬಗ್ಗೆ ಮಾತನಾಡುವುದಾದರೆ, ಕಂಪನಿಯು ಈಗಾಗಲೇ ಪಂಚ್ ಇವಿಯನ್ನು ಪರಿಚಯಿಸಿದೆ, ಇನ್ನೇನು ಆಗಸ್ಟ್ 7 ರಂದು ಹೊಸ ಟಾಟಾ ಕರ್ವ್ ಇವಿ ಕೂಡ ಬಿಡುಗಡೆಯಾಗಲಿದೆ.

tata-safari-electric-suv-expected-launch-and-price-details

ಸಫಾರಿ ಇವಿ ವಿಶೇಷತೆಗಳೇನು?: ಕ್ಲೋಸ್ಡ್-ಆಫ್ ಗ್ರಿಲ್, ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು ಮತ್ತು ಇವಿ ಬ್ಯಾಡ್ಜ್ ಗಳಂತಹ ಕೆಲವು ಇವಿ-ನಿರ್ದಿಷ್ಟ ಕಾಸ್ಮೆಟಿಕ್ ಬದಲಾವಣೆಗಳನ್ನು ವಾಹನದಲ್ಲಿ ಮಾಡಲಾಗುವುದು. ಐಸಿಇ ಆವೃತ್ತಿಯಲ್ಲಿ ನಾವು ನೋಡಿದಂತೆ ಎಲೆಕ್ಟ್ರಿಕ್ ಎಸ್‌ಯುವಿ 4-ಸ್ಪೋಕ್ ಸ್ಟೀರಿಂಗ್ ನೊಂದಿಗೆ 'ಟಾಟಾ ಲೋಗೊ' ಮತ್ತು ಡ್ಯಾಶ್ ಬೋರ್ಡ್ ವಿನ್ಯಾಸದೊಂದಿಗೆ ಬರಲಿದೆ.

ಬೆಲೆ & ರೇಂಜ್: ಬೆಲೆ ನೋಡುವುದಾದ್ರೆ, ಅಂದಾಜು 32 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಟಾಟಾ ಸಫಾರಿ ಇವಿಯು ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 500 ಕಿ.ಮೀ. ಓಡುವ ವಿಶ್ವಾಸವಿದೆ. ಅದರ ಪವರ್ ಟ್ರೇನ್ ವಿವರಗಳು ಇನ್ನೂ ರಹಸ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

tata-safari-electric-suv-expected-launch-and-price-details

ವೈಶಿಷ್ಟ್ಯಗಳು: ಹೊಸ ಟಾಟಾ ಸಫಾರಿ ಇವಿ 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್‌ಗಳು, ಡ್ಯುಯಲ್ ಜೋನ್ ಎಸಿ ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಸುರಕ್ಷತೆ: ಸುರಕ್ಷತೆಗಾಗಿ ಮೂರು ಸಾಲಿನ ಇವಿ ಬ್ಲೈಂಡ್ ಸ್ಪಾಟ್ ಮಾನಿಟರ್, ADAS ಟೆಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು 7 ಏರ್‌ಬ್ಯಾಗ್‌ಗಳೊಂದಿಗೆ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಬಿವೈಡಿ ಅಟ್ಟೋ 3, ಎಂಜಿ ಝಡ್-ಎಸ್‌ ಇವಿ ಮತ್ತು ಮುಂಬರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳಂತಹ ಎಲೆಕ್ಟ್ರಿಕ್ ವಾಹನಗಳಿಗೆ ಸವಾಲು ಹಾಕಲಿದೆ.

tata-safari-electric-suv-expected-launch-and-price-details

ಎಲೆಕ್ಟ್ರಿಕ್ ವಾಹನಗಳ ಮೇಲಿನ ಗ್ರಾಹಕರ ಅಪನಂಬಿಕೆಯ ನಡುವೆಯೂ ಜನರ ವಿಶ್ವಾಸ ಗಳಿಸುತ್ತಾ ಇತರ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣುತ್ತಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮುಂಬರುವ ಕಾರುಗಳು ಕೂಡ ಟಾಟಾಗೆ ಜನಪ್ರಿಯತೆ ತಂದುಕೊಂಡುವ ವಿಶ್ವಾದಲ್ಲಿ ಟಾಟಾ ಮೋಟಾರ್ಸ್ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 28, 2024, 4:00 [IST]
English summary
Tata safari electric suv expected launch and price details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+