ಕಲ್ಲು ಬಂಡೆಯಂತಿರುವ ಸಫಾರಿಯ ಈ ರೂಪಾಂತರ ಪ್ರಮುಖ ಫೀಚರ್ಸ್ ಕೈಬಿಟ್ಟ ಟಾಟಾ

ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata motors) ತನ್ನ ಸಫಾರಿ ಎಸ್‍ಯುವಿಯನ್ನು ಹೊಸ ನವೀಕರಣದೊಂದಿಗೆ ಬಿಡುಗಡೆಗೊಳಿಸಿತು. ಈ ಜನಪ್ರಿಯ ಟಾಟಾ ಸಫಾರಿ (Tata Safari) ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯು ಈ ವರ್ಷದ ಬಹು ನಿರೀಕ್ಷಿತ ಕಾರುಗಳ ಬಿಡುಗಡೆಯಾದ ಮಾದರಿಗಳಲ್ಲಿ ಒಂದಾಗಿದೆ. ಸುರಕ್ಷತೆ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿತು. ಇದೀಗ ಟಾಟಾ ಸಫಾರಿ ಎಸ್‌ಯುವಿಯ ಪ್ಯೂರ್ ರೂಪಾಂತರವು ಕೆಲವು ಫೀಚರ್ಸ್ ಗಳನ್ನು ಕಳೆದುಕೊಂಡಿದೆ.

ಈ ಬದಲಾವಣೆಗಳ ಹೊರತಾಗಿಯೂ, ಈ ಪ್ರೀಮಿಯಂ ಎಸ್‍ಯುವಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಟಾಟಾ ಸಫಾರಿ ಎಸ್‌ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.49 ಲಕ್ಷದಿಂದ ರೂ.25.09 ಲಕ್ಷವಾಗಿದೆ. ಈ ಸಫಾರಿ ಲೈನ್-ಅಪ್‌ನಲ್ಲಿ ಪ್ಯೂರ್ ವೆರಿಯೆಂಟ್ ಅನ್ನು ಹಣಕ್ಕೆ ಹೆಚ್ಚು ಮೌಲ್ಯದ ಮಾದರಿ ಎಂದು ಕರೆಯಲಾಗುತ್ತದೆ. ಹೊಸ ಸುದ್ದಿ ಏನೆಂದರೆ ಕಂಪನಿಯು ಇದರಿಂದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಿದೆ.

Tata Safari

ಟಾಟಾ ಸಫಾರಿ ಎಸ್‍ಯುವಿಯ ಪ್ಯೂರ್ ವೆರಿಯಂಟ್‌ನಿಂದ ಮೂರನೇ ಸಾಲಿನ ಎಸಿ ವೆಂಟ್‌ಗಳನ್ನು ತೆಗೆದುಹಾಕಿದೆ ಮತ್ತು ಅವುಗಳನ್ನು ಡಮ್ಮಿ ಕ್ಯಾಪ್‌ಗಳೊಂದಿಗೆ ಬದಲಾಯಿಸಿದೆ. ಈ ಎಸ್‍ಯುವಿಯ ಪ್ಯೂರ್, ಪ್ಯೂರ್ ಪ್ಲಸ್ ಮತ್ತು ಪ್ಯೂರ್ ಪ್ಲಸ್ ಎಸ್‌ನಿಂದ ಫ್ಲೋರ್ ಕನ್ಸೋಲ್ ಆರ್ಮ್‌ರೆಸ್ಟ್‌ಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಸಫಾರಿಯ ಮೇಲಿನ ಟ್ರಿಮ್‌ಗಳು ಇನ್ನು ಮುಂದೆ ಸ್ಪೇರ್ ವ್ಹೀಲ್ ಮತ್ತು ಸ್ಪೇರ್ ವೀಲ್ ಕ್ಯಾರಿಯರ್ ಅನ್ನು ಪಡೆಯುವುದಿಲ್ಲ.

ಟಾಟಾ ಮೋಟಾರ್ಸ್ ಸಫಾರಿ ಪ್ಯೂರ್ ರೂಪಾಂತರಗಳಿಂದ ಎರಡು ಮತ್ತು ಮೂರನೇ ಸಾಲುಗಳಿಗೆ ರೂಫ್ ಲ್ಯಾಂಪ್‌ಗಳನ್ನು ತೆಗೆದುಹಾಕಿರುವುದು ನಿರಾಶಾದಾಯಕವಾಗಿದೆ. ಟಾಟಾ ಈ ಟ್ರಿಮ್‌ಗಳಲ್ಲಿ ಲಭ್ಯವಿರುವ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಎಂಪಿಎಸ್) ಅನ್ನು ಸಹ ತೆಗೆದುಹಾಕಿದೆ. ಆದ್ದರಿಂದ, ವ್ಹೀಲ್ ಗಳಲ್ಲಿನ TPMS ವಾಲ್ವ್‌ಗಳು ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ TPMS ಮುಂದೆ ಆಫರ್‌ನಲ್ಲಿ ಇರುವುದಿಲ್ಲ. ಇವುಗಳ ಹೊರತಾಗಿ ನಕಲಿ CPL & TSO ಮತ್ತು LED ಲ್ಯಾಂಪ್ ಗಳನ್ನು ಹೊರಗಿಡಲಾಗಿದೆ.

Tata Safari

ಈ ರೂಪಾಂತರಗಳಲ್ಲಿ ಒದಗಿಸಲಾದ ORVM ಗಳನ್ನು ಈಗ ಟಾಗಲ್‌ನೊಂದಿಗೆ ಮ್ಯಾನುವಲ್ ಆಗಿ ಕಾನ್ಫಿಗರ್ ಮಾಡಬಹುದು. ಆದ್ದರಿಂದ ಒಟ್ಟಾರೆ ಸಫಾರಿಯ ಪ್ಯೂರ್ ಮಾದರಿಗಳು ಈಗ ವೈಶಿಷ್ಟ್ಯದ ಹೊರಗಿಡುವಿಕೆಯನ್ನು ಎದುರಿಸುತ್ತಿವೆ. ಟಾಪ್ ಮಾಡೆಲ್‌ಗಳ ಮಾರಾಟವನ್ನು ಹೆಚ್ಚಿಸಲು ಟಾಟಾ ಮೋಟಾರ್ಸ್ ಈ ಕ್ರಮ ಕೈಗೊಂಡಿದೆ. ಮೂರು-ಸಾಲಿನ ಎಸ್‍ಯುವಿಯ ಪ್ಯೂರ್ ರೂಪಾಂತರವು ಶಾರ್ಕ್-ಫಿನ್ ಆಂಟೆನಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.

ಇದೆಲ್ಲವನ್ನೂ ಬದಿಗಿಟ್ಟು, ಮಾದರಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಟಾಟಾ ಸಫಾರಿ ಎಸ್‍ಯುವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 168bhp ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ.

Tata Safari

ಇನ್ನು ಟಾಟಾ ಮೋಟಾರ್ಸ್ ತನ್ನ ಪ್ರಮುಖ ಎಸ್‍ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಯನ್ನು ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರ ಬೇಡಿಕೆ ಪೆಟ್ರೋಲ್ ಎಸ್‍ಯುವಿ ಮಾದರಿಗಳಾಗಿತ್ತು. ಇದೀಗ ಗ್ರಾಹಕರ ಬೇಡೀಕೆಯನ್ನು ಪ್ಯೂರೈಸಲು ಟಾಟಾ ಕಂಪನಿಯು ಶೀಘ್ರದಲ್ಲೇ ಹ್ಯಾರಿಯರ್ ಮತ್ತು ಸಫಾರಿಯನ್ನು ಪೆಟ್ರೋಲ್ ಎಸ್‍ಯುವಿಗಳಾಗಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬರಲಿರುವ ಎಲ್ಲಾ ಟಾಟಾ ಪೆಟ್ರೋಲ್ ಆವೃತ್ತಿಗಳಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 1, 2024, 9:00 [IST]
English summary
Tata safari pure variants feature list revised details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+