ಫ್ಯಾಮಿಲಿ ಕಾರಿಗೆ ರತನ್ ಟಾಟಾ ಕಂಪನಿಯಿಂದ ಡಿಸ್ಕೌಂಟ್: 2 ಕುಟುಂಬ ಪ್ರಯಾಣಿಸಬಹುದು!
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata motors) ತನ್ನ ಸಫಾರಿ ಎಸ್‍ಯುವಿಯನ್ನು ಹೊಸ ನವೀಕರಣದೊಂದಿಗೆ ಬಿಡುಗಡೆಗೊಳಿಸಿತು ಈ ಜನಪ್ರಿಯ ಟಾಟಾ ಸಫಾರಿ (Tata Safari) ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯು ಈ ವರ್ಷದ ಬಹು ನಿರೀಕ್ಷಿತ ಕಾರುಗಳ ಬಿಡುಗಡೆಯಾದ ಮಾದರಿಗಳಲ್ಲಿ ಒಂದಾಗಿದೆ. ಸುರಕ್ಷತೆ ಮತ್ತು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿರುವ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡು ಗ್ರಾಹಕರನ್ನು ಸೆಳೆಯುದಿದೆ.
ಟಾಟಾ ಸಫಾರಿಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಈ ಸಫಾರಿ ಎಸ್‍ಯುವಿಯ ಮೇಲೆ ರಿಯಾಯಿತಿ ಘೋಷಿಸಿದೆ. ಈ ಎಸ್‍ಯುವಿಯ ಎಲ್ಲ ರೂಪಾಂತರಗಳು ಸಹ ರೂ.25,000 ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಹೊಸ ಸಫಾರಿ ಎಸ್‌ಯುವಿ ರೂ.15.49 ರಿಂದ ರೂ.26.79 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಟಾಟಾ ಸಫಾರಿ ಎಸ್‍ಯುವಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಮಾರಾಟವಾಗುತ್ತಿದೆ.

ಈ ಟಾಟಾ ಸಫಾರಿ ಎಸ್‍ಯುವಿ ವಿನ್ಯಾಸ ಮತ್ತು ವಿನ್ಯಾಸವು ಗಮನಾರ್ಹ ಸುಧಾರಣೆಗಳನ್ನು ಕಂಡಿದೆ. ನವೀಕರಿಸಿದ ಸಫಾರಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಮತ್ತು ವಿಶಾಲವಾದ ಮುಂಭಾಗದ ಗ್ರಿಲ್ ಅನ್ನು ಪ್ರದರ್ಶಿಸುತ್ತದೆ. ಈ ಟಾಟಾ ಸಫಾರಿ ಏರ್ ಇನ್ ಟೆಕ್ ಅನ್ನು ಹೊಂದಿದೆ. ಈ ಟಾಟಾ ಸಫಾರಿಯು ಆಯತಾಕಾರದ-ಆಕಾರದ ಹೆಡ್‌ಲ್ಯಾಂಪ್‌ಗಳನ್ನು ಸ್ವಲ್ಪ ಎತ್ತರದಲ್ಲಿ ಇರಿಸಲಾಗಿದೆ ಮತ್ತು LED ಲೈಟ್ ಬಾರ್ ಮೂಲಕ ಸಂಪರ್ಕಿಸಲಾಗಿದೆ. ಈ ಎಸ್‍ಯುವಿಯಲ್ಲಿ 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.
ಟಾಟಾ ಸಫಾರಿ ಎಸ್‍ಯುವಿಯ ಹಿಂಭಾಗದಲ್ಲಿ ಹೊಸ ಬಂಪರ್ ವಿನ್ಯಾಸ ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳೊಂದಿಗೆ LED ಬಾರ್ ಮೂಲಕ ಸಂಪರ್ಕಿಸಲಾಗಿದೆ. ಈ ಟಾಟಾ ಸಫಾರಿ ಎಸ್‍ಯುವಿಯ ಎಂಟ್ರಿ ಲೆವೆಲ್ ಮಾದರಿಯು ಲೂನಾರ್ ಸ್ಲೇಟ್ ಮತ್ತು ಸ್ಟೆಲ್ಲರ್ ಫ್ರಾಸ್ಟ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಸಫಾರಿಯ ಡಾರ್ಕ್ ಎಡಿಷನ್ ಮಾದರಿಯು ಒಬೆರಾನ್ ಬ್ಲ್ಯಾಕ್ ಫಿನಿಶ್‌ನೊಂದಿಗೆ ಬರುತ್ತದೆ.

ಇನ್ನು ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಹರ್ಮನ್‌ನಿಂದ ಮೂಲವಾಗಿದೆ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನಕ್ಟಿವಿಟಿಯನ್ನು ಹೊಂದಿದೆ. ಇದು ಬ್ಯಾಕ್‌ಲಿಟ್ ಲೋಗೋದೊಂದಿಗೆ ಟಾಟಾದ ಹೊಸ 4-ಸ್ಪೋಕ್ ಸ್ಟೀರಿಂಗ್ ವೀಲ್, ನ್ಯಾವಿಗೇಷನ್ ಬೆಂಬಲದೊಂದಿಗೆ ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.
ಇನ್ನು ಎರಡು ಟಾಗಲ್‌ಗಳೊಂದಿಗೆ ಟಚ್-ಆಧಾರಿತ HVAC ಕಂಟ್ರೋಲ್ ಗಳು ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಸಹ ಒಳಗೊಂಡಿದೆ. ಈ ಟಾಟಾ ಸಫಾರಿ ಫೇಸ್‌ಲಿಫ್ಟ್‌ನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಎಸ್‍ಯುವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 168bhp ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ಟಾಟಾ ಸಫಾರಿ ಎಸ್‍ಯುವಿಯಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಸೇರಿಸಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ನವೀಕರಿಸಲಾಗಿದೆ.
ಇನ್ನು ಈ ಸಫಾರಿ ಎಸ್‍ಯುವಿಯಲ್ಲಿ 360-ಡಿಗ್ರಿ ಸರೌಂಡ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, 10-ಸ್ಪೀಕರ್ JBL ಆಡಿಯೊ ಸಿಸ್ಟಮ್ ಮತ್ತು ಪನರೊಮಿಕ್ ಸನ್‌ರೂಫ್ ಹೊಂದಿದೆ. ಈ ಟಾಟಾ ಸಫಾರಿ ಎಸ್‍ಯುವಿಯ ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ. ಈ ಟಾಟಾ ಸಪಾರಿ ಎಸ್‍ಯುವಿಯು ಫ್ಯಾಮಿಲಿ ಕಾರ್ ಆಗಿಯು ಜನಪ್ರಿಯವಾಗಿದೆ.


Click it and Unblock the Notifications