ಟಾಟಾ ಸಫಾರಿ VS ಹ್ಯಾರಿಯರ್: ಈ ಬಲಿಷ್ಟ ಕಾರುಗಳಲ್ಲಿ ಯಾವುದು ಬೆಸ್ಟ್! ನಿಮ್ಮ ಆಯ್ಕೆ ಯಾವುದು?
ಭಾರತದ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಯಾದ ಟಾಟಾ ಮೋಟಾರ್ಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟಾಟಾ ಮೋಟಾರ್ಸ್‌ನ ಪ್ರಮುಖ ಕಾರುಗಳಲ್ಲಿ ಹೆಚ್ಚು ಪ್ರಸಿದ್ದವಾಗಿರುವುದು ಟಾಟಾ ಹ್ಯಾರಿಯರ್ ಮತ್ತು ಸಫಾರಿ. ಟಾಟಾ ಕಡೆಯ ಮದಗಜಗಳು ಎಂದೇ ಹೇಳಬಹುದು. ಇಂದಿನ ಲೇಖನದಲ್ಲಿ ನಿಮಗೆ ಯಾವುದು ಸೂಕ್ತ ಎಂದು ನೋಡೋಣ.
ವಿನ್ಯಾಸ: ಮೊದಲಿಗೆ ಟಾಟಾ ಸಫಾರಿಯ ಕುರಿತಾಗಿ ನೋಡೋಣ. ಹಳೆಯ ಮಾದರಿಯಂತಲ್ಲದೇ ಸಫಾರಿಯು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ನವೀಕರಿಸಿದ ಹ್ಯಾರಿಯರ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಗ್ರಿಲ್ ಮೇಲಿನ ಭಾಗವು ಬೋಡ್-ಬಣ್ಣದ ಇಂಟೇಕ್‌ಗಳು ಮತ್ತು ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಪೂರ್ಣ-ಅಗಲದ ಎಲ್ಇಡಿ ಡಿಆರ್ಎಲ್ ಸೆಟಪ್ ಗ್ರಿಲ್‌ನ ಮೇಲೆ ಚಲಿಸುತ್ತದೆ. ಎರಡೂ ಬದಿಯಲ್ಲಿರುವ ವಿಭಾಗಗಳು ಇಂಡಿಕೇಟರ್ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.

ಟಾಟಾ ಹ್ಯಾರಿಯರ್‌ನ ವಿನ್ಯಾಸದ ಕುರಿತಾಗಿ ನೋಡುವುದಾದರೆ ಪ್ರತಿಯೊಬ್ಬರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ. ಮುಂಭಾಗದಲ್ಲಿ ಹಲವು ನವೀಕರಣಗಳನ್ನು ಒಳಗೊಂಡಿದ್ದು, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಪಡೆದಿದೆ. ಜೊತೆಗೆ ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ (ಅಗಲ) ಎಲ್ಇಡಿ ಲೈಟ್ ಬಾರ್ ಹೊಂದಿದೆ. ಇದರೊಂದಿಗೆ ಬಂಪರ್ ಕೂಡ ಹೊಸದಾಗಿದ್ದು, ಸೈಡ್ ಪ್ರೊಫೈಲ್‌ನಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಅಷ್ಟಾಗಿ ಬದಲಾವಣೆ ಪಡೆದಿಲ್ಲ. 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ.
ಫೀಚರ್ಸ್: ಸಫಾರಿಯ ಒಳಗೆ ಹೆಜ್ಜೆ ಇಡುತ್ತಿದ್ದಂತೆ ನೀವು ಹೆಚ್ಚು ನವೀಕರಿಸಿದ ಕ್ಯಾಬಿನ್ ನೋಡಬಹುದು. ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮೇಲೆ ಸುತ್ತುವರಿದ ಬೆಳಕನ್ನು ನೋಡಬಹುದು, ಇದನ್ನು ಬೃಹತ್ ಪನಾರಮಿಕ್ ಸನ್‌ರೂಫ್‌ನ ಬಾಗಿಲುಗಳು ಮತ್ತು ಅಂಚುಗಳಲ್ಲಿಯೂ ಕಾಣಬಹುದು. ಹೊಸ ಡ್ಯಾಶ್‌ಬೋರ್ಡ್ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಸಹ ಹೊಂದಿದೆ. ಹಾಗೆಯೇ ಇದು 360-ಡಿಗ್ರಿ ಕ್ಯಾಮೆರಾಗೆ ಡಿಸ್ಪ್ಲೇಯಾಗಿ ಕಾರ್ಯನಿರ್ವಹಿಸುತ್ತದೆ.
ಟಾಟಾ ಹ್ಯಾರಿಯರ್ 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿದೆ. ಈ ಎಸ್‍ಯುವಿಯ ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿವೆ.
ಎಂಜಿನ್: ಸಫಾರಿಯ ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ (TATA Safari VS TATA Harrier:).
ಟಾಟಾ ಹ್ಯಾರಿಯರ್ ಎಸ್‌ಯುವಿ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications