Tata: 2025ರಲ್ಲಿ ಹೊಸ ಟಾಟಾ ಸಿಯೆರಾ ಕಾರು ಮಾರಾಟಕ್ಕೆ.. ಬೆಲೆ ಎಷ್ಟಿರಲಿದೆ, ವಿಶೇಷತೆಗಳೇನು?
ಟಾಟಾ ಮೋಟಾರ್ಸ್ (Tata Motors) ಜನಪ್ರಿಯ ಕಾರ್ಯ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಪಂಚ್, ಕರ್ವ್, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯು ವಿವಿಧ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಪ್ರಮುಖವಾಗಿ ಮುಂದಿನ ವರ್ಷ (2025) ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ 'ಸಿಯೆರಾ' ಎಸ್‌ಯುವಿಯನ್ನು ಮಾರಾಟಕ್ಕೆ ತರಲಿದೆ. ಈ ಕಾರು, 1990ರ ದಶಕದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು.
ನೂತನ ಇಂಧನ/ ಎಲೆಕ್ಟ್ರಿಕ್ ಚಾಲಿತ ಟಾಟಾ ಸಿಯೆರಾ (Tata Sierra) ಕಾರುಗಳು ಬಹುತೇಕ ಒಂದೇ ರೀತಿಯ ವಿನ್ಯಾಸವನ್ನು ಹೊಂದಿವೆ. ಈ ಎಸ್‌ಯುವಿಗಳು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಬ್ಲ್ಯಾಕ್ಡ್ ಔಟ್ ಫ್ರಂಟ್ ಬಂಪರ್, ಡುಯಲ್-ಟೋನ್ ರೂಫ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಈ ಸಿಯೆರಾ ಕಾರಿನ ಮಾಡೆಲ್‌ಗಳಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ಇವುಗಳು ಬೃಹತ್ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಹೊಸ ಇಂಧನ/ ಎಲೆಕ್ಟ್ರಿಕ್ ಚಾಲಿತ ಟಾಟಾ ಸಿಯೆರಾ ಕಾರುಗಳು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು ಹಿಲ್-ಹೋಲ್ಡ್, ಹಿಲ್-ಡಿಸೆಂಟ್ ಕಂಟ್ರೋಲ್ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟಕ್ಕೆ ಬರುವ ಟಾಟಾ ಸಿಯೆರಾ ಇವಿ 'ಕರ್ವ್' ಇವಿಯಂತೆ ಶಕ್ತಿಯುತವಾಗಿರುವ ದೊಡ್ಡದಾದ ಬ್ಯಾಟರಿ ಪ್ಯಾಕ್ (Battery Pack) ಆಯ್ಕೆಯನ್ನು ಹೊಂದಿರಬಹುದು. ಭರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೂ ಹೆಚ್ಚು ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ. ಜೊತೆಗೆ ಅತ್ಯುತ್ತಮವಾದ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ.
ಇಂಧನ ಚಾಲಿತ ಆಯ್ಕೆಯಲ್ಲಿ ಬರುವ ಟಾಟಾ ಸಿಯೆರಾ ಎಸ್‌ಯುವಿ ಸಹ 'ಕರ್ವ್' ಕಾರಿನಂತೆಯೇ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡರಬಹುದು ಎನ್ನಲಾಗಿದೆ. ಹಾಗೆಯೇ 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಪಡೆದುಕೊಂಡಿರಬಹುದು ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ಪಷ್ಟವಾದ ವಿವರಗಳು ಸಿಗಲಿದೆ.
ಹೊಸ ಇಂಧನ ಚಾಲಿತ ಟಾಟಾ ಸಿಯೆರಾ ರೂ.15.00 ಲಕ್ಷದಿಂದ ರೂ.20.00 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿಯಲ್ಲಿ ಸಿಯೆರಾ ಇವಿ ರೂ.25 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿರಬಹುದು ಎನ್ನಲಾಗಿದೆ. ಈ ಕಾರುಗಳು ಮಾರಾಟಕ್ಕೆ ಬಂದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications