TATA: ಟಾಟಾದ ಈ ಜನಪ್ರಿಯ ಕಾರು 'ಬಿಸಿ ಜಿಲೇಬಿ'ಯಂತೆ ಮಾರಾಟ.. 5 ಲಕ್ಷ.. 5-ಸೀಟರ್, 28 Km ಮೈಲೇಜ್!

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಟಿಯಾಗೊ (Tiago) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಕಾರಿನ ಮಾರಾಟದಲ್ಲಿ ಟಾಟಾ ಹೊಸ ಇತಿಹಾಸ ಸೃಷ್ಟಿಸಿದೆ. ಆದರೆ, ಅಧಿಕೃತವಾದ ಘೋಷಣೆಯೊಂದೇ ಬಾಕಿಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಪ್ರಕಾರ, 2016 ರಿಂದ ಅಕ್ಟೋಬರ್ 2024 ರವರೆಗೆ ಬರೋಬ್ಬರಿ 5,96,661 ಯುನಿಟ್ 'ಟಿಯಾಗೊ' ಕಾರುಗಳು ಮಾರಾಟಗೊಂಡಿವೆ. ಟಾಟಾ ಕಂಪನಿಯು 6 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ಮುಟ್ಟಲು ಕೇವಲ 3,339 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕಾಗಿದೆ. ಈ ತಿಂಗಳ (ನವೆಂಬರ್) ಮೊದಲ ಮೂರು ವಾರಗಳಲ್ಲಿಯೇ ಆ ಸಂಖ್ಯೆಯನ್ನು ತಲುಪಿದೆ ಎಂದು ತಿಳಿದುಬಂದಿದೆ.

Tata Tiago Car Achieve 6 Lakh Unit Sales Milestone Official Announcement Is On Pending

2024ರ ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 4,546 ಯುನಿಟ್‌ ಟಿಯಾಗೊ ಕಾರುಗಳನ್ನು ಮಾರಲಾಗಿದೆ. ಅಂದರೆ ದಿನವೊಂದಕ್ಕೆ 151 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2019ರ ಹಣಕಾಸು ವರ್ಷದಲ್ಲಿ ಗರಿಷ್ಠ ಸಂಖ್ಯೆಯಲ್ಲಿ 92,369 ಯುನಿಟ್ ಟಿಯಾಗೊ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಗೊಳಿಸಿತ್ತು.

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್, ರೂ.5 ಲಕ್ಷದಿಂದ ರೂ.8.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ (ಒ) ಮತ್ತು ಎಕ್ಸ್‌ಟಿ ಸೇರಿದಂತೆ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ನೂತನ ಕಾರು ಮಿಡ್‌ನೈಟ್‌ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ ಹಾಗೂ ಟೊರ್ನಾಡೋ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

Tata Tiago Car Achieve 6 Lakh Unit Sales Milestone Official Announcement Is On Pending

ಈ ಹ್ಯಾಚ್‌ಬ್ಯಾಕ್, 2 ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 86 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ಚಾಲಿತ ರೂಪಾಂತರವು ಇದೇ ಎಂಜಿನ್ ಒಳಗೊಂಡಿದೆ. ಆದರೆ, 73.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ.

ನೂತನ ಟಿಯಾಗೊ ಹ್ಯಾಚ್‌ಬ್ಯಾಕ್, 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 19.43 ರಿಂದ 20.01 ಕೆಎಂಪಿಎಲ್ ಮತ್ತು ಸಿಎನ್‌ಜಿ ರೂಪಾಂತರಗಳು 26.49 ರಿಂದ 28.06 ಕೆಎಂ/ಕೆಜಿವರೆಗೆ ಮೈಲೇಜ್ ಕೊಡುತ್ತವೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

Tata Tiago Car Achieve 6 Lakh Unit Sales Milestone Official Announcement Is On Pending

ಹೊಸ ಟಿಯಾಗೊ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ನೂತನ ಟಿಯಾಗೊ ಕಾರಿಗೆ ಮಾರುತಿ ಸುಜುಕಿ ಸೆಲೆರಿಯೊ ಹಾಗೂ ವ್ಯಾಗನ್ ಆರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 28, 2024, 16:44 [IST]
English summary
Tata tiago car achieve 6 lakh unit sales milestone official announcement is on pending
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+