ಗರಿಷ್ಟ ಸುರಕ್ಷತೆಯ ಟಾಟಾ ಬಜೆಟ್ ಕಾರು: ಬೆಲೆ ರೂ.6.70 ಲಕ್ಷ... 26.49 ಕಿ.ಮೀ ಮೈಲೇಜ್

ಟಾಟಾ ಮೋಟಾರ್ಸ್ ನೀಡುವ ಅಗ್ಗದ ಬೆಲೆಯ ಹಾಗೂ ಅತ್ಯುತ್ತಮ ಫೀಚರ್ಸ್‌ನ ಕಾರುಗಳಲ್ಲಿ ಟಿಯಾಗೊ ಕೂಡ ಒಂದು. ಕಂಪನಿಯು ಈ ಕಾರನ್ನು ಮಧ್ಯಮ ವರ್ಗದವರಿಗಾಗಿ ಕಡಿಮೆ ಬೆಲೆಗೆ ನೀಡುವುದರ ಜೊತೆಗೆ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿಯೂ ಲಭ್ಯವಾಗಿಸಿದೆ. ಸದ್ಯ ಉತ್ತಮ ಮಾರಾಟ ಕಾಣುತ್ತಿರುವ ಈ ಕಾರನ್ನು ಗ್ರಾಹಕರ ಬೇಡಿಕೆಯೊಂದಿಗೆ ಹೊಸ ಅಪ್‌ಡೇಟ್‌ಗಳೊಂದಿಗೆ ಕಂಪನಿಯು ಪರಿಚಯಿಸಿದೆ. ಬಜೆಟ್ ಬೆಲೆಯಲ್ಲಿ ಸಿಎನ್‌ಜಿ ಕಾರುಗಳನ್ನು ಹುಡುಕುತ್ತಿರುವವರಿಗೆ ಈ ಟಿಯಾಗೋ ಬೆಸ್ಟ್‌ ಆಯ್ಕೆಯಾಗಿದೆ. ಹಾಗಾದ್ರೆ ಈ ಕಾರಿನ ಬೆಲೆ, ಮೈಲೇಜ್, ಫೀಚರ್‌ಗಳೆನು ಎಂಬುದನ್ನು ಇಲ್ಲಿ ನೋಡೋಣ.

ಟಾಟಾ ಟಿಯಾಗೊ ಸಿಎನ್‌ಜಿ ಬೆಲೆಗಳು: ಟಾಟಾ ಟಿಯಾಗೊ ಸಿಎನ್‌ಜಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.70 ಲಕ್ಷಗಳಾಗಿದೆ. ಟಾಟಾ ಟಿಯಾಗೊ ಸಿಎನ್‌ಜಿ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದ್ರೆ ಇದು ಪ್ರತಿ ಕೆ.ಜಿಗೆ ಬರೋಬ್ಬರಿ 26.49 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

tata-tiago-cng-price-features-mileage-details

ವೈಶಿಷ್ಟ್ಯಗಳು: ಟಾಟಾ ಟಿಯಾಗೊ ಸಿಎನ್‌ಜಿಯು 5 ಸೀಟರ್ ಆಗಿದ್ದು, ಪವರ್ ಅಡ್ಜಸ್ಟ್ ಮಾಡಬಹುದಾದ ಬಾಹ್ಯ ರಿಯರ್ ವ್ಯೂ ಮಿರರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಮುಂಭಾಗ ಮತ್ತು ಹಿಂಭಾಗದಲ್ಲಿ ಪವರ್ ವಿಂಡೋಸ್, ವ್ಹೀಲ್ ಕವರ್‌ಗಳು, ಪ್ಯಾಸೆಂಜರ್ ಏರ್‌ಬ್ಯಾಗ್ ಅನ್ನು ಹೊಂದಿದೆ. ಉಳಿದಂತೆ ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಬರುತ್ತದೆ.

ಟಾಟಾ ಟಿಯಾಗೊ ಸಿಎನ್‌ಜಿ ಬಣ್ಣಗಳು: ಟಾಟಾ ಮೋಟಾರ್ಸ್ ಹೊಸ ಟಿಯಾಗೋ ಸಿಎನ್‌ಜಿಯನ್ನು 6 ಬಣ್ಣಗಳಲ್ಲಿ ನೀಡುತ್ತಿದೆ. ಅವುಗಳನ್ನು ನೋಡುವುದಾದ್ರೆ ಫ್ಲೇಮ್ ರೆಡ್, ಓಪಲ್ ವೈಟ್, ಟೊರ್ನಾಡೊ ಬ್ಲೂ, ಓಪಲ್ ವೈಟ್ ಡ್ಯುಯಲ್ ಟೋನ್, ಟೊರ್ನಾಡೊ ಬ್ಲೂ ಡ್ಯುಯಲ್ ಟೋನ್ ಮತ್ತು ಡೇಟೋನಾ ಗ್ರೇ ಬಣ್ಣಗಳಲ್ಲಿ ನೀಡಲಾಗುತ್ತದೆ.

tata-tiago-cng-price-features-mileage-details

ಟಾಟಾ ಟಿಯಾಗೊ ಸಿಎನ್‌ಜಿ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್: ಟಾಟಾ ಟಿಯಾಗೊ ಸಿಎನ್‌ಜಿ ಕಾರು 1199 ಸಿಸಿ ಎಂಜಿನ್ ಹೊಂದಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದು 72.41bhp ಪವರ್ ಮತ್ತು 95Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‌ಜಿ ಆವೃತ್ತಿಗೆ ಈ ಪವರ್ ಮತ್ತು ಟಾರ್ಕ್ ಉತ್ತಮ ಅಂಕಿಅಂಶಗಳಾಗಿವೆ.

ಸುರಕ್ಷತೆ: ಟಿಯಾಗೊ 2020 ರಲ್ಲಿ ಫೇಸ್ ಲಿಫ್ಟೆಡ್ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಜಿಎನ್‌ಸಿಎಪಿಯಿಂದ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಗರಿಷ್ಠ 17 (4 ಸ್ಟಾರ್) ರಲ್ಲಿ 12.52 ಅಂಕಗಳನ್ನು ಹೊಂದಿದ್ದರೆ, ಮಕ್ಕಳ ಆಕ್ಯುಪೆನ್ಸಿಯಲ್ಲಿ ಸ್ಕೋರ್ 49 ರಲ್ಲಿ 34.15 (3 ಸ್ಟಾರ್) ಪಡೆದುಕೊಂಡಿದೆ.

tata-tiago-cng-price-features-mileage-details

ಇದೇ ಬೆಲೆಯಲ್ಲಿ ಸಿಗುವ ಇತರ ಟಾಟಾ ಕಾರುಗಳು: ಈ ಬೆಲೆ ಶ್ರೇಣಿಯಲ್ಲಿ, ನೀವು ಟಾಟಾ ಪಂಚ್ ಪ್ಯೂರ್ ಸಿಎನ್‌ಜಿಯನ್ನು ಸಹ ಪರಿಗಣಿಸಬಹುದು, ಇದರ ಬೆಲೆ ರೂ.7.23 (ಎಕ್ಸ್‌ ಶೋರೂಂ) ಲಕ್ಷವಿದೆ. ಟಾಟಾ ಆಲ್ಟ್ರೋಜ್ ಎಕ್ಸ್ಇ ಸಿಎನ್‌ಜಿ ಕೂಡ ಇದ್ದು, ಇದರ ಬೆಲೆಯು ರೂ.7.45 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 9, 2024, 18:53 [IST]
English summary
Tata tiago cng price features mileage details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+