Tata: ಈ ಜನಪ್ರಿಯ ಟಾಟಾ ಕಾರಿಗೆ 90,000 ರಿಯಾಯಿತಿ, 28 Km ಮೈಲೇಜ್.. 5-ಸೀಟರ್, 4,99 ಲಕ್ಷ!

ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಟಿಯಾಗೊ (Tiago) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಉತ್ತಮವಾಗಿರುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದಿರಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಅಕ್ಟೋಬರ್‌ನಲ್ಲಿ ನೂತನ ಟಿಯಾಗೊ ಕಾರಿನ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನಗಳು ಲಭ್ಯವಿವೆ. ಆ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

ಹೊಚ್ಚ ಹೊಸ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಎಕ್ಸ್ಇ, ಎಕ್ಸ್ಎಂ & ಎಕ್ಸ್‌ಟಿಒ ಹೊರತುಪಡಿಸಿದ 2024ರ ಎಲ್ಲ ಪೆಟ್ರೋಲ್ ರೂಪಾಂತರಗಳು (ವೇರಿಯೆಂಟ್), ಒಟ್ಟು ರೂ.30,000 ವರೆಗೆ ರಿಯಾಯಿತಿ ಪ್ರಯೋಜನ ಹೊಂದಿವೆ. ಅದರಲ್ಲಿ ರೂ.10,000 ಗ್ರಾಹಕ ರಿಯಾಯಿತಿ (Consumer Discount), ರೂ.15,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ (Exchange/ Scrappage bonus) ಹಾಗೂ ರೂ.5,000 ಕಾರ್ಪೊರೇಟ್ ರಿಯಾಯಿತಿ (Corporate Discount) ಸಹ ಸೇರಿವೆ.

Tata Tiago Have Up To 90 000 Discount In October 2024 Rs 4 99 Lakh Starting Price

ಇದೇ ಟಿಯಾಗೊ ಕಾರಿನ ಎಕ್ಸ್ಇ, ಎಕ್ಸ್ಎಂ ಹೊರತುಪಡಿಸಿದ 2024ರ ಎಲ್ಲ ಸಿಎನ್‌ಜಿ ರೂಪಾಂತರಗಳು ಕೂಡ ರೂ.30,000 ವರೆಗೆ ಹಣಕಾಸಿನ ಪ್ರಯೋಜನ ಪಡೆದಿವೆ. ಇದರೊಳಗೆ ರೂ.10,000 ಗ್ರಾಹಕ ರಿಯಾಯಿತಿ ಅಥವಾ ನಗದು ರಿಯಾಯಿತಿ , ರೂ.15,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ ಮತ್ತು 5,000 ಕಾರ್ಪೊರೇಟ್ ರಿಯಾಯಿತಿಯೂ ಇದೆ. ಪೆಟ್ರೋಲ್ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿಒ ರೂಪಾಂತರಗಳು ಹಾಗೂ ಸಿಎನ್‌ಜಿ ಎಕ್ಸ್ಇ, ಎಕ್ಸ್ಎಂ ರೂಪಾಂತರಗಳು ಒಟ್ಟು 20,000 ರಿಯಾಯಿತಿ ಹೊಂದಿವೆ.

ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ನ 2023ರ ಎಲ್ಲ ವಿಧವಾದ ಪೆಟ್ರೋಲ್ ರೂಪಾಂತರಗಳು ಬರೋಬ್ಬರಿ 90,000 ವರೆಗೆ ರಿಯಾಯಿತಿ
ಹೊಂದಿವೆ. ಅದರಲ್ಲಿ ರೂ.65,000 ಗ್ರಾಹಕ ರಿಯಾಯಿತಿ, ರೂ.20,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. 2023ರ ಸಿಎನ್‌ಜಿ ರೂಪಾಂತರಗಳು, ಒಟ್ಟು ರೂ.85,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಕಾರು, ರೂ.4,99 ರಿಂದ ರೂ.8.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಮಿಡ್ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್ ಮತ್ತು ಅರಿಜೋನಾ ಬ್ಲೂ ಬಣ್ಣಗಳ (ಕಲರ್) ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಈ ಟಿಯಾಗೊ ಹ್ಯಾಚ್‌ಬ್ಯಾಕ್‌ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 19.43 ರಿಂದ 20.01 ಕೆಎಂಪಿಎಲ್ ಹಾಗೂ ಸಿಎನ್‌ಜಿ ರೂಪಾಂತರಗಳು 26.49 ರಿಂದ 28.06 ಕೆಎಂ/ಕೆಜಿ ವರೆಗೆ ಮೈಲೇಜ್ ನೀಡುತ್ತವೆ.

ಹೊಸ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 2 ಏರ್‌ಬ್ಯಾಗ್‌ ಮತ್ತು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 10, 2024, 19:06 [IST]
English summary
Tata tiago have upto 90000 discount october 2024 rs 4 99 lakh starting price
Read more on tata motors india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+