Tata: ಗರಿಷ್ಟ ಗುಣಮಟ್ಟದ ಟಾಟಾ ಕಾರು: ರೂ. 5 ಲಕ್ಷ ಬೆಲೆ: 28.06 ಕಿ.ಮೀ ಮೈಲೇಜ್
ಬಜೆಟ್ ಸ್ನೇಹಿ ಹ್ಯಾಚ್‌ಬ್ಯಾಕ್ ಹುಡುಕುತ್ತಿರುವವರಿಗೆ ಮಾರುಕಟ್ಟೆಯಲ್ಲಿ ಬಲವಾದ ಆಯ್ಕೆಯೆಂದರೆ ಟಾಟಾ ಟಿಯಾಗೊ (Tata Tiago). ಇದು ಹೊಸ ಸಿಎನ್‌ಜಿ ಎಎಂಟಿ ವೇರಿಯೆಂಟ್‌ಗಳು, ವೈವಿಧ್ಯಮಯ ವೈಶಿಷ್ಟ್ಯಗಳು ಮತ್ತು ಉತ್ತಮ ಮೈಲೇಜ್ ನೀಡುತ್ತದೆ. ಜೊತೆಗೆ ಟಿಯಾಗೊದ ವಿನ್ಯಾಸ, ಆಧುನಿಕ ಸೌಲಭ್ಯಗಳು, ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಂದಾಗಿ ಉತ್ತಮ ಮಾರಾಟ ಕಾಣುತ್ತಿದೆ. ಟಿಯಾಗೊ ಎಂಟ್ರಿ ಲೆವಲ್ ವೇರಿಯೆಂಟ್ ಕೇವಲ ರೂ. 5 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋರೂಂ). ಈ ಅದ್ಭುತ ಕಾರಿನ ಫೀಚರ್ಸ್, ಮೈಲೇಜ್, ವೇರಿಯೆಂಟ್‌ಗಳ ಕುರಿತು ಇಲ್ಲಿ ನೋಡೋಣ.
ವೇರಿಯೆಂಟ್‌ಗಳು: ಟಾಟಾ ಟಿಯಾಗೊವನ್ನು XE, XM, XT(O), XT, XZ, and XZ+ ಎಂಬ ಆರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ವೇರಿಯೆಂಟ್‌ಗಳನ್ನು ಅವಲಂಭಿಸಿ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ. ನಮ್ಮ ಪ್ರಕಾರ ಟಾಟಾ ಟಿಯಾಗೊ XT ರಿದಮ್ ವೇರಿಯೆಂಟ್ ರೂ.6.60 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದ್ದು, ಮೌಲ್ಯಕ್ಕೆ ತಕ್ಕಂತೆ ಉತ್ತಮ ಫೀಚರ್ಸ್ ಪಡೆಯಬಹುದು.

ಈ XT ರಿದಮ್ ವೇರಿಯೆಂಟ್‌ನಲ್ಲಿ ಹರ್ಮನ್ - ಕಾರ್ಡನ್ ಟ್ಯೂನ್ಡ್ 8 - ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಾಣಿಕೆಯೊಂದಿಗೆ 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಹಿಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
ಎಂಜಿನ್: ಟಾಟಾ ಟಿಯಾಗೊ 1.2-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ, ಇದು 86 ಪಿಎಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿಯೊಂದಿಗೆ ಖರೀದಿಸಬಹುದು. ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ ಇರುವ ಎಂಜಿನ್ 73.5 ಬಿಹೆಚ್ ಪವರ್ ಮತ್ತು 95 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೈಲೇಜ್: ಮ್ಯಾನುವಲ್ ಪೆಟ್ರೋಲ್ ವೆರಿಯೆಂಟ್ 20.01 ಕಿ.ಮೀ, ಪೆಟ್ರೋಲ್ ಎಎಂಟಿ ನಲ್ಲಿ 19.43 ಕಿ.ಮೀ, ಸಿಎನ್‌ಜಿ ಮ್ಯಾನುವಲ್ 26.49 ಕಿ.ಮೀ/ಕೆ.ಜಿ ಮತ್ತು ಎಎಂಟಿಯೊಂದಿಗೆ 28.06 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಟಾಟಾ ಟಿಯಾಗೊದಲ್ಲಿ ಸುರಕ್ಷತೆಯು ಆದ್ಯತೆಯಾಗಿದ್ದು, ಟಿಯಾಗೊ 4-ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ಸೇಫ್ಟಿ ರೇಟಿಂಗ್ ಸಹ ಗಳಿಸಿದೆ.
ಟಾಟಾ ಟಿಯಾಗೊದಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ವಿತ್ ಇಬಿಡಿ ಮತ್ತು ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ನೀಡಲಾಗಿದೆ. ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರನ್ ಸಿ 3 ನಂತಹ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಎಲೆಕ್ಟ್ರಿಕ್ ಆಯ್ಕೆಗಳನ್ನು ಪರಿಗಣಿಸುವವರಿಗೆ, ಟಾಟಾ ಟಿಯಾಗೊ ಇವಿ ಕೂಡ ಇದೆ.

ಮಿಡ್ ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ, ಟೊರ್ನಾಡೊ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಆರು ಬಣ್ಣಗಳಲ್ಲಿ ಟಾಟಾ ಟಿಯಾಗೊ ಲಭ್ಯವಿದೆ. ಇವುಗಳಲ್ಲಿ ಫ್ಲೇಮ್ ರೆಡ್ ಬಣ್ಣವು ಎದ್ದು ಕಾಣುತ್ತದೆ, ಕಾರು ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯಲು ಬಯಸುವವರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications