TATA: ಕೆಲವೇ ದಿನ ಬಾಕಿ.. 85,000 ರಿಯಾಯಿತಿ, 6 ಲಕ್ಷಕ್ಕೆ ಹೊಸ ಕಾರು!
ದಿವಂಗತ ರತನ್ ಟಾಟಾ ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದ್ದು, ಲಕ್ಷಾಂತರ ಗ್ರಾಹಕರ ಮನಸ್ಸನ್ನು ಗೆದ್ದಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಟಿಗೂರ್ (Tigor) ಪ್ರಮುಖ ಸೆಡಾನ್ ಆಗಿದ್ದು, ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್‌ನಲ್ಲಿ ನೂತನ ಟಿಗೂರ್ ಕಾರಿನ ಖರೀದಿ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೊಚ್ಚ ಹೊಸ ಟಾಟಾ ಟಿಗೂರ್ ಸೆಡಾನ್ನ ಎಕ್ಸ್ಇ (XE) ಹೊರತುಪಡಿಸಿದ ಎಲ್ಲ 2024ರ ಪೆಟ್ರೋಲ್ ರೂಪಾಂತರಗಳು (ವೇರಿಯೆಂಟ್), ಒಟ್ಟು ರೂ.30,000 ವರೆಗೆ ರಿಯಾಯಿತಿ ಪಡೆದಿವೆ. ಅದರಲ್ಲಿ ರೂ.10,000 ಗ್ರಾಹಕ ರಿಯಾಯಿತಿ ಅಥವಾ ನಗದು ರಿಯಾಯಿತಿ (Consumer Discount), ರೂ.15,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ (Exchange/ Scrappage Bonus) ಹಾಗೂ ರೂ.5,000 ಕಾರ್ಪೊರೇಟ್ ರಿಯಾಯಿತಿ (Corporate Discount) ಸಹ ಸೇರಿವೆ.

ಟಿಗೂರ್ ಸೆಡಾನ್ನ 2024ರ ಪ್ರತಿಯೊಂದು ಸಿಎನ್‌ಜಿ ರೂಪಾಂತರಗಳು, ಬರೋಬ್ಬರಿ ರೂ.30,000 ವರೆಗೆ ರಿಯಾಯಿತಿ ಪ್ರಯೋಜವ ಹೊಂದಿವೆ. ಇದರೊಳಗೆ ರೂ.10,000 ನಗದು ರಿಯಾಯಿತಿ ಮತ್ತು ರೂ.15,000 ವಿನಿಮಯ/ ಸ್ಕ್ರ್ಯಾಪ್ ಬೋನಸ್‌ನಂತಹ ಹಣಕಾಸಿನ ಪ್ರಯೋಜನಗಳಿವೆ. ಅಲ್ಲದೆ, 2024ರ ಎಕ್ಸ್ಇ ಪೆಟ್ರೋಲ್ ರೂಪಾಂತರವು ರೂ.20,000 ವರೆಗೆ ರಿಯಾಯಿತಿ ಒಳಗೊಂಡಿದೆ.
ಟಾಟಾ ಟಿಗೂರ್ ಕಾರಿನ 2023ರ ಪೆಟ್ರೋಲ್ ಹಾಗೂ ಸಿಎನ್‌ಜಿ ರೂಪಾಂತರಗಳು ಒಟ್ಟು 85,000 ವರೆಗೆ ರಿಯಾಯಿತಿ ಪಡೆದಿವೆ. ಅದರಲ್ಲಿ ರೂ.60,000 ನಗದು ರಿಯಾಯಿತಿ, ರೂ.20,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಗಳು ಇವೆ. ಈ ಹಣಕಾಸಿನ ಪ್ರಯೋಜನಗಳು ಅಕ್ಟೋಬರ್ 31 ರವರೆಗೆ ಟಿಗೂರ್ ಸೆಡಾನ್ನ್ನು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿವೆ.

ಸದ್ಯ, ದೇಶೀಯವಾಗಿ ಖರೀದಿಗೆ ಲಭ್ಯವಿರುವ ಟಾಟಾ ಟಿಗೂರ್ ಸೆಡಾನ್ (Tata Tigor Sedan), ರೂ.6 ರಿಂದ ರೂ.9.40 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್ ಪ್ಲಸ್ ಎಂಬ ಆಕರ್ಷಕ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ಓಪಲ್ ವೈಟ್, ಮ್ಯಾಗ್ನೆಟಿಕ್ ರೆಡ್ ಹಾಗೂ ಡೇಟೋನಾ ಗ್ರೇ ಬಣ್ಣಗಳೊಂದಿಗೂ (ಕಲರ್) ಸಿಗುತ್ತದೆ.
ಈ ಟಿಗೂರ್ ಕಾರು 2 ವಿಧದ ಪವರ್‌ಟ್ರೇನ್ ಆಯ್ಕೆಯಲ್ಲಿ ಸಿಗುತ್ತದೆ. ಇದರ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 86 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಸಿಎನ್‌ಜಿ ಚಾಲಿತ ಮಾದರಿ (ಮಾಡೆಲ್) ಇದೇ 1.2-ಲೀಟರ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, 73.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 19.28 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಸ ಟಾಟಾ ಟಿಗೂರ್ ಸೆಡಾನ್ನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಯಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಟಾಟಾ ಟಿಗೂರ್ ಸೆಡಾನ್ ಹೊಂದಿರುವ ಈ ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ರೂಪಾಂತರಗಳನ್ನು ಅವಲಂಭಿಸಿ ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








