ಹೊಸ BMW X3 xDrive20d M ಸ್ಪೋರ್ಟ್ ಶ್ಯಾಡೋ ಎಸ್‌ಯುವಿ ವಿಶೇಷತೆಗಳು
ಇತ್ತೀಚೆಗೆ ಬಿಎಂಡಬ್ಲ್ಯು ಇಂಡಿಯಾ ಹೊಸ BMW X3 xDrive20d M ಸ್ಪೋರ್ಟ್ ಶ್ಯಾಡೋ ಎಸ್‌ಯುವಿನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯು ಎಲ್ಲಾ BMW ಇಂಡಿಯಾ ಡೀಲರ್‌ಶಿಪ್‌ಗಳು ಮತ್ತು BMW ಆನ್‌ಲೈನ್ ಸ್ಟೋರ್‌ಗಳಲ್ಲಿ ಡೀಸೆಲ್ ರೂಪಾಂತರದಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಹೊಸ BMW X3 xDrive20d M ಸ್ಪೋರ್ಟ್ ಶ್ಯಾಡೋ ಎಸ್‌ಯುವಿ ರೂ. 74,90,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರು ತಮ್ಮ BMW X3 M ಸ್ಪೋರ್ಟ್ ಶ್ಯಾಡೋ ಆವೃತ್ತಿಯನ್ನು ವಿಶೇಷವಾಗಿ ಕ್ಯುರೇಟೆಡ್ ಆಕ್ಸೆಸರಿ ಪ್ಯಾಕೇಜ್‌ಗಳೊಂದಿಗೆ ಇನ್ನಷ್ಟು ಸ್ಟೈಲಿಷ್ ಆಗಿ ಮಾರ್ಪಡಿಸಬಹುದು. ಬ್ಲಾಕ್ ಥೀಮ್‌ಗಾಗಿ, ಬ್ಲಾಕ್ ಆವೃತ್ತಿಯ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಇನ್ನೂ ಹೆಚ್ಚಿನ ಪರ್ಫಾಮೆನ್ಸ್ ಆಧಾರಿತ ನೋಟಕ್ಕಾಗಿ, ಕಾರ್ಬನ್ ಫೈಬರ್‌ನಲ್ಲಿ ಗೇರ್ ಲಿವರ್ ಮತ್ತು ಕಾರ್ಬನ್ ಫೈಬರ್‌ನಲ್ಲಿ ಎಂಟ್ರಿ ಸಿಲ್‌ನಂತಹ ಹೆಚ್ಚುವರಿ ಅಂಶಗಳೊಂದಿಗೆ ಕಾರ್ಬನ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು.

ಡಿಸೈನ್: BMW X3 xDrive20d M ಸ್ಪೋರ್ಟ್ ಶ್ಯಾಡೋ ಆವೃತ್ತಿಯು ಬ್ರೂಕ್ಲಿನ್ ಗ್ರೇ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಸ್ಪೋರ್ಟಿ ವಿನ್ಯಾಸದೊಂದಿಗೆ ಬ್ಲ್ಯಾಕ್ಡ್ ಔಟ್ ಕಿಡ್ನಿ ಗ್ರಿಲ್' BMW X3 xDrive20d M ಕಾರಿಗೆ ಮತ್ತಷ್ಟು ಆಕರ್ಷಣೆಯನ್ನು ಹೆಚ್ಚಿಸಿದೆ.
ಜೊತೆಗೆ BMW ಲೇಸರ್ ಲೈಟ್, ಸಾಂಪ್ರದಾಯಿಕ ಬ್ಲೂ ಅಕ್ಸೆಂಟ್‌ಗಳು 650 ಮೀಟರ್‌ಗಳವರೆಗೆ ಬೆಳಕನ್ನು ವಿತರಿಸುತ್ತವೆ. ಹಿಂಭಾಗದಲ್ಲಿ ಹೈ-ಗ್ಲಾಸ್ ಬ್ಲಾಕ್ ಕಲರ್ ಟೈಲ್‌ಪೈಪ್‌ಗಳು, ವಿಂಡೋ ಗ್ರಾಫಿಕ್ಸ್, ರೂಫ್ ರೈಲ್‌ಗಳು, BMW ಕಿಡ್ನಿ ಫ್ರೇಮ್, 19-ಇಂಚಿನ Y-ಸ್ಪೋಕ್ ಶೈಲಿಯ ಅಲಾಯ್ ವೀಲ್‌ಗಳು ಕಾರಿನ ಅಂದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ.

ವೈಶಿಷ್ಟ್ಯಗಳು: ಹೊಸ BMW X3 xDrive20d M ಸ್ಪೋರ್ಟ್ ಶ್ಯಾಡೋ ಕಾರು' BMW ಗೆಸ್ಚರ್ ಕಂಟ್ರೋಲ್ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋದೊಂದಿಗೆ ಸಜ್ಜುಗೊಂಡಿದೆ. BMW ಆಪರೇಟಿಂಗ್ ಸಿಸ್ಟಂ 7.0 ನಲ್ಲಿ ಚಾಲನೆಯಲ್ಲಿರುವ BMW ಲೈವ್ ಕಾಕ್‌ಪಿಟ್ ಪ್ರೊಫೆಷನಲ್ 3D ನ್ಯಾವಿಗೇಶನ್ ಅನ್ನು ಒಳಗೊಂಡಿದೆ. 12.3 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, BMW ಹೆಡ್-ಅಪ್ ಡಿಸ್ಪ್ಲೇ, ಸೆಂಟರ್ ಕನ್ಸೋಲ್‌ಗೆ ಸಂಯೋಜಿತವಾಗಿರುವ ಸ್ಮಾರ್ಟ್‌ಫೋನ್ ಹೋಲ್ಡರ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. 464W ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್‌ನೊಂದಿಗೆ 16 ಸ್ಪೀಕರ್‌ಗಳನ್ನು ಒಳಗೊಂಡಿದೆ.
ಸುರಕ್ಷತಾ ಫಿಚರ್‌ಗಳು: ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್‌ಗಳು, ಆಟೋಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್‌ಗಳೊಂದಿಗೆ (ADB), BMW xDrive ಆಲ್-ವೀಲ್-ಡ್ರೈವ್ ಸಿಸ್ಟಮ್, ವಿಸ್ತೃತ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (DTC), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಪ್ರತಿ ಭೂಪ್ರದೇಶಲ್ಲೂ ಉತ್ತಮ ಗ್ರಿಪ್‌ಗೆ ಸಹಾಯ ಮಾಡುತ್ತದೆ.

ಇಂಟೀರಿಯರ್: ಒಳಾಂಗಣದಲ್ಲಿ ಮಲ್ಟಿ-ಫಂಕ್ಷನ್ ಸ್ಪೋರ್ಟ್ ಸ್ಟೀರಿಂಗ್ ವೀಲ್, ಮೆಮೊರಿ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕಲ್ ಸೀಟ್ ಹೊಂದಾಣಿಕೆ, ಪನಾರಮಿಕ್ ಗ್ಲಾಸ್ ರೂಫ್ ಮತ್ತು ವೆಲ್‌ಕಮ್ ಲೈಟ್ ಕಾರ್ಪೆಟ್ ಹಾಗೂ ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರೋಪ್ಲೇಟೆಡ್ ಕಂಟ್ರೋಲ್‌ಗಳು ಮತ್ತು ವಿಸ್ತೃತ ಆಯ್ಕೆಗಳೊಂದಿಗೆ 3-ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಗ್ರಾಹಕರಿಗೆ ಒಟ್ಟಾರೆ ಐಷಾರಾಮಿ ಭಾವನೆಯನ್ನು ಹೆಚ್ಚಿಸುತ್ತವೆ.
ಎಂಜಿನ್: BMW ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದೊಂದಿಗೆ ಡೀಸೆಲ್ ಎಂಜಿನ್ ಅನ್ನು ನೀಡಿದೆ. ಇದರ 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ 140 kW / 190 hp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ವೇಗ ಮತ್ತು ಗಂಟೆಗೆ 213 ಕಿ.ಮೀ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








