Mahindra XUV 3XO ಕೊಳ್ಳುವವರ ಗಮನಕ್ಕೆ: ಈ ವೇರಿಯಂಟ್‌ಗಳು ಸಿಗಲು ಆರು ತಿಂಗಳು ಕಾಯಬೇಕು!
ಮಹೀಂದ್ರಾ ಕಂಪನಿ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ ಕಾರೆಂದರೆ ಅದು ಮಹೀಂದ್ರಾ XUV 3XO. ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಕಡಿಮೆ ಬೆಲೆಗೆ ಮಾರುಕಟ್ಟೆಗೆ ತಂದಿರುವ ಈ ಕಾರು ಇದೀಗ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಕಾರಿನ AX5, AX5 L ಮಾದರಿಯ ಬೇಡಿಕೆ ಹೆಚ್ಚಾಗುತ್ತಿದೆ.
ಹೌದು, ನಿಮಗೆಲ್ಲಾ ಗೊತ್ತಿರುವಂತೆ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಈ ಕಾರು ಸುಮಾರು 50,000 ಕ್ಕೂ ಅಧಿಕ ಬುಕಿಂಗ್ ಅನ್ನು ಪಡೆದುಕೊಂಡು ಎದುರಾಳಿಗಳ ಎದೆಯಲ್ಲಿ ನಡುಕ ಉಂಟು ಮಾಡಿತ್ತು. ಈ ಕಾರಿನ ವಿತರಣೆ ಮೇ 26 ರಿಂದ ಆರಂಭವಾಗುತ್ತಿದೆಯಾದರೂ, ಈ ಕಾರಿನ ಕೆಲವು ವೇರಿಯಂಟ್‌ಗಳ ಡೆಲಿವರಿಯನ್ನು ಪಡೆಯಲು ಸುಮಾರು ೬ ತಿಂಗಳವರೆಗೂ ಕಾಯಬೇಕಿದೆ ಎಂದು ತಿಳಿದು ಬಂದಿದೆ.

ಹೌದು, ಈ ಕಾರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿಡ್ ಸ್ಪೆಕ್ ವೇರಿಯಂಟ್ ಆದ AX5, AX5 L ಗಳಿಗೆ ಹೆಚ್ಚು ಬುಕಿಂಗ್‌ಗಳು ಬಂದಿದೆ ಎಂದು ತಿಳಿದು ಬಂದಿದೆ. ಈ ವೇರಿಯಂಟ್ ಬಗ್ಗೆ ನೋಡುವುದಾದರೆ, ಈ ವೇರಿಯಂಟ್‌ನಲ್ಲಿ 16-ಇಂಚ್ ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳು, 10.25 ಇಂಚ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ, ಟಿಪಿಎಂಸ್ ಮುಂತಾದ ಫೀಚರ್‌ಗಳು ಸಿಗುತ್ತದೆ.
ಮಹೀಂದ್ರಾ XUV 3XO ಕಾರಿನ ಕುರಿತಾಗಿ ನೋಡುವುದಾದರೆ, ಕಂಪನಿ ಪ್ರಕಾರ, ಮಹೀಂದ್ರಾ XU V 3XO ಮೊದಲ 10 ನಿಮಿಷಗಳಲ್ಲಿ 27,000 ಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಇದು ಮಹೀಂದ್ರಾದ ಹೊಸ SUV ಗೆ ನಂಬಲಾಗದ ಉತ್ಸಾಹವನ್ನು ಪ್ರದರ್ಶಿಸುತ್ತದೆ. ಈ ಮೈಲಿಗಲ್ಲು XUV 3XO ನ ಅಸಾಧಾರಣ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷವಾಗಿದೆ. ಈ ಎಸ್‍ಯುವಿ MX, AX, AX5 ಮತ್ತು AX7 ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ.
ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊಸ ಮಹೀಂದ್ರಾ ಸಬ್‌ಕಾಂಪ್ಯಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್, ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications