ವಿಡಿಯೋ ವೈರಲ್... ಥಾರ್ ಮತ್ತು ಸ್ಕಾರ್ಪಿಯೋ ನಡುವೆ ಹಗ್ಗ-ಜಗ್ಗಾಟ: ಇದು ಅಸಲಿ ಯುದ್ಧ!
ಭಾರತದ ಹೆಮ್ಮೆಯ ವಾಹನ ನಿರ್ಮಾಣ ಕಂಪನಿಯಾದ ಮಹೀಂದ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗಾಗಲೇ ಹಲವಾರು ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಮಹೀಂದ್ರಾ ಜನಮಾನಸದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಿದೆ. ಮಹೀಂದ್ರಾ ಕಂಪನಿಯ ಥಾರ್ ಮತ್ತು ಸ್ಕಾರ್ಪಿಯೋ ಕಾರುಗಳ ಬಗ್ಗೆ ಕೇಳದವರು ಇಲ್ಲಾ ಎಂದರೆ ತಪ್ಪಾಗಲಾರದು.
ಮಹೀಂದ್ರಾ ಥಾರ್ ಭಾರತದಲ್ಲಿ ಕೈಗೆಟಜುವ ಬೆಲೆಯಲ್ಲಿ ಸಿಗುವ ಪ್ರಸಿದ್ದ ಆಫ್‌ರೋಡ್ ವಾಹನ. ಹಲವಾರು ತಲೆಮಾರುಗಳಿಂದ ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಇದ್ದು ವರುಷಗಳು ಕಳೆದಂತೆ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಇದೀಗ ಈ ಕಾರಿನ ಡಿಸೈನ್ ಮತ್ತು ಪ್ರಫಾಮೆನ್ಸ್‌ಗೆ ಸಾಟಿಯೇ ಇಲ್ಲ ಎನ್ನುವ ರೀತಿಯಲ್ಲಿದೆ. ಬುಕ್ ಮಾಡಿ ಹಲವಾರು ತಿಂಗಳುಗಳು ಸಹ ಕಾಯಬೇಕಿದೆ ಈ ಕಾರನ್ನು ಮನೆಗೆ ಕೊಂಡೊಯ್ಯಲು.

ಇದೀಗ ಥಾರ್ ಮತ್ತು ಸ್ಕಾರ್ಪಿಯೋ ಎನ್ ಕಾರುಗಳ ನಡುವಿನ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎರಡೂ ವಾಹನಗಳ ನಡುವೆ ಹಗ್ಗ ಜಗ್ಗಾಟದ ರೀತಿಯಲ್ಲಿ ವಿಡಿಯೋ ಮಾಡಲಾಗಿದ್ದು, ಇದರಲ್ಲಿ ಯಾವುದು ಬಲಿಷ್ಟ ಎಂದು ನೋಡುವ ಸ್ಪರ್ಧೆಯ ರೀತಿಯಲ್ಲಿ ವಿಡಿಯೋವನ್ನು ಮಾಡಲಾಗಿದೆ. ಇಂದಿನ ಈ ಲೇಖನದಲ್ಲಿ ಈ ಕುರಿತಾಗಿ ನೋಡೋಣ.
ಈ ಸ್ಪರ್ಧೆಗೆ ಮಹೀಂದ್ರಾ ಥಾರ್‌ನ ಆಟೋಮ್ಯಾಟಿಕ್ ವೇರಿಯಂಟ್ ಅನ್ನು ಬಳಸಲಾಗಿದ್ದು, ಸ್ಕಾರ್ಪಿಯೋ ಎನ್ ೪ ಎಕ್ಸ್‌ಪ್ಲೋರ್ ಝಡ್‌೯ ಎಲ್ ಮ್ಯಾನುವಲ್ ವೇರಿಯಂಟ್ ಅನ್ನು ಬಳಸಲಾಗಿದೆ. ಎರಡೂ ಕಾರುಗಳು ಸಹ ಸ್ಪರ್ಧೆಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿಗೆ ಬಿದ್ದಿದ್ದು, ಎರಡೂ ಕಾರುಗಳು ಸಹ ಒಂದನ್ನೊಂದು ಬಿಟ್ಟು ಕೊಟ್ಟಿಲ್ಲ ಎಂಬುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿ ಹಲವು ಬಾರಿ ಮಹೀಂದ್ರಾ ಥಾರ್, ತನ್ನದೇ ಕಂಪನಿಯ ಮತ್ತೊಂದು ಕಾರಾದ ಮಹೀಂದ್ರಾ ಸ್ಕಾರ್ಪಿಯೋ ಅನ್ನು ಎಳೆದಿರುವುದನ್ನು ಕಾಣಬಹುದಾಗಿದೆ. ಈ ಕಾರಣದಿಂದಾಗಿ ಒಮ್ಮೊಮ್ಮೆ ಸ್ಕಾರ್ಪಿಯೋ ಆಫ್ ಸಹ ಆಯಿತೆಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಆದರೆ ಸ್ಕಾರ್ಪಿಯೋ ಸಹ ಫೋರ್ ವ್ಹೀಲ್ ಡ್ರೈವ್ ಇರುವ ಕಾರಾಗಿದ್ದು ಅದು ಸಹ ಪವರ್‌ಫುಲ್ ಆಗಿದೆ. ಹಾಗಾಗಿ ಅದು ಎಲ್ಲಿಯೂ ಸಹ ತಾನು ಥಾರ್‌ಗೆ ತಲೆಬಾಗುವ ಲಕ್ಷಣ ಕಾಣಿಸಲಿಲ್ಲ.
3-ಡೋರ್ ಮಹೀಂದ್ರಾ ಥಾರ್ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 3 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 - ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
2024ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಥಾರ್ 5-ಡೋರ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ 3-ಡೋರ್ ಥಾರ್ ಎಸ್‌ಯುವಿಯಂತೆ 2.0 ಲೀಟರ್ ಪೆಟ್ರೋಲ್, 2.2 - ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಪರಿಷ್ಕೃತ ಬಂಪರ್ ಹಾಗೂ ಹೊಸ ಬಣ್ಣದ ಆಯ್ಕೆಯನ್ನು ಸಿಗಬಹುದು ಎಂದು ಅಂದಾಜಿಸಲಾಗಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications