ಶ್ರೀಸಾಮಾನ್ಯರ ಐರಾವತಗಳಾದ ಮಾರುತಿ ಕಾರುಗಳು: 8 ಲಕ್ಷದ ಬ್ರೆಝಾ ನಂಬರ್ 1.. ಪಂಚ್, ಕ್ರೆಟಾ, ಸ್ಕಾರ್ಪಿಯೋ ಹಿಂದಕ್ಕೆ!

ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈಚೆಗೆ ಪ್ರಮುಖ ವಾಹನ ತಯಾರಕ ಕಂಪನಿಗಳು ಆಗಸ್ಟ್ ತಿಂಗಳ (2024) ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ಮಾರುತಿ ಸುಜುಕಿ 6 ಕಾರುಗಳೊಂದಿಗೆ ತನ್ನ ಪ್ರಾಬಲ್ಯ ಮುಂದುವರಿಸಿದೆ. ಆ ನಂತರ ಸ್ಥಾನದಲ್ಲಿ 2 ಕಾರುಗಳೊಂದಿಗೆ ಟಾಟಾ ಮೋಟಾರ್ಸ್ ಇದ್ದು, ಹ್ಯುಂಡೈ ಮೋಟಾರ್ ಹಾಗೂ ಮಹೀಂದ್ರಾ ಕಂಪನಿಯ ತಲಾ ಒಂದೊಂದು ಕಾರುಗಳು ಕೂಡ ಮಾರಾಟದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದಾಗ್ಯೂ, ಈ ಮೊದಲು ಅಗ್ರಸ್ಥಾನದಲ್ಲಿರುತ್ತಿದ್ದ ಟಾಟಾ ಪಂಚ್ ಹಾಗೂ ಹ್ಯುಂಡೈ ಕ್ರೆಟಾ ಕಾರುಗಳನ್ನು ಹಿಂದಿಕ್ಕಿ ಮಾರುತಿ ಸುಜುಕಿ ಬ್ರೆಝಾ ನಂಬರ್ 1 ಆಗಿದೆ.

ಕಳೆದ ತಿಂಗಳು (ಆಗಸ್ಟ್ 2024) ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಒಟ್ಟು 19,190 ಯುನಿಟ್ ಬ್ರೆಝಾ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 14,572 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 32% ಪ್ರಗತಿಯಾಗಿದೆ. ನೂತನ ಬ್ರೆಝಾ ಎಸ್‌ಯುವಿ ರೂ.8.34 ಲಕ್ಷದಿಂದ ರೂ.14.14 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

Top 10 Cars sales In August 2024 Brezza Ertiga Creta Wagon R Scorpio Swift to Nexon

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ಇದ್ದು, ಈ ಕಾರಿನ ಮಾರಾಟದಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಲಾಗಿದೆ. 2024ರ ಆಗಸ್ಟ್‌ನಲ್ಲಿ 18,580 ಯುನಿಟ್ ಎರ್ಟಿಗಾ ಎಂಪಿವಿಗಳನ್ನು ಮಾರಾಟ ಮಾಡಲಾಗಿದೆ. 2023ರ ಆಗಸ್ಟ್‌ ತಿಂಗಳ 12,315 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 51% ಅಭಿವೃದ್ಧಿಯಾಗಿದೆ. ಈ ಕಾರು ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.

ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ಕಳೆದ ತಿಂಗಳು (ಜುಲೈ 2024) ಮೊದಲ ಸ್ಥಾನದಲ್ಲಿತ್ತು. ಸದ್ಯ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೂ ಒಟ್ಟು 16,762 ಯುನಿಟ್‌ ಕ್ರೆಟಾ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 13,832 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 21% ಪ್ರಗತಿಯಾಗಿದೆ. ಈ ಕಾರು ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Top 10 Cars sales In August 2024 Brezza Ertiga Creta Wagon R Scorpio Swift to Nexon

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್ ನಾಲ್ಕನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳು 16,450 ಯುನಿಟ್ ವ್ಯಾಗನ್ಆರ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 15,578 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 6% ಬೆಳವಣಿಗೆಯಾಗಿದೆ. ಈ ಕಾರು ರೂ.5.54 ಲಕ್ಷದಿಂದ ರೂ.7.32 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ.

ಐದನೇ ಸ್ಥಾನದಲ್ಲಿ ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿಯಿದೆ. ಈ ಆಗಸ್ಟ್‌ನಲ್ಲಿ 15,643 ಯುನಿಟ್ ಮಾರಾಟ ಮಾಡಲಾಗಿದೆ. 2023ರ ಆಗಸ್ಟ್‌ ತಿಂಗಳಲ್ಲಿ ಮಾರಾಟಗೊಳಿಸಿದ 14,523 ಯುನಿಟ್‌ಗೆ ಹೋಲಿಕೆ ಮಾಡಿದರೆ ಶೇಕಡ 8% ಪ್ರಗತಿಯಾಗಿದೆ. ಈ ಕಾರಿನ ಇಂಧನ ಚಾಲಿತ ರೂಪಾಂತರ (ವೇರಿಯೆಂಟ್) ರೂ.6.13 ಲಕ್ಷದಿಂದ ರೂ.10.20 ಲಕ್ಷ ಮತ್ತು ಎಲೆಕ್ಟ್ರಿಕ್ ಚಾಲಿತ ರೂಪಾಂತರ ರೂ.10.99 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ.

Top 10 Cars sales In August 2024 Brezza Ertiga Creta Wagon R Scorpio Swift to Nexon

ಆರನೇ ಸ್ಥಾನದಲ್ಲಿ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಇದ್ದು, 13,787 ಯುನಿಟ್ ಮಾರಾಟ ಮಾಡಲಾಗಿದೆ. ಶೇಕಡ 39% ಬೆಳವಣಿಗೆ ದರವಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಮಾರುತಿ ಸುಜುಕಿ ಸ್ವಿಫ್ಟ್ (12,844 ಯುನಿಟ್), ಮಾರುತಿ ಸುಜುಕಿ ಬಲೆನೊ (12,485 ಯುನಿಟ್), ಮಾರುತಿ ಸುಜುಕಿ ಫ್ರಾಂಕ್ಸ್ (12,387 ಯುನಿಟ್) ಹಾಗೂ ಟಾಟಾ ನೆಕ್ಸಾನ್ (12,289 ಯುನಿಟ್) ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 6, 2024, 9:54 [IST]
English summary
Top 10 cars sales in august 2024 brezza ertiga creta wagon r scorpio swift nexon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+