Top 10 Cars: ಟಾಟಾ ಪಂಚ್ ನಂಬರ್ 1.. ಮಾರುತಿ ಸ್ವಿಫ್ಟ್ ನಂಬರ್ 2.. ನಿಮಿಷ್ಟದ ಕಾರು ಯಾವುದು?

ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳು ಜೂನ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿವೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳಲ್ಲಿ 5 ಎಸ್‌ಯುವಿ, 3 ಹ್ಯಾಚ್‌ಬ್ಯಾಕ್‌ ಹಾಗೂ ತಲಾ 1 ಸೆಡಾನ್ ಹಾಗೂ ಎಂಪಿವಿಗಳು ಸ್ಥಾನ ಪಡೆದಿವೆ. ಮಾರುತಿ ಸುಜುಕಿ ಇಂಡಿಯಾ (Maruti Suzuki India) 6 ಕಾರುಗರೊಂದಿಗೆ ತನ್ನ ಪ್ರಾಬಲ್ಯ ಮುಂದುವರೆಸಿದೆ. ನಂತರ ಸ್ಥಾನದಲ್ಲಿ 2 ಕಾರುಗಳೊಂದಿಗೆ ಟಾಟಾ ಮೋಟಾರ್ಸ್ (Tata Motors) ಇದ್ದು, ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಹಾಗೂ ಮಹೀಂದ್ರಾ (Mahindra) ಕಂಪನಿಯ ಒಂದೊಂದು ಕಾರುಗಳು ಕೂಡ ಪಟ್ಟಿಯಲ್ಲಿವೆ.

ಕಳೆದ ತಿಂಗಳು (ಜೂನ್ 2024) ಟಾಟಾದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್ (Punch) ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಬರೋಬ್ಬರಿ 18,238 ಕಾರುಗಳು ಗ್ರಾಹಕರ ಮನೆ ಸೇರಿವೆ. ನೂತನ ಟಾಟಾ ಪಂಚ್ ರೂ.6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 18.8 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Top 10 Cars Sales In June 2024 Punch Swift Creta Ertiga Baleno Dzire Brezza Scorpio Nexon

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್‌ ಇದ್ದು, 16,422 ಯುನಿಟ್ ಮಾರಾಟ ಮಾಡಲಾಗಿದೆ. ಹೊಚ್ಚ ಹೊಸ ಸ್ವಿಫ್ಟ್ ರೂ.6.49 ಲಕ್ಷದಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 24.8 ರಿಂದ 25.72 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ಮೂರನೇ ಸ್ಥಾನದಲ್ಲಿದ್ದು, 16,293 ಯುನಿಟ್ ಮಾರಲಾಗಿದೆ. ನೂತನ ಕ್ರೆಟಾ ರೂ.11 ಲಕ್ಷದಿಂದ ರೂ. 20.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್‌ನೊಂದಿಗೆ ಲಭ್ಯವಿದ್ದು, 17.4 ಕೆಎಂಪಿಎಲ್‌ ರಿಂದ 21.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.25-ಇಂಚಿನ ಡುಯಲ್ ಡಿಸ್ಪ್ಲೇ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್ ಒಳಗೊಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

Top 10 Cars Sales In June 2024 Punch Swift Creta Ertiga Baleno Dzire Brezza Scorpio Nexon

ನಾಲ್ಕನೇ ಸ್ಥಾನವನ್ನು ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ತನ್ನದಾಗಿಸಿಕೊಂಡಿದ್ದು, 15,902 ಯುನಿಟ್ ಮಾರಾಟ ಮಾಡಲಾಗಿದೆ. ಈ ಎರ್ಟಿಗಾ ಕಾರು ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದ್ದು, 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಐದನೇ ಸ್ಥಾನದಲಿದ್ದು, 14,895 ಯುನಿಟ್ ಮಾರಲಾಗಿದೆ. ಈ ಕಾರು ರೂ.8.45 ಲಕ್ಷದಿಂದ ರೂ.12.25 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಒಳಗೊಂಡಿದ್ದು, 22.35 ರಿಂದ 30.61 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Top 10 Cars Sales In June 2024 Punch Swift Creta Ertiga Baleno Dzire Brezza Scorpio Nexon

ಆರನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್ ಇದ್ದು, 13,790 ಯುನಿಟ್ ಮಾರಾಟ ಮಾಡಲಾಗಿದೆ. ರೂ.5.54 ಲಕ್ಷದಿಂದ ರೂ.7.33 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ದೊರೆಯುತ್ತದೆ. ನಂತರದ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (13,421 ಯುನಿಟ್), ಮಾರುತಿ ಸುಜುಕಿ ಬ್ರೆಝಾ (13,172 ಯುನಿಟ್), ಮಹೀಂದ್ರಾ ಸ್ಕಾರ್ಪಿಯೋ (12,307 ಯುನಿಟ್) ಹಾಗೂ ಟಾಟಾ ನೆಕ್ಸಾನ್ (12,066 ಯುನಿಟ್) ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 4, 2024, 10:39 [IST]
English summary
Top 10 cars sales in june 2024 punch swift creta ertiga baleno dzire brezza scorpio nexon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+