ಜನಪ್ರಿಯ ಕಂಪನಿಗಳ 3 ಜಬರ್ದಸ್ತ್ ಕಾರುಗಳು ಆಗಸ್ಟ್‌ನಲ್ಲಿ ಬರಲಿವೆ.. ದುಡ್ಡನ್ನು ಜೋಪಾನ ಮಾಡಿ!

ವಿಶ್ವದಲ್ಲಿ ಭಾರತ ಅತಿದೊಡ್ಡ ಕಾರು ಮಾರುಕಟ್ಟೆ ಹೊಂದಿದೆ. ಜನಪ್ರಿಯ ವಾಹನ ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್, ಮಹೀಂದ್ರಾ ಹಾಗೂ ಸಿಟ್ರನ್ ಆಗಸ್ಟ್‌ನಲ್ಲಿ ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿವೆ. ಎರಡು ಕೂಪೆ ಎಸ್‌ಯುವಿ ಹಾಗೂ ಒಂದು ಆಫ್-ರೋಡ್ ಎಸ್‌ಯುವಿಯು ಅದ್ದೂರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಕಾರುಗಳು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರಲಿದ್ದು, ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ರೀತಿಯಲ್ಲಿವೆ. ನೀವು ಬಜೆಟ್ ದರದಲ್ಲಿ ನೂತನ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದರೆ.. ಇವು ಉತ್ತಮ ಆಯ್ಕೆಯಾಗಬಹುದು.

ಟಾಟಾ ಕರ್ವ್ (Tata Curvv): ಇದೊಂದು ಕೂಪೆ ಎಸ್‌ಯುವಿಯಾಗಿದೆ. ಆಗಸ್ಟ್ 7ರಂದು ಬಿಡುಗಡೆಯಾಗಲಿದೆ. ಮೊದಲಿಗೆ ಎಲೆಕ್ಟ್ರಿಕ್ ರೂಪದಲ್ಲಿ ಬರಲಿದ್ದು, ಆ ನಂತರ ಇಂಧನ ಚಾಲಿತ (ಪೆಟ್ರೋಲ್/ ಡೀಸೆಲ್) ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಮೂಲಗಳ ಪ್ರಕಾರ, ಕರ್ವ್ ಎಲೆಕ್ಟ್ರಿಕ್ ಕಾರಿನ ಗರಿಷ್ಠ ಶ್ರೇಣಿ ರೂಪಾಂತರ 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 600 ಕಿಲೋಮೀಟರ್ ಓಡುತ್ತದೆ ಎಂದು ತಿಳಿದುಬಂದಿದೆ.

Top 3 Cars launch In August 2024 Mahindra Thar Roxx Tata Curvv and Citroen Basalt

ಅದೇ ರೀತಿಯಲ್ಲಿ ಇಂಧನ ಚಾಲಿತ ಕರ್ವ್ 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಜಿಡಿಐ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ ಎನ್ನಲಾಗಿದೆ. ಬೆಲೆ ವಿಚಾರವಾಗಿ ಹೇಳುವುದಾದರೆ, ಇವೆರೆಡು ಮಾದರಿ (ಮಾಡೆಲ್)ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಎಲೆಕ್ಟ್ರಿಕ್ ಕಾರು ರೂ.18 ಲಕ್ಷ ಹಾಗೂ ಇಂಧನ ಚಾಲಿತ ಕಾರು ರೂ.10.50 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx): ಈ ಆಫ್-ರೋಡ್ ಎಸ್‌ಯುವಿಯ ಬರುವಿಕೆಗೆ ಗ್ರಾಹಕರು ತುದಿಗಾಲಿನಲ್ಲಿ ಕಾಯುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಆಗಸ್ಟ್ 15ರಂದು ಆದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದು 5-ಡೋರ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ರೂ.12.50 ಲಕ್ಷದಿಂದ ರೂ.18.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ.

Top 3 Cars launch In August 2024 Mahindra Thar Roxx Tata Curvv and Citroen Basalt

ನೂತನ ಥಾರ್ ರಾಕ್ಸ್‌ 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿರಲಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದ್ದು, ಸುರಕ್ಷತೆಗಾಗಿ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಿರುವ ಸಾಧ್ಯತೆಯಿದೆ.

ಸಿಟ್ರನ್ ಬಸಾಲ್ಟ್ (Citroen Basalt): ಟಾಟಾ ಕರ್ವ್‌ನಂತೆ ಇದು ಸಹ ಕೂಪೆ ಎಸ್‌ಯುವಿಯಾಗಿದೆ. ಆಗಸ್ಟ್ 2ರಂದು ಈ ಕಾರನ್ನು ಅನಾವರಣ ಮಾಡಲಾಗುತ್ತದೆ. ಆ ಬಳಿಕ, ಮಾರಾಟ ಹಾಗೂ ವಿತರಣೆಗಳು ಆರಂಭವಾಗಲಿವೆ. ಸದ್ಯ ದೇಶಾದ್ಯಂತ ನೂತನ 'ಬಸಾಲ್ಟ್'ಗಾಗಿ ಆಯ್ದ ಡೀಲರ್‌ಶಿಪ್‌ಗಳು ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ಶುರು ಮಾಡಿವೆ ಎಂದು ತಿಳಿದುಬಂದಿದೆ. ಈ ಕಾರು ರೂ.11 ರಿಂದ ರೂ.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುವ ನಿರೀಕ್ಷೆಯಿದೆ.

Top 3 Cars launch In August 2024 Mahindra Thar Roxx Tata Curvv and Citroen Basalt

ಈ ಸಿಟ್ರನ್ ಬಸಾಲ್ಟ್ 1.2-ಟರ್ಬೊ ಪೆಟ್ರೋಲ್ ಎಂಜಿನ್‌ ಮತ್ತು 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿರಲಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು. ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್‌ ಪಡೆದಿರಲಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 25, 2024, 11:04 [IST]
English summary
Top 3 car launch in august 2024 mahindra thar roxx tata curvv citroen basalt
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+