ಟಾಪ್-4 ಬಜೆಟ್ ಎಲೆಕ್ಟ್ರಿಕ್ ಕಾರುಗಳು: ಆರಂಭಿಕ ಬೆಲೆ 4.99 ಲಕ್ಷ: ಆಕರ್ಷಕ ಫೀಚರ್ಸ್
ವಿಶ್ವ ಆಟೋಮೊಬೈಲ್ ಉದ್ಯಮವು ನಿತ್ಯ ಹೊಸ ಆವಿಷ್ಕಾರಗಳಿಂದ ಕೂಡಿರುತ್ತದೆ. ತಂತ್ರಜ್ಞಾನ ಬೆಳೆದಂತೆ ವಾಹನ ತಯಾರಕರು ಕೂಡಲೇ ಅಳವಡಿಸಿಕೊಂಡು ವೇಗದ ಜಗತ್ತಿನೊಂದಿಗೆ ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿದ್ದಾರೆ. ಅಂತೆಯೇ ಭವಿಷ್ಯವು ಎಲೆಕ್ಟ್ರಿಕ್ ವಾಹನಗಳ ಮೇಲೆ ಅವಲಂಭಿತವಾಗಿರುವುದನ್ನು ಅರಿತುಕೊಂಡು ಈಗಿನಿಂದಲೇ ಎಲ್ಲಾ ಬ್ರಾಂಡ್‌ಗಳು ಹೊಸ ಇವಿಗಳನ್ನು ಪರಿಚಯಿಸುತ್ತಿದ್ದಾರೆ. ಜನರು ಕೂಡ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ನಿಮಗೂ ಎಲೆಕ್ಟ್ರಿಕ್ ಕಾರು ಖರೀದಿಸುವ ಪ್ಲಾನ್ ಇದ್ದರೆ ಅತ್ಯುತ್ತಮ ವೈಶಿಷ್ಟ್ಯಗಳು, ಪ್ರಭಾವಶಾಲಿ ರೇಂಜ್ ನೀಡುವ ಟಾಪ್ 4 ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳು ಇಲ್ಲಿವೆ.
1. ಎಂಜಿ ಕಾಮೆಟ್ ಇವಿ: ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ BAAS (ಬ್ಯಾಟರಿ-ಆಸ್-ಎ-ಸರ್ವಿಸ್)ಅಡಿಯಲ್ಲಿ ಆರಂಭಿಕ ಬೆಲೆಯು 4.99 ಲಕ್ಷ ರೂ. (ಎಕ್ಸ್ ಶೋರೂಂ) ಇದ್ದು, ಜೊತೆಗೆ ಬ್ಯಾಟರಿ ಬಾಡಿಗೆಗೆ ಪ್ರತಿ ಕಿ.ಮೀ.ಗೆ 2.5 ರೂ. ಇದೆ. ಕಾಮೆಟ್ ಇವಿ ಅದರ ಸಣ್ಣ ಗಾತ್ರದಿಂದ ಸಿಟಿ ಡ್ರೈವಿಂಗ್‌ಗೆ ಸೂಕ್ತವಾಗಿದೆ. 17.3 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಈ ಕಾರು 230 ಕಿ.ಮೀ ರೇಂಜ್ ನೀಡುತ್ತದೆ.

2. ಟಾಟಾ ಟಿಯಾಗೊ ಇವಿ: ಟಾಟಾ ಮೋಟಾರ್ಸ್ ನೀಡುತ್ತಿರುವ ಟಿಯಾಗೊ ಇವಿ ಅತ್ಯಂತ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರಾಗಿದೆ. ಒಳಭಾಗವು ಹೈ ಎಂಡ್ ಹರ್ಮನ್ ಸೌಂಡ್ ಸಿಸ್ಟಮ್, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7-ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.7.99 ಲಕ್ಷಗಳಾಗಿದೆ.
ನಾಲ್ಕು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ ಟಾಟಾ ಟಿಯಾಗೊ ಇವಿ ಕಾರು, 19.2 ಕಿಲೋವ್ಯಾಟ್ ಮತ್ತು 24 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಸಣ್ಣ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ನಲ್ಲಿ 315 ಕಿ.ಮೀ ರೇಂಜ್ ನೀಡುತ್ತದೆ.

3. ಟಾಟಾ ಪಂಚ್ ಇವಿ: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ಆವೃತ್ತಿಗಳಲ್ಲಿ ಲಭ್ಯವಿದೆ. ಪಂಚ್ ಇವಿಯ ಎಕ್ಸ್ ಶೋರೂಂ ಬೆಲೆ ಈಗ 9.99 ಲಕ್ಷ ರೂ. ಇದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 265 ರಿಂದ 365 ಕಿಲೋಮೀಟರ್ ರೇಂಜ್ ನೀಡುತ್ತದೆ. 25 ಮತ್ತು 35 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿಗಳನ್ನು ಹೊಂದಿದೆ.
4. ಸಿಟ್ರನ್ ಇಸಿ3: ಸಿಟ್ರನ್ ಕಂಪನಿ ನೀಡುತ್ತಿರುವ ಬಜೆಟ್ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಟ್ರನ್ ಇಸಿ3 ಬೆಸ್ಟ್ ಕಾರಾಗಿದೆ. ಇದು ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, 10.2-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಇದರ ಎಕ್ಸ್ ಶೋರೂಂ ಆರಂಭಿಕ ಬೆಲೆಯು ರೂ.11.61 ಲಕ್ಷಗಳಾಗಿದೆ.

ಹೊಸ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲಿ 320 ಕಿ.ಮೀವರೆಗೆ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದು 29.2 ಕಿಲೋವ್ಯಾಟ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದರ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದಿಂದಾಗಿ ಕೇವಲ 57 ನಿಮಿಷಗಳಲ್ಲಿ ಕಾರಿನ ಬ್ಯಾಟರಿಯನ್ನು ಶೇ 80 ವರೆಗೆ ಚಾರ್ಜ್ ಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications