6 ಲಕ್ಷ ರೂ.ಗಿಂತ ಕಡಿಮೆ ಬೆಲೆ: 25 ಕಿ.ಮೀ ಮೈಲೇಜ್ ನೀಡುವ ಟಾಪ್-5 ಕಾರುಗಳು

ಭಾರತದಲ್ಲಿ ಜನ ಈ ಹಿಂದೆ ಕಾರು ಖರೀದಿಸುವ ಮುನ್ನ ಮುಖ್ಯವಾಗಿ ಬೆಲೆಯನ್ನು ಪರಿಶೀಲಿಸುತ್ತಿದ್ದರು. ಆದರೆ ಈಗ ಹೊಸ ಕಾರು ಖರೀದಿದಾರರು ಸುರಕ್ಷತೆ ಮತ್ತು ನಿರ್ಮಾಣ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇವುಗಳ ಜೊತೆಗೆ ಅತಿಮುಖ್ಯವಾಗಿ ಮೈಲೇಜ್ ಪ್ರಮುಖ ಆದ್ಯತೆಯಾಗಿದೆ. ಮಾಲೀಕತ್ವದ ವೆಚ್ಚವು ಖರೀದಿ ನಿರ್ಧಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇಂತಹ ಗ್ರಾಹಕರಿಗೆ ಸರಿಯಾದ ಮಾಹಿತಿಯಿಲ್ಲದೇ ಕಾರು ಖರೀದಿಸುವುಲ್ಲಿ ಗೊಂದಲ್ಲಕ್ಕೆ ಒಳಗಾಗುತ್ತಿದ್ದಾರೆ. ಅಂತವರಿಗಾಗಿಯೇ ಇಲ್ಲಿ ಕಡಿಮೆ ಬೆಲೆಗೆ ಬೆಸ್ಟ ಮೈಲೇಜ್ ನೀಡುವ ಟಾಪ್ ಕಾರುಗಳನ್ನು ಪಟ್ಟಿ ಮಾಡಿದ್ದೇವೆ.

ಭಾರತದಲ್ಲಿ ಮಾರುತಿ ಸುಜುಕಿ ಮೈಲೇಜ್ ನೀಡುವ ಬೆಸ್ಟ್‌ ಕಾರುಗಳಿಗೆ ಜನಪ್ರಿಯತೆಯನ್ನು ಪಡೆದಿದೆ. ಆದರೆ ಗುಣಮಟ್ಟದ ವಿಚಾರವನ್ನು ಇಲ್ಲಿ ಪ್ರಸ್ತಾವಿಸುತ್ತಿಲ್ಲ, ಅಗ್ಗದ ಬೆಲೆಯ ಬೆಸ್ಟ್‌ ಮೈಲೇಜ್ ಕಾರುಗಳನ್ನು ಮಾತ್ರ ಇಲ್ಲಿ ನೀಡುತ್ತಿದ್ದೇವೆ. ಕಡಿಮೆ ಬಜೆಟ್ ಹೊಂದಿರುವ ಕಾರು ಖರೀದಿದಾರರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿರುತ್ತದೆ. ಅಂತೆಯೇ, 6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಮೈಲೇಜ್ ಕಾರುಗಳ ಪಟ್ಟಿ ಇಲ್ಲಿದೆ.

top-5-cars-with-25-km-mileage-under-rs-6-lakh

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಮಾರುತಿ ಸುಜುಕಿ ಎಸ್-ಪ್ರೆಸ್ಸೊ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇಂಧನ ದಕ್ಷತೆಗೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಪ್ರತಿ ಲೀಟರ್‌ಗೆ 24.12 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆಗಳು 4.26 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.

ಮಾರುತಿ ಸುಜುಕಿ ವ್ಯಾಗನ್ಆರ್: ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ರೂಪಾಂತರ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಅತ್ಯಂತ ಹೆಚ್ಚಿನ ಮೈಲೇಜ್ ನೀಡುವ ವೇರಿಯೆಂಟ್ ಪ್ರತಿ ಲೀಟರ್‌ಗೆ 25.29 ಕಿ.ಮೀ ನೀಡುತ್ತದೆ. ವ್ಯಾಗನ್ ಆರ್ ಶ್ರೇಣಿಯ ಬೆಲೆಗಳು 5.45 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.

top-5-cars-with-25-km-mileage-under-rs-6-lakh

ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ ಕೂಡ ವ್ಯಾಗನ್ ಆರ್‌ನಂತೆ ಲೀಟರ್‌ಗೆ 24.97 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.36 ಲಕ್ಷಗಳಾಗಿದೆ. ಈ ಕಾರು ಮಾರುತಿ ಸುಜುಕಿಯ ಬೆಸ್ಟ್ ಸೆಲ್ಲಿಂಗ್ ಕಾರು ಕೂಡ ಹೌದು.

ರೆನಾಲ್ಟ್ ಕ್ವಿಡ್: ರೆನಾಲ್ಟ್ ಕ್ವಿಡ್ ಭಾರತದಲ್ಲಿ 1.0-ಲೀಟರ್, 3-ಸಿಲಿಂಡರ್, ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ವಾಹನ ತಯಾರಕರ ಪ್ರಕಾರ, ಕ್ವಿಡ್ ಪ್ರತಿ ಲೀಟರ್ ಗೆ 22.30 ಕಿ.ಮೀ ಮೈಲೇಜ್ ನೀಡುತ್ತದೆ. ಈ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.69 ಲಕ್ಷಗಳಾಗಿದೆ.

top-5-cars-with-25-km-mileage-under-rs-6-lakh

ಮಾರುತಿ ಸುಜುಕಿ ಸ್ವಿಫ್ಟ್: ಮಾರುತಿ ಸುಜುಕಿ ಸ್ವಿಫ್ಟ್ 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು ಲೀಟರ್‌ಗೆ 22.56 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 6, 2024, 4:00 [IST]
English summary
Top 5 cars with 25 km mileage under rs 6 lakh
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+