ಬಿಗಿ ಹಿಡಿತ ಸಾಧಿಸಿದ ಮಾರುತಿ: 6.49 ಲಕ್ಷದ ಈ ಕಾರು ಗೇಮ್ ಚೇಂಜರ್.. ಜನಪ್ರಿಯ ಕಂಪನಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!

ಮಾರುತಿ ಸುಜುಕಿ (Maruti Suzuki), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ, ಅಕ್ಟೋಬರ್ ತಿಂಗಳ ಕಾರು ಮಾರಾಟ ಅಂಕಿಅಂಶಗಳ ವರದಿ ಪ್ರಕಟಗೊಂಡಿದೆ. ಕಾಂಪ್ಯಾಕ್ಟ್ ಹಾಗೂ ಮಿಡ್-ಸೈಜ್ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಕಂಪನಿಯ ಕಾರುಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ಮಾರಲಾಗಿದ್ದ 48,000 ಯುನಿಟ್ ಹ್ಯಾಚ್‌ಬ್ಯಾಕ್‌ಗಳ ಪೈಕಿ ಮಾರುತಿ ಸುಜುಕಿಗೆ ಸೇರಿದ 37,000ಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ಈ ಮೂಲಕ ಕಂಪನಿಯು ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಶೇಕಡ 75% ಮಾರುಕಟ್ಟೆ ಪಾಲನ್ನು ಹೊಂದಿದೆ. ಟಾಪ್ 5 ಹ್ಯಾಚ್‌ಬ್ಯಾಕ್‌ಗಳಲ್ಲಿ ಮಾರುತಿ ಸುಜುಕಿಯ 3, ಹ್ಯುಂಡೈ ಹಾಗೂ ಟಾಟಾದ ತಲಾ 1 ಕಾರುಗಳು ಸ್ಥಾನ ಪಡೆದಿವೆ.

ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಈ ಪರಿಪ್ರಮಾಣದಲ್ಲಿ ಯಶಸ್ಸು ಸಾಧಿಸಾಲು ಸ್ವಿಫ್ಟ್ (Swift) ಕಾರು ಪ್ರಮುಖ ಕಾರಣವಾಗಿದೆ. ಕಾಂಪ್ಯಾಕ್ಟ್ ಮತ್ತು ಮಿಡ್-ಸೈಜ್ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು (ಅಕ್ಟೋಬರ್ 2024) 17,539 ಯುನಿಟ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 20,598 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 15% ಇಳಿಕೆಯಾಗಿದೆ.

Top 5 Hatchback October 2024 Sales Maruti Suzuki Dominate The Market Swift Become Game Changer

ಆದರೆ, ಸೆಪ್ಟೆಂಬರ್‌ನಲ್ಲಿ (2024) ಮಾರಾಟ ಮಾಡಲಾಗಿದ್ದ 16,241 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ತಿಂಗಳಿಂದ ತಿಂಗಳಿಗೆ (MoM) ಶೇಕಡ 8% ಪ್ರಗತಿಯಾಗಿದೆ. ನೂತನ ಸ್ವಿಫ್ಟ್ ಕಾರು, ರೂ.6.49 ರಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಪ್ರಯಾಣಿಸಬಹುದು.

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್‌ ಇದೆ. ಈ ಅಕ್ಟೋಬರ್‌ನಲ್ಲಿ 13,922 ಯುನಿಟ್ ವ್ಯಾಗನ್ಆರ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಅಕ್ಟೋಬರ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 37% ಹಿನ್ನಡೆಯಾಗಿದೆ. ಸೆಪ್ಟೆಂಬರ್‌ಗೆ (13,339 ಯುನಿಟ್) ಹೋಲಿಕೆ ಮಾಡಿದರೆ ಮಾರಾಟ ಪ್ರಮಾಣ ಕೊಂಚ ಸುಧಾರಿಸಿದೆ.

Top 5 Hatchback October 2024 Sales Maruti Suzuki Dominate The Market Swift Become Game Changer

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ ವ್ಯಾಗನ್ಆರ್ ಕಾರು, ರೂ.5.54 ಲಕ್ಷದಿಂದ ರೂ.7.33 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 1-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 23.56 ರಿಂದ 33.48 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿಯೂ 5 ಜನರು ಓಡಾಟ ನಡೆಸಬಹುದು.

ಮೂರನೇ ಸ್ಥಾನವನ್ನು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios) ಹ್ಯಾಚ್‌ಬ್ಯಾಕ್‌ ಭದ್ರಪಡಿಸಿಕೊಂಡಿದೆ. ಹೋದ ತಿಂಗಳು (ಅಕ್ಟೋಬರ್ 2024) 6,235 ಯುನಿಟ್ ಐ10 ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಅಕ್ಟೋಬರ್‌ನ 6,552 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 5% ಇಳಿಕೆಯಾಗಿದೆ. ಆದರೆ, ಸೆಪ್ಟೆಂಬರ್‌ಗೆ (5,103 ಯುನಿಟ್) ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿ ಉತ್ತಮವಾಗಿ ಬೆಳವಣಿಗೆಯಾಗಿದೆ.

Top 5 Hatchback October 2024 Sales Maruti Suzuki Dominate The Market Swift Become Game Changer

ನೂತನ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು, ಕನಿಷ್ಠ ರೂ.5.92 ಲಕ್ಷ ಹಾಗೂ ಗರಿಷ್ಠ ರೂ.8.56 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಎಸಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇದರಲ್ಲಿ ಕೂಡ 5 ಮಂದಿ ಸಂಚರಿಸಬಹುದು.

ನಾಲ್ಕನೇ ಸ್ಥಾನದಲ್ಲಿ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್‌ ಇದೆ. ಈ ಅಕ್ಟೋಬರ್‌ನಲ್ಲಿ 4,682 ಯುನಿಟ್ ಟಿಯಾಗೊ (ಐಸಿಇ + ಇವಿ) ಕಾರುಗಳನ್ನು ಮಾರಾಟಗೊಳಿಸಲಾಗಿದೆ. ಸಾಮಾನ್ಯ ಟಿಯಾಗೊ ಕಾರು, ರೂ.5 ರಿಂದ ರೂ.8.75 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಎಲೆಕ್ಟ್ರಿಕ್ ಚಾಲಿತ ಟಿಯಾಗೊ ಹ್ಯಾಚ್‌ಬ್ಯಾಕ್‌, 7.99 ಲಕ್ಷದಿಂದ ರೂ.11.49 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.

ಐದನೇ ಸ್ಥಾನದಲ್ಲಿ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಹ್ಯಾಚ್‌ಬ್ಯಾಕ್‌ ಇದ್ದು, ಕಳೆದ ತಿಂಗಳು (ಅಕ್ಟೋಬರ್ 2024) 3,044 ಯುನಿಟ್ ಸೆಲೆರಿಯೊ ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ನೂತನ ಹ್ಯಾಚ್‌ಬ್ಯಾಕ್‌ ರೂ.4.99 ಲಕ್ಷದಿಂದ ರೂ.7.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

Article Published On: Friday, November 15, 2024, 18:57 [IST]
English summary
Top 5 hatchback october 2024 sales maruti suzuki dominate the market swift become game changer
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+