ಟಾಪ್ 5 ಅತ್ಯಂತ ಕೈಗೆಟುಕುವ ಬೆಲೆಯ ಪವರ್‌ಫುಲ್ ಟರ್ಬೊ ಪೆಟ್ರೋಲ್ ಕಾರುಗಳು!
ಹೆಚ್ಚಿನ ಕಾರುಗಳು ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಿತವಾದ ಪರ್ಫಾಮೆನ್ಸ್ ಮತ್ತು ಉತ್ತಮ ಮೈಲೇಜ್‌ನೊಂದಿಗೆ ಬರುತ್ತವೆ. ಆದ್ರೆ ಟರ್ಬೊ ಪೆಟ್ರೋಲ್ ಎಂಜಿನ್ ಹಾಗಲ್ಲ, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಉತ್ಪಾದಿಸುತ್ತದೆ. ಭಾರತದಲ್ಲಿ, ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಅತ್ಯಂತ ಕೈಗೆಟುಕುವ ಒಂದಷ್ಟು ಕಾರುಗಳು ಇವೆ. ಹಾಗಾದ್ರೆ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರುಗಳನ್ನು ಆಯ್ಕೆ ಮಾಡುವಾಗ ಖರೀದಿದಾರರು ಪರಿಶೀಲಿಸಬಹುದಾದ ಟಾಪ್ ಐದು ಅತ್ಯಂತ ಕೈಗೆಟುಕುವ ಕಾರುಗಳನ್ನು ಇಲ್ಲಿ ನೋಡೋಣ.
ಸಿಟ್ರನ್ C3: ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿರುವ ಖರೀದಿದಾರರು ಸಿಟ್ರನ್ C3 ಅನ್ನು ಪರಿಶೀಲಿಸಬಹುದು. ಸಿಟ್ರನ್ C3 ಕಾರು 1.2L ಇನ್‌ಲೈನ್ 3 - ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 110BH ಪವರ್ ಮತ್ತು 190Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಬರೋಬ್ಬರಿ 205Nm ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ತನ್ನ ಶೈನ್ ವೇರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಗೇರ್ ಆಯ್ಕೆಯನ್ನು ನೀಡುತ್ತದೆ. ಸಿಟ್ರನ್ C3 ಶೈನ್ ವೆರಿಯೆಂಟ್ ಬೆಲೆಯು ರೂ 9.30 ಲಕ್ಷ (ಎಕ್ಸ್ ಶೋ ರೂಂ) ಇದೆ.
ಟಾಟಾ ಆಲ್ಟ್ರೋಜ್ ರೇಸರ್: ಖರೀದಿದಾರರು ಪರಿಶೀಲಿಸಬಹುದಾದ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳ ಪಟ್ಟಿಯಲ್ಲಿ ಟಾಟಾ ಆಲ್ಟ್ರೋಜ್ ರೇಸರ್ ಕೂಡ ಒಂದು. ಟಾಟಾ ಆಲ್ಟ್ರೊಜ್ ರೇಸರ್‌ನ ಟರ್ಬೋ ಪೆಟ್ರೋಲ್ ವೇರಿಯರಂಟ್ ಆಗಿರುವ R1 ರೂಪಾಂತರದ ಬೆಲೆಯು 9.49 ಲಕ್ಷ (ಎಕ್ಸ್-ಶೋರೂಮ್) ದಿಂದ ಪ್ರಾರಂಭವಾಗುತ್ತದೆ.

ಟಾಟಾ ಆಲ್ಟ್ರೋಜ್ ರೇಸರ್ (Tata Altroz Racer) 1.2L ಇನ್‌ಲೈನ್ 3 - ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 120BH ಪವರ್ ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದ್ದು, ಕಂಪನಿಯು ಇದನ್ನು ಮೂರು ವೇರಿಯೆಂಟ್‌ಗಳಲ್ಲಿ ನೀಡುತ್ತದೆ.
ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ ಪೆಟ್ರೋಲ್ ಎಂಜಿನ್ ತನ್ನ ಎನ್-ಕನೆಕ್ಟಾ ವೇರಿಯೆಂಟ್‌ನಲ್ಲಿ ಲಭ್ಯವಿದೆ. ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಎನ್-ಕನೆಕ್ಟ್ ವೇರಿಯೆಂಟ್ ಎಕ್ಸ್ ಶೋರೂಂ ದರದಂತೆ ರೂ.9.19 ಲಕ್ಷಗಳಾಗಿದೆ. ಇದು 1.0 ಲೀಟರ್ ಇನ್ ಲೈನ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 ಬಿಹೆಚ್ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೆನಾಲ್ಟ್ ಕಿಗರ್: ರೆನಾಲ್ಟ್ ಕಂಪನಿಯು ತನ್ನ RXT(O) ರೂಪಾಂತರದಿಂದ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. ಈ ವೆರಿಯಂಟ್ ಬೆಲೆ 9.30 ಲಕ್ಷ (ಎಕ್ಸ್ ಶೋ ರೂಂ) ವಾಗಿದೆ. ಇದು 1.0L ಇನ್‌ಲೈನ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110BHಪವರ್ ಮತ್ತು 170Nm ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿ ಸುಜುಕಿ ಫ್ರಾಂಕ್ಸ್ ಡೆಲ್ಟಾ+ 1.0L ಟರ್ಬೊ ರೂಪಾಂತರದ ಬೆಲೆ ರೂ 9.73 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದು 1.0L ಇನ್‌ಲೈನ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. 100BH ಪವರ್ ಮತ್ತು 147Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೊತೆಗೆ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications