ಟೊಯೊಟಾ ಹೈಕ್ರಾಸ್ ಖರೀದಿಸಲು ಬಜೆಟ್ ಇಲ್ಲವೇ: ಇಲ್ಲಿದೆ ನೊಡಿ ಬದಲಿ ಆಯ್ಕೆಗಳು!
ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಕಿಂಗ್ ಯಾರು ಎಂದು ಕೇಳಿದರೆ ಇರುವ ಒಂದೇ ಒಂದು ಉತ್ತರವೆಂದರೆ ಅದು ಟೊಯೊಟಾ ಇನ್ನೋವಾ. ಆದರೆ ಟೊಯೊಟಾ ಕಂಪನಿ ಇನ್ನೋವಾ ಹೈಕ್ರಾಸ್ ಅನ್ನು ಮಾರುಕಟ್ಟೆಗೆ ತಂದ ಮೇಲಂತೂ ಈ ಕಾರಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಂಪಿವಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇಂದು ನಾವು ಆ ಕುರಿತಾಗಿ ನೋಡಲಿದ್ದೇವೆ. ಇಂದಿನ ಲೇಖನದಲ್ಲಿ ನಾವು ಇನ್ನೋವಾ ಹೈಕ್ರಾಸ್ ಬದಲಿಗೆ ನೀವು ಯಾವುದೆಲ್ಲಾ ಎಂಪಿವಿ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು ಎಂಬುದನ್ನು ನಾವು ನೋಡೋಣ.

ಕಿಯಾ ಕಾರ್ನಿವಲ್: ನಮ್ಮ ಈ ಲಿಸ್ಟ್‌ನಲ್ಲಿ ಇರುವ ಮೊದಲ ವಾಹನವೆಂದರೆ ಅದು ಕಿಯಾ ಕಂಪನಿಯ ಕಾರ್ನಿವಲ್. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಇಲ್ಲವಾದರೂ, ಇದರ ಫೇಸ್‌ಲಿಫ್ಟ್ ಮಾದರಿ ಆದಷ್ಟು ಬೇಗ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡುವ ಸಾಧ್ಯತೆ ಇದೆ. ಈ ಕಾರು ಭಾರತೀಯ ರಸ್ತೆಯಲ್ಲಿ ಬಿಡುಗಡೆಗೂ ಮುನ್ನ ಟೆಸ್ಟ್ ಡ್ರೈವ್ ಮಾಡುತ್ತಿರುವುದು ಇತ್ತೀಚೆಗೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು.
ಇನ್ನೋವಾ ಕ್ರಿಸ್ಟಾ: ಇನ್ನೋವಾ ಹೈಕ್ರಾಸ್ ಕಾರಿನ ಬದಲಿಗೆ ಖರೀದಿಸಬಹುದಾದ ಮತ್ತೊಂದು ಕಾರೆಂದರೆ ಇನ್ನೋವಾ ಕ್ರಿಸ್ಟಾ. ಇನ್ನೋವಾ ಕ್ರಿಸ್ಟಾ GX+ ಮಾದರಿಯಲ್ಲಿ ಒಟ್ಟು 14 ಹೊಸ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ, ಲೋ ರೂಪಾಂತರ ಆದ GX ಮಾದರಿಯಿಂದ ಪ್ರತ್ಯೇಕಿಸುತ್ತದೆ. ಏಳು ಮತ್ತು ಎಂಟು ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆಗಳು ಲಕ್ಷ ರೂ.21.39 ಮತ್ತು ರೂ. 21.44 ಲಕ್ಷವಾಗಿದೆ. ಇದು ಲೋ ರೂಪಾಂತರ GX ಮಾದರಿಗಿಂತ ರೂ.1.40 - 1.45 ಲಕ್ಷವರೆಗೆ ದುಬಾರಿಯಾಗಿದೆ.

ಮಹೀಂದ್ರಾ XUV700: ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ 2 ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಯೂ ಲಭ್ಯವಿದೆ. FWD (ಫ್ರಂಟ್ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 17 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ 5, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಸಿಗುತ್ತದೆ.
ಟಾಟಾ ಸಫಾರಿ: ಸಫಾರಿಯ ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ಕಿಯಾ ಕಾರೆನ್ಸ್: ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರೆನ್ಸ್ ಬಗ್ಗೆ ನೋಡುವುದಾದರೆ, ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.
ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications