ಕೇವಲ 10 ಲಕ್ಷದೊಳಗೆ ಸಿಗುವ ಬೆಸ್ಟ್ ಫ್ಯಾಮಿಲಿ ಕಾರುಗಳು: ವಿಶಾಲವಾದ ಒಳಾಂಗಣ!
ಬೆಸ್ಟ್ ಒಳಾಂಗಣದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಕಾರುಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಮಾಹಿತಿಯನ್ನು ನಿಮಗಾಗಿಯೇ ನೀಡಲಾಗುತ್ತಿದೆ. ಭಾರತದಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರು ವಿಭಾಗವು ದೂರದ ಪ್ರಯಾಣಗಳಿಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಆದ್ರೆ ಇದರಲ್ಲಿ ಬೆಸ್ಟ್ ಕಾರುಗಳು ಯಾವುವು ಎಂಬುದು ಕೂಡ ಮುಖ್ಯ. ಹಾಗಾಗಿ ನೀವು ಚಿಂತಿಸಬೇಡಿ, ನಿಮಗಾಗಿ ಉತ್ತಮ ಕ್ಯಾಬಿನ್ ಸ್ಥಳ, ಹೆಚ್ಚಿನ ಬೂಟ್ ಸಾಮರ್ಥ್ಯ ಹಾಗೂ ಆರಾಮದಾಯಕ ಪ್ರಯಾಣ ನೀಡುವ ಒಂದಷ್ಟು ವಿಶಾಲ ಒಳಾಂಗಣದ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಮಾರುತಿ ಸುಜುಕಿ ಫ್ರಾಂಕ್ಸ್: ಭಾರತದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಬೆಲೆಯು 7.51 ಲಕ್ಷ ರೂ. (ಎಕ್ಸ್ ಶೋರಂ)ಗಳಿಂದ ಆರಂಭವಾಗುತ್ತದೆ. ಈ ಕಾರು ಬ್ರೆಝಾದ 2,500 ಎಂಎಂ ವೀಲ್ ಬೇಸ್‌ಗಿಂತ ಉದ್ದವಾಗಿದೆ. ಅಂದರೆ 2520 ಎಂಎಂ ವ್ಹೀಲ್ ಬೇಸ್, 308 ಲೀಟರ್ ಬೂಟ್ ಸಾಮರ್ಥ್ಯ ಮತ್ತು 1550 ಎಂಎಂ ಎತ್ತರವನ್ನು ಹೊಂದಿದೆ.

ಸಿಟ್ರನ್ ಬಸಾಲ್ಟ್: ಸಿಟ್ರನ್ ಬಸಾಲ್ಟ್ ಬೆಲೆಯು ರೂ.8 (ಎಕ್ಸ್ ಶೋರಂ) ಲಕ್ಷದಿಂದ ಆರಂಭವಾಗುತ್ತದೆ. 2651 ಎಂಎಂ ವ್ಹೀಲ್ ಬೇಸ್, 1593 ಎಂಎಂ ಎತ್ತರವಿದೆ. ಇದು ಕೂಪೆ ಎಸ್‌ಯುವಿಯಾಗಿದ್ದರೂ ಸಹ, ಬಸಾಲ್ಟ್ ಹಿಂಭಾಗದಲ್ಲಿ ಸಾಕಷ್ಟು ಹೆಡ್ ರೂಮ್ ಅನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು. ಬಸಾಲ್ಟ್ 470 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ನೀಡುತ್ತದೆ.
ಸ್ಕೋಡಾ ಕೈಲಾಕ್: ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯಾದ ಸ್ಕೋಡಾ ಕೈಲಾಕ್ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಬೆಸ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಕೈಲಾಕ್ 2566 ಎಂಎಂ ವ್ಹೀಲ್ ಬೇಸ್ ಮತ್ತು 1619 ಎಂಎಂ ಎತ್ತರವನ್ನು ಹೊಂದಿದೆ. ಆರಂಭಿಕ ಎಕ್ಸ್ ಶೋರೂಂ ಬೆಲೆಯು 7.89 ಲಕ್ಷ ರೂ. ಇದ್ದು, ಇದು 446 ಲೀಟರ್ ಬೂಟ್ ಸ್ಪೇಸ್ ಸಹ ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ: ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ 3 ಎಕ್ಸ್‌ಒ ತನ್ನ ವರ್ಗದಲ್ಲಿ ಅತಿದೊಡ್ಡ 2600 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಇದರ ಎಕ್ಸ್ ಶೋರೂಂ ಬೆಲೆಯು ರೂ.7.79 ಲಕ್ಷಗಳಾಗಿದೆ. ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎತ್ತರ 1647 ಎಂಎಂ ಇದ್ದು, ಇದು 364 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ.
ಸಿಟ್ರನ್ ಸಿ3 ಏರ್‌ಕ್ರಾಸ್: ನೀವು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್‌ಯುವಿಯನ್ನು ಹುಡುಕುತ್ತಿದ್ದರೆ, ಸಿಟ್ರನ್ ಸಿ3 ಏರ್‌ಕ್ರಾಸ್ ಅನ್ನು ನೋಡಬಹುದು. ಇದು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.49 ಲಕ್ಷಕ್ಕೆ ಸಿಗುತ್ತದೆ. ಹೆಚ್ಚು ಕ್ಯಾಬಿನ್ ಹೊಂದಿರುವ ಬೆಸ್ಟ್ ಎಸ್‌ಯುವಿ ಎಂಬುದರಲ್ಲಿ ಸಂದೇಹವಿಲ್ಲ. ಈ ಸಣ್ಣ ಎಸ್‌ಯುವಿ ಏಳು ಪ್ರಯಾಣಿಕರಿಗೂ ಸ್ಥಳಾವಕಾಶ ಕಲ್ಪಿಸಬಲ್ಲದು, 2671 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಇದಲ್ಲದೆ, ಸಿ3 ಏರ್ ಕ್ರಾಸ್ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಅತಿ ದೊಡ್ಡ ರೂಫ್ ಕೂಡ ಹೊಂದಿದೆ, ಇದು 1669 ಎಂಎಂ ಇದೆ. ಹೆಚ್ಚುವರಿಯಾಗಿ, ಐದು ಆಸನಗಳ ಮಾದರಿಯು 444 - ಲೀಟರ್ ಟ್ರಂಕ್ ಅನ್ನು ಹೊಂದಿದ್ದರೆ, ಮೂರನೇ ಸಾಲಿನಲ್ಲಿ ಏಳು ಆಸನಗಳ ಮಾದರಿಯು 511 - ಲೀಟರ್ ಬೂಟ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications