ಭಾರತದಲ್ಲಿ ಈ ಎಸ್‌ಯುವಿಯದ್ದೇ ಅಬ್ಬರ: ಜನ ಮುಗಿಬಿದ್ದು ಖರೀದಿ... ಮಾರಾಟದಲ್ಲಿ ನಂ.1 ಸ್

ಭಾರತದಲ್ಲಿ ಟಾಟಾ ಮೋಟಾರ್ಸ್ ಮಾರಾಟದಲ್ಲಿ ಮುನ್ನುಗ್ಗುತ್ತಿದೆಯಾದರೂ ಎಸ್‌ಯುವಿ ವಿಭಾಗದಲ್ಲಿ ಈ ಒಂದು ಕಾರನ್ನು ಹಿಂದಕ್ಕಲು ಸಾಧ್ಯವಾಗಿಲ್ಲ. ಹೌದು, ಜುಲೈ ತಿಂಗಳಿನಲ್ಲಿ ಮಾರಾಟದ ಅಂಕಿಅಂಶಗಳನ್ನು ನೋಡಿಕೊಂಡ್ರೆ, ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿ ಹೊರಹೊದೆ. ಹ್ಯುಂಡೈ ಜುಲೈನಲ್ಲಿ ಬರೋಬ್ಬರಿ 17,350 ಕ್ರೆಟಾ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಧಕ್ಕಿಸಿಕೊಂಡಿದೆ. ಜುಲೈ 2024 ರಲ್ಲಿ ಹೆಚ್ಚು ಮಾರಾಟವಾದ ಐದು ಎಸ್‌ಯುವಿಗಳ ಪಟ್ಟಿ ಇಲ್ಲಿದೆ.

ಮಹೀಂದ್ರಾ ಸ್ಕಾರ್ಪಿಯೋ: ಮಹೀಂದ್ರಾ ಸ್ಕಾರ್ಪಿಯೋ ಜುಲೈ 2024 ರಲ್ಲಿ 12,237 ಯುನಿಟ್‌ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಕಂಪನಿಯು ಜುಲೈ 2023 ರಲ್ಲಿ 10,522 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಶೇಕಡಾ 16 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಸ್ಕಾರ್ಪಿಯೋ ಮಹೀಂದ್ರಾ ಕಂಪನಿಯ ಹೆಚ್ಚು ಮಾರಾಟವಾಗುವ ವಾಹನವಾಗಿ ಹೊರಹೊಮ್ಮಿದೆ.

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಜುಲೈ 2024 ರಲ್ಲಿ 13,902 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಈ ಮಾರಾಟದ ಅಂಕಿ ಅಂಶಗಳು ಎಲೆಕ್ಟ್ರಿಕ್ ನೆಕ್ಸಾನ್ ಹಾಗೂ ಇಂಧನ ಚಾಲಿತ ನೆಕ್ಸಾನ್ ಎರಡನ್ನು ಒಳಗೊಂಡಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯು ಕಳೆದ ವರ್ಷ ಇದೇ ತಿಂಗಳಲ್ಲಿ 12,349 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಶೇಕಡಾ 13 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

ಮಾರುತಿ ಸುಜುಕಿ ಬ್ರೆಝಾ: ಮಾರುತಿ ಸುಜುಕಿಯ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿ ಮಾರುತಿ ಬ್ರೆಝಾ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಬ್ರೆಝಾ ಜುಲೈ 2024 ರಲ್ಲಿ 14,676 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಬ್ರೆಝಾ ಜುಲೈ 2023 ರಲ್ಲಿ 16,543 ಯುನಿಟ್ ಎಸ್‌ಯುವಿಗಳ ಮಾರಾಟ ಮಾಡಿ ವಾರ್ಷಿಕವಾಗಿ ಶೇಕಡಾ11 ರಷ್ಟು ಕುಸಿತವನ್ನು ಕಂಡಿದೆ.

ಟಾಟಾ ಪಂಚ್: ಟಾಟಾ ಮೋಟಾರ್ಸ್ ಜುಲೈನಲ್ಲಿ 16,121 ಪಂಚ್ ಯುನಿಟ್‌ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಪಂಚ್ ಜುಲೈ 2023 ರಲ್ಲಿ 12,019 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಶೇಕಡಾ 34 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಟಾಟಾ ಮೋಟಾರ್ಸ್ ಈ ಜನಪ್ರಿಯ ಎಸ್‌ಯುವಿಯ 2024 ರ ನವೀಕರಿಸಿದ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಹ್ಯುಂಡೈ ಕ್ರೆಟಾ: ಹ್ಯುಂಡೈ ಜೂನ್ 2024 ರಿಂದ ಜುಲೈ 2024 ರವರೆಗೆ ಮಾರಾಟವಾದ ಅಂಕಿಅಂಶಗಳಲ್ಲಿ ಉತ್ತಮ ಮಾರಾಟ ದಾಖಲು ಮಾಡಿದೆ. ಕ್ರೆಟಾ ಹ್ಯುಂಡೈ ಬ್ರಾಂಡ್ನ ದಕ್ಷಿಣ ಕೊರಿಯಾದ ಆಟೋಮೊಬೈಲ್ ತಯಾರಕರನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದೆ. ಹ್ಯುಂಡೈ ಜುಲೈನಲ್ಲಿ ಬರೋಬ್ಬರಿ 17,350 ಕ್ರೆಟಾ ಎಸ್‌ಯುವಿಗಳನ್ನು ಮಾರಾಟ ಮಾಡಿದೆ.

ಮಾಸಿಕ ಆಧಾರದ ಮೇಲೆ, ಕ್ರೆಟಾ ಜೂನ್ 2024 ರಲ್ಲಿ 16,293 ಯುನಿಟ್‌ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಈ ಮೂಲಕ ಜುಲೈನಲ್ಲಿ ಶೇಕಡಾ 6 ರಷ್ಟು ಹೆಚ್ಚಳವನ್ನು ಸಾಧಿಸಿದೆ. ಜುಲೈ 2023 ರಲ್ಲಿ 14,062 ಕ್ರೆಟಾ ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದ್ದರಿಂದ ಕ್ರೆಟಾ ವರ್ಷದಿಂದ ವರ್ಷಕ್ಕೆ ಶೇಕಡಾ 23 ರಷ್ಟು ಏರಿಕೆಯನ್ನು ದಾಖಲಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 7, 2024, 18:03 [IST]
English summary
Top 5 suvs sales report 2024 july
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+