ಹೊಸ ಕಾರು ಕೊಳ್ಳುವವರು ಈ ಬ್ಲ್ಯಾಕ್‌ ಬ್ಯೂಟಿಗಳನ್ನು ಮಿಸ್‌ ಮಾಡಿಕೊಳ್ಳಬೇಡಿ: ಕ್ರೇಟಾ ಟು ಸಫಾರಿ

ಕಾರು ಕೊಳ್ಳುವಾಗ ಹಲವರು ಹೆಚ್ಚು ಗಮನ ಕೊಡುವ ವಿಚಾರವೆಂದರೆ ಅದರ ಬಣ್ಣ. ಹಲವರಿಗೆ ಅವರದ್ದೇ ಆದ ಕೆಲವೊಂದು ಫೇವರೀಟ್ ಬಣ್ಣಗಳಿರುತ್ತವೆ. ಕಾರು ಖರೀದಿ ಮಾಡುವಾಗ ಅದನ್ನೇ ಆಯ್ಕೆ ಮಾಡುತ್ತಾರೆ. ಯಾರು ಯಾವುದೇ ಬಣ್ಣಗಳನ್ನು ಆಯ್ಕೆ ಮಾಡಿಕೊಂಡರೂ ಕಪ್ಪು ಬಣ್ಣದ ಕಾರುಗಳ ಸೌಂದರ್ಯಕ್ಕೆ ಬೇರೆ ಯಾವುದೂ ಸಾಟಿಯಾಗದು. ಈ ಕಾರಣದಿಂದ ಟಾಟಾದಂತಹ ಕಾರು ಕಂಪನಿಗಳು ಡಾರ್ಕ್‌ ಎಡಿಷನ್‌ ರೀತಿಯ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇಂದಿನ ಈ ಲೇಖನದಲ್ಲಿ ಕಪ್ಪು ಕಲರ್‌ನಲ್ಲಿರುವ ಅತೀ ಸುಂದರ ಕಾರುಗಳನ್ನು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ಓದಿ.

ಟೊಯೋಟಾ ಫಾರ್ಚ್ಯೂನರ್‌: ಟೊಯೋಟಾ ಫಾರ್ಚ್ಯೂನರ್‌ ಕಪ್ಪು ಬಣ್ಣದಲ್ಲಿ ಕಾಣ ಸಿಗುವುದು ತೀರಾ ವಿರಳ ಎನ್ನಬಹುದು. ಆದರೆ ಎಲ್ಲಾದರೂ ನೀವು ಕಪ್ಪು ಬಣ್ಣದ ಫಾರ್ಚ್ಯೂನರ್‌ ಕಾರನ್ನು ನೋಡಿದರೆ ಖಂಡಿತಾ ನೀವದರ ಸೌಂದರ್ಯಕ್ಕೆ ಸೋಲುತ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ.

Top 5 SUVs That Look Incredible in Black TATA Safari To Hyundai Creta

ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

ಹ್ಯುಂಡೈ ಕ್ರೆಟಾ: ಈ ಕಾರೂ ಸಹ ಕಪ್ಪು ಬಣ್ಣದಲ್ಲಿ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಹ್ಯುಂಡೈ ಕ್ರೆಟಾ (Hyundai Creta) ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡಿಸೇಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

Top 5 SUVs That Look Incredible in Black TATA Safari To Hyundai Creta

ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಮತ್ತು 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 7-ಸ್ವೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ದೊರೆಯುತ್ತದೆ. ಪೆಟ್ರೋಲ್ ರೂಪಾಂತರಗಳು 17.4 ರಿಂದ 18.4 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.

ಮಹೀಂದ್ರಾ XUV700: ಮಹೀಂದ್ರಾ ಕಂಪನಿಯ ಈ ಪ್ರೀಮಿಯಂ ಕಾರು ಸಹ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಬ್ಲೇಜ್ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 bhp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 184 bhp ಮತ್ತು 450 Nm ಟಾರ್ಕ್ ಉತ್ಪಾದಿಸುತ್ತದೆ.

Top 5 SUVs That Look Incredible in Black TATA Safari To Hyundai Creta

ಟಾಟಾ ಸಫಾರಿ: ಕಪ್ಪು ಕಾರುಗಳಿಗೆ ಅರ್ಥ ಕೊಟ್ಟಿದ್ದೇ ಟಾಟಾ ಸಫಾರಿಯ ಡಾರ್ಕ್‌ ಎಡಿಷನ್. ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 8, 2024, 18:12 [IST]
English summary
Top 5 suvs that look incredible in black tata safari to hyundai creta
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+