7 ಆಸನದ ಫ್ಯಾಮಿಲಿ ಕಾರುಗಳಿಗೆ ಮುಗಿಬಿದ್ದ ಗ್ರಾಹಕರು: ಇದೇ ನೋಡಿ ನಂಬರ್ 1.. ರೂ.8 ಲಕ್ಷಕ್ಕೆ ಸಿಗುತ್ತೆ!
ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ತಮ್ಮ ಕುಟುಂಬಕ್ಕಾಗಿ ಹೆಚ್ಚಿನ ಆಸನವಿರುವ ಕಾರುಗಳನ್ನು ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ಬಹುತೇಕರು 7 ಆಸನ (ಸೀಟರ್) ವ್ಯವಸ್ಥೆಯೊಂದಿರುವ ಎಸ್‌ಯುವಿ ಹಾಗೂ ಎಂಪಿವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಪ್ರಮುಖ ವಾಹನ ತಯಾರಕ ಕಂಪನಿಗಳು ಆಗಸ್ಟ್ ತಿಂಗಳ (2024) ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, 7 ಆಸನದೊಂದಿಗೆ ಲಭ್ಯವಿರುವ ಈ ಕಾರುಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿವೆ. ಬನ್ನಿ.. ಆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿಯೋಣ.
ಮೊದಲಿಗೆ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ಬಗ್ಗೆ ಮಾತನಾಡೋಣ. 7 ಆಸನ ಆಯ್ಕೆಯಲ್ಲಿ ದೊರೆಯುವ ಈ ಕಾರು, ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಳೆದ ತಿಂಗಳು (ಆಗಸ್ಟ್ 2024) 18,580 ಯುನಿಟ್ ಎರ್ಟಿಗಾ ಎಂಪಿವಿಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಲಾದ 12,315 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 51% ಬೆಳವಣಿಗೆ ಸಾಧಿಸಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಸ ಮಾರುತಿ ಎರ್ಟಿಗಾ ಎಂಪಿವಿ ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಎಸ್‌ಯುವಿ ಕೂಡ 7 ಆಸನದೊಂದಿಗೆ ಲಭ್ಯವಿದೆ. ಆಗಸ್ಟ್‌ನಲ್ಲಿ (2024) ಬರೋಬ್ಬರಿ 13,787 ಯುನಿಟ್ ಸ್ಕಾರ್ಪಿಯೋ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಮಾರಾಟಗೊಳಿಸಿದ 9,898 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 39% ಪ್ರಗತಿಯಾಗಿದೆ. ಈ ಸ್ಕಾರ್ಪಿಯೋ 'ಎನ್' ಹಾಗೂ 'ಕ್ಲಾಸಿಕ್' ಎಂಬ ಎರಡು ರೂಪದಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ರೂ.13.85 ಲಕ್ಷದಿಂದ ರೂ.24.54 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 2.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ರೂ.13.62 ಲಕ್ಷದಿಂದ ರೂ.17.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಮಾತ್ರ ಒಳಗೊಂಡಿದೆ.
ಟೊಯೊಟಾ ಇನ್ನೋವಾ (Toyota Innova) ಎಂಪಿವಿ ಮಾರಾಟವು ಉತ್ತಮಗೊಂಡಿದೆ. 2024ರ ಆಗಸ್ಟ್‌ನಲ್ಲಿ 9,687 ಯುನಿಟ್ ಇನ್ನೋವಾ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 8,666 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ 12% ಬೆಳವಣಿಗೆಯಾಗಿದೆ. ಇನ್ನೋವಾ ಹೈಕ್ರಾಸ್ ರೂ.19.77 ಲಕ್ಷದಿಂದ ರೂ.30.98 ಲಕ್ಷ, ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.26.55 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿಯು ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಳೆದ ತಿಂಗಳು (ಆಗಸ್ಟ್ 2024) 9,007 ಯುನಿಟ್ ಎಕ್ಸ್‌ಯುವಿ700 ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಲಾದ 6,512 ಯುನಿಟ್‌ಗೆ ಹೋಲಿಸಿದರೆ, ಶೇಕಡ 38% ಪ್ರಗತಿ ಸಾಧಿಸಲಾಗಿದೆ. ಈ ಕಾರು ರೂ.13.99 ಲಕ್ಷದಿಂದ ರೂ.26.04 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಸಿಗುತ್ತದೆ.
ಗ್ರಾಮೀಣ ಜನರ ನೆಚ್ಚಿನ ಮಹೀಂದ್ರಾ ಬೊಲೆರೊ (Mahindra Bolero) ಮಾರಾಟ ಸ್ವಲ್ಪಮಟ್ಟಿಗೆ ಕುಸಿತವಾಗಿದೆ. ಆಗಸ್ಟ್‌ನಲ್ಲಿ (2024) ಬರೋಬ್ಬರಿ 6,494 ಯುನಿಟ್ ಬೊಲೆರೊ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಮಾರಾಟ ಮಾಡಿದ 9,092 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ -29% ಹಿನ್ನಡೆಯಾಗಿದೆ. ಬೊಲೆರೊ ನಿಯೋ ರೂ.9.95 ಲಕ್ಷದಿಂದ ರೂ.12.15 ಲಕ್ಷ, ಸಾಮಾನ್ಯ ಬೊಲೆರೊ ರೂ.9.79 ಲಕ್ಷದಿಂದ ರೂ.10.91 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications