5 ಲಕ್ಷದ ಒಳಗಿನ ಟಾಪ್ 5 ಪವರ್‌ಫುಲ್ ಬೈಕ್‌ಗಳು: ಈ ಬೈಕ್‌ಗಳನ್ನು ಮಿಸ್ ಮಾಡ್ಬೇಡಿ!
ಭಾರತದಲ್ಲಿ ಬೈಕ್ ರೈಡಿಂಗ್ ಎನ್ನುವುದು ಒಂದು ರೀತಿಯ ಸಂಸ್ಕ್ರತಿ. ಭಾರತೀಯ ಯುವಕರು ದುಬಾರಿ ಕಾರುಗಳಿಗಿಂತ ಬೈಕ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಇಂದಿನ ಈ ಲೇಖನದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 5 ಲಕ್ಷ ರೂ ಆಸುಪಾಸಿನ ಬಜೆಟ್‌ನಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳು ಯಾವುದೆಂದು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ಓದಿ.
1. ಎಪ್ರಿಲಿಯಾ ಆರ್‌ಎಸ್ 457: ಹೊಸ ಎಪ್ರಿಲಿಯಾ ಆರ್‌ಎಸ್ 457 ಬೈಕ್ ಬೆಲೆ ಆರಂಭವಾಗುವುದು ಸುಮಾರು 4.10 ಲಕ್ಷ ಎಕ್ಸ್ ಶೋ ರೂಮ್. ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಹೊಸ 457cc ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಲಿಕ್ವಿಡ್-ಕೂಲ್ಡ್, ನಾಲ್ಕು-ವಾಲ್ವ್ ಎಂಜಿನ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳು ಮತ್ತು ಫಾರ್ವರ್ಡ್-ಫೇಸಿಂಗ್ ಸಿಲಿಂಡರ್‌ಗಳನ್ನು ಒಳಗೊಂಡಿದೆ.
ಎಪ್ರಿಲಿಯಾ RS 457 (Aprilia RS457) ಬೈಕಿನಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ 9,400rpm ನಲ್ಲಿ 46.93bhp ಮತ್ತು 6,700rpm ನಲ್ಲಿ 43.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಆಯ್ಕೆಯ ಕ್ವಿಕ್‌ಶಿಫ್ಟರ್‌ನೊಂದಿಗೆ ನಿರ್ದಿಷ್ಟಪಡಿಸಬಹುದು. ಎಪ್ರಿಲಿಯಾ RS 457 ಅನ್ನು ರೈಡ್-ಬೈ-ವೈರ್ ಸಿಸ್ಟಮ್‌ನೊಂದಿಗೆ ನೀಡಲಾಗಿದ್ದು ಅದು ಮೂರು ರೈಡಿಂಗ್ ಮೋಡ್‌ಗಳಿಗೆ ಅವಕಾಶ ನೀಡುತ್ತದೆ. ಇನ್ನು ಈ ಬೈಕಿನಲ್ಲಿ 4-ವೇ ಟ್ರಾಕ್ಷನ್ ಕಂಟ್ರೋಲ್ ಕೂಡ ಇದೆ.

2. ಕೆಟಿಎಂ ಡ್ಯೂಕ್ 390: 2024 KTM 390 ಡ್ಯೂಕ್ ಎಲ್ಲಾ ಹೊಸ ಪವರ್‌ಟ್ರೇನ್ ವ್ಯವಸ್ಥೆಯನ್ನು ಹೊಂದಿದೆ. ಈ ಹೊಸ ಪವರ್‌ಟ್ರೇನ್ 8,500rpm ನಲ್ಲಿ 45.37bhp ಮತ್ತು 6,500rpm ನಲ್ಲಿ 39Nm ಟಾರ್ಕ್ ಜೊತೆಗೆ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದೆ. ಈ ಬೈಕ್‌ನ 4.09 ಲಕ್ಷ ಎಕ್ಸ್ ಶೋ ರೂಮ್ ಬೆಲೆ ಬಾಳುತ್ತದೆ.
3. ಯಮಹಾ YZF-R3: ಯಮಹಾ YZF-R3 ಬೈಕ್‌ನ ಬೆಲೆ 4.64 ಎಕ್ಸ್ ಶೋ ರೂಮ್. ಈ ಹೊಸ ಯಮಹಾ YZF-R3 ಬೈಕ್ 321cc, ಪ್ಯಾರಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ 10,750rpm ನಲ್ಲಿ 41 bhp ಪವರ್ ಮತ್ತು 9,000rpm ನಲ್ಲಿ 29.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

4. ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್: ಹೊಸ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ (Triumph Scrambler 400 X) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 2.63 ಲಕ್ಷವಾಗಿದೆ. 398cc ಎಂಜಿನ್ 8,000 rpm ನಲ್ಲಿ 40 bhp ಮತ್ತು 6,500 rpm ನಲ್ಲಿ 37.5 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
5. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650: ಇದರ ಎಂಜಿನ್ ಬಗ್ಗೆ ನೋಡುವುದಾದರೆ, ಹೊಸ ಎಲ್ಇಡಿ ಹೆಡ್‌ಲೈಟ್ ಯುನಿಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಹೊಸ ಸ್ವಿಚ್‌ಗಿಯರ್ ಮತ್ತು ಸುಧಾರಿತ ಸೀಟ್ ಸೌಕರ್ಯಗಳು ಕೂಡ ಒಳಗೊಂಡಿವೆ. ಈ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳಲ್ಲಿ 648 ಸಿಸಿ ಏರ್- ಮತ್ತು ಆಯಿಲ್-ಕೂಲ್ಡ್ ಪ್ಯಾರಲಲ್ ಟ್ವಿನ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ.

ರಾಯಲ್ ಎನ್‍ಫೀಲ್ಡ್ ತನ್ನ ಕ್ಲಾಸಿಕ್ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಅದರಲ್ಲೂ, ಇತ್ತೀಚೆಗೆ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಅನೇಕರ ಕನಸಿನ ಬೈಕು ಆಗಿದೆ. ಈ ಕೆಫೆ ರೇಸರ್ ಬೈಕ್ ಬೆಲೆಯು ರೂ.3.19 ಲಕ್ಷವಾಗಿದೆ. ಕಾಂಟಿನೆಂಟಲ್ ಜಿಟಿ 650 ಮಾಲಿಕರೊಬ್ಬರು ಇತ್ತೀಚೆಗೆ ಒಬ್ಬ ವ್ಯಕ್ತಿಯ ಕನಸನ್ನು ನನಸಾಗಿಸಲು ಸೆಕ್ಯುರಿಟಿ ಗಾರ್ಡ್‌ಗೆ ಬೈಕ್ ಚಲಾಯಿಸಲು ಅವಕಾಶ ನೀಡಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications