ಡ್ರೈವ್ ಮಾಡುವಾಗ ಥ್ರಿಲ್‌ ಇಷ್ಟಪಡುತ್ತೀರಾ?: ಈ ಟರ್ಬೋ ಪೆಟ್ರೋಲ್‌ ಕಾರುಗಳಲ್ಲಿ ನಿಮ್ಮ ಫೇವರೀಟ್‌?

ಟರ್ಬೋ ಚಾರ್ಜ್ಡ್‌ ಪೆಟ್ರೋಲ್‌ ಎಂಜಿನ್‌ಗಳನ್ನು ಓಡಿಸುವಾಗ ಚಾಲಕನಿಗೆ ಆಗುವ ಫೀಲ್‌ ಒಂದು ರೀತಿ ಬೇರೆಯದೇ. ನ್ಯಾಚುರಲಿ ಆಸ್ಪಿರೇಟೆಡ್‌ ಎಂಜಿನ್‌ಗಳನ್ನು ಓಡಿಸುವುದಕ್ಕಿಂತ ಟರ್ಬೋ ಪೆಟ್ರೋಲ್‌ ಎಂಜಿನ್‌ಗಳನ್ನು ಓಡಿಸುವುದನ್ನೇ ಇಷ್ಟಪಡುತ್ತಾರೆ. ಸಾಧಾರಣ ಎಂಜಿನ್‌ಗಳಿಗಿಂತಲೂ ಹೆಚ್ಚಿನ ಪವರ್‌ ಮತ್ತು ಟಾರ್ಕ್‌ ಅನ್ನು ಟರ್ಬೋ ಚಾರ್ಜ್ಡ್‌ ಎಂಜಿನ್‌ಗಳು ಉತ್ಪಾದಿಸುತ್ತವೆ. ಇಂದಿನ ಈ ಲೇಖನದಲ್ಲಿ ಕಡಿಮೆ ಬೆಲೆಗೆ ಸಿಗುವ ಟಾಪ್‌ ೫ ಟರ್ಬೋ ಪೆಟ್ರೋಲ್ ಎಂಜಿನ್‌ಗಳನ್ನು ಅಳವಡಿಸಲಾಗಿರುವ ಕಾರುಗಳ ಕುರಿತಾಗಿ ನೋಡೋಣ. ಟರ್ಬೋ ಕಾರುಗಳ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

ಮಹೀಂದ್ರಾ XUV 700: ಹೊಸ ಮಹೀಂದ್ರಾ XUV700 ಎಸ್‍ಯುವಿಯ ಆರಂಭಿಕ ಬೆಲೆಯು ರೂ.13.99 ಲಕ್ಷವಾದರೆ, ಇದರ ಟಾಪ್ ವೆರಿಯೆಂಟ್ ಮಾದರಿಯ ಬೆಲೆಯು ರೂ.23.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ 2 ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ.

Top Turbo Petrol Engine Cars That You Can Buy Under 15 lakhs

ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್‌: ಭಾರತದಲ್ಲಿ ಪೆಟ್ರೋಲ್‌ಗೆ ಹೋಲಿಸಿದರೆ, ಡಿಸೇಲ್ ಬೆಲೆ ಕೊಂಚ ಕಡಿಮೆಯಿದ್ದು, ಇದು ಕೊಡ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಡಿಸೇಲ್ ರೂಪಾಂತರವನ್ನು ಗ್ರಾಹಕರು ಹೆಚ್ಚು ಖರೀದಿಸಲು ಕಾರಣ ಎಂದು ಹೇಳಬಹುದು. 2-ಲೀಟರ್ ಟರ್ಬೊ ಪೆಟ್ರೋಲ್ (Turbo Petrol) ಎಂಜಿನ್ ಹೊಂದಿರುವ ಕಾರು, 203 PS ಗರಿಷ್ಠ ಪವರ್, 380 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

Top Turbo Petrol Engine Cars That You Can Buy Under 15 lakhs

6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 2WD (ಟೂ ವೀಲ್ ಡ್ರೈವ್) 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಹ್ಯುಂಡೈ ವೆರ್ನಾ: ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆರ್ನಾ ಬಗ್ಗೆ ನೊಡುವುದಾದರೆ, ಈ ಹ್ಯುಂಡೈ ವೆರ್ನಾ ಸೆಡಾನ್ ಕಾರು EX, S, S ಮತ್ತು SX (O) ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ವೆರ್ನಾ ಕಾರಿನಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ವೆರ್ನಾ ಕಾರು ಕಾರಿನ EX ಮತ್ತು S ರೂಪಾಂತರಗಳಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್‌ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ iVT ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಫೋಕ್ಸ್‌ವಾಗನ್‌ ಟೈಗುನ್: ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಫೋಕ್ಸ್‌ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್‌ಗಳನ್ನು ಹೊಂದಿವೆ.

ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 3, 2024, 11:17 [IST]
English summary
Top turbo petrol engine cars that you can buy under 15 lakhs
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+