Toyota: 7 ಲಕ್ಷದೊಳಗಿನ ಪ್ರೀಮಿಯಂ ಟೊಯೋಟಾ ಕಾರು: 30.61 ಕಿ.ಮೀ ಮೈಲೇಜ್, ಬೆಸ್ಟ್ ಫೀಚರ್ಸ್!

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಸಖತ್ ಬೇಡಿಕೆ ಇದೆ, ಇತರ ದೇಶಗಳಿಗೆ ಹೋಲಿಸಿದರೆ ಅಗ್ಗದ ಬೆಲೆಗೆ ಉತ್ತಮ ಫೀಚರ್ಸ್ ಒಳಗೊಂಡಿರುವ ಕಾರುಗಳು ಭಾರತದಲ್ಲಿ ಸಿಗುತ್ತವೆ. ಬಹುತೇಕ ಕಾರು ಕಂಪನಿಗಳು ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಭಾರತದಲ್ಲಿ ನೀಡುತ್ತಿವೆ. ಇದರಲ್ಲಿ ಪ್ರಮುಖವಾಗಿ ಟಾಟಾ, ಮಾರುತಿ, ಮಹೀಂದ್ರಾ ಹಾಗೂ ಟೊಯೋಟಾ ಬ್ರಾಂಡ್‌ಗಳ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭರ್ಜರಿ ಬೇಡಿಕೆ ಇದೆ. ಈ ಲೇಖದಲ್ಲಿ ಟೊಯೋಟಾದ ಜನಪ್ರಿಯ ಮಾದರಿಯಾದ ಗ್ಲಾಂಜಾ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ವಿವರಿಸಿದ್ದೇವೆ. ಈ ಸಣ್ಣ ಪ್ರೀಮಿಯಂ ಕಾರಿನ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಎಂಜಿನ್‌ ವಿಶೇಷತೆಗಳನ್ನು ನೋಡೋಣ.

ಭಾರತದಲ್ಲಿ ಟೊಯೊಟಾ ಗ್ಲಾಂಝಾ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 6.86 ಲಕ್ಷದಿಂದ ಪ್ರಾರಂಭವಾಗಿ ರೂ. 10 ಲಕ್ಷಗಳವರೆಗೆ ಹೋಗುತ್ತದೆ. ಅಂದಹಾಗೆ ಮಾರುತಿ ಹಾಗೂ ಟೊಯೋಟಾ ಕಂಪನಿಗಳು ಪಾಲುದಾರಿಯಲ್ಲಿ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕೆಲ ಕಾರುಗಳನ್ನು ನಿರ್ಮಾಣ ಮಾಡಿ ತಮ್ಮ ಲೋಗೋಗಳನ್ನು ಮಾತ್ರ ಹಾಕಿಕೊಳ್ಳುವ ಬಗ್ಗೆ ಹಲವರಿಗೆ ತಿಳಿದಿರುತ್ತದೆ. ಇದರಲ್ಲಿ ಗ್ಲಾಂಜಾ ಕೂಡ ಒಂದಾಗಿದ್ದು, ಮಾರುತಿ ಇದೇ ಕಾರನ್ನು ಬಲೆನೋವಾಗಿ ಮಾರಾಟ ಮಾಡುತ್ತದೆ.

toyota-glanza-price-mileage-features-and-variants-details

ಟೊಯೊಟಾ ಗ್ಲಾಂಝಾವನ್ನು ಲಿಮಿಟೆಡ್ ಎಡಿಷನ್‌ನಲ್ಲಿಯೂ ಟೊಯೋಟಾ ಮಾರಾಟ ಮಾಡುತ್ತಿದ್ದು, ಇದು 20,567 ರೂ.ಗಳ ಮೌಲ್ಯದ ಕಾಂಪ್ಲಿಮೆಂಟರಿ ಅಕ್ಸೆಸೊರಿಗಳೊಂದಿಗೆ ಬರುತ್ತದೆ. ವೇರಿಯೆಂಟ್‌ಗಳ ವಿಷಯಕ್ಕೆ ಬಂದರೆ, ಇದು ಇ, ಎಸ್, ಜಿ ಮತ್ತು ವಿ ಎಂಬ ನಾಲ್ಕು ವಿಶಾಲ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಇದನ್ನು ಕೆಫೆ ವೈಟ್, ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಇನ್ಸ್ಟಾ ಬ್ಲೂ ಎಂಬ ಐದು ಮೊನೊಟೋನ್ ಬಣ್ಣಗಳಲ್ಲಿ ಖರೀದಿಸಬಹುದು.

ಇದು 5 ಸೀಟರ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿರುವ ಹ್ಯಾಚ್‌ಬ್ಯಾಕ್ ಆಗಿದ್ದರೂ ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಟೊಯೊಟಾ ಗ್ಲಾಂಝಾದ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ, ಹ್ಯುಂಡೈ ಐ 20 ಮತ್ತು ಟಾಟಾ ಆಲ್ಟ್ರೊಜ್ ಕಾರುಗಳಿಗಿಂತ ಉತ್ತಮ ಪ್ರಯಾಣಿಕ ಅನುಭವ ನೀಡುವುದಾಗಿ ಹಲವರು ಗ್ರಾಹಕರು ಹೇಳಿದ್ದಾರೆ.

toyota-glanza-price-mileage-features-and-variants-details

ಸುರಕ್ಷತೆ & ವೈಶಿಷ್ಟ್ಯಗಳು: ಗ್ಲಾಂಝಾ ಕಾರಿನಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಹಿಂಭಾಗದ ಎಸಿ ವೆಂಟ್, ಆಟೋ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್ ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿವೆ.

ಎಂಜಿನ್: ಗ್ಲಾಂಝಾ ಹ್ಯಾಚ್‌ಬ್ಯಾಕ್‌ನ 1.2-ಲೀಟರ್ ಪೆಟ್ರೋಲ್ ಎಂಜಿನ್, 90 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇದನ್ನು 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿ (ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್) ನೊಂದಿಗೆ ನೀಡಲಾಗುತ್ತದೆ. ಪ್ರತಿ ಲೀಟರ್‌ಗೆ 22.35 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

toyota-glanza-price-mileage-features-and-variants-details

ಗ್ಲಾಂಝಾ ಹ್ಯಾಚ್‌ಬ್ಯಾಕ್‌ ಅನ್ನು ಸಿಎನ್‌ಜಿ ಆಯ್ಕೆಯಲ್ಲೂ ನೀಡಲಾಗುತ್ತಿದ್ದು, ಇದು 77.5 ಪಿಎಸ್ ಪವರ್ ಹಾಗೂ 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಪ್ರತಿ ಕೆ.ಜಿ ಸಿಎನ್‌ಜಿಗೆ ಬರೋಬ್ಬರಿ 30.61 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 5, 2024, 14:09 [IST]
English summary
Toyota glanza price mileage features and variants details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+