ಕಿಯಾ ಹೊಸ ಕಾರು ಅನಾವರಣ: 2.2 ಲೀ. ಟರ್ಬೊ ಡೀಸೆಲ್ ಎಂಜಿನ್: ಟೊಯೋಟಾಗೆ ನಡುಕ ಶುರು!

ಕಿಯಾ ಭಾರತ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಮಿಡ್‌ಸೈಜ್ ಪಿಕಪ್ ವಿಭಾಗದಲ್ಲಿ ಕಿಯಾ ತನ್ನ ಮೊದಲ ಪಿಕಪ್ ಟ್ರಕ್ ಟಸ್ಮ್ಯಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಕಾರನ್ನು ಯಶಸ್ವಿಯಾಗಿ ಅನಾವರಣಗೊಳಿಸಿದೆ. ಈ ಪಿಕಪ್ ಮುಖ್ಯವಾಗಿ ಟೊಯೊಟಾ ಹಿಲಕ್ಸ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಹೊಸ ಕಿಯಾ ಟಸ್ಮ್ಯಾನ್ 1,195 ಕೆ.ಜಿ ಪೇಲೋಡ್ ಮತ್ತು 3,500 ಕೆ.ಜಿ ಟೋಯಿಂಗ್ ಸಾಮರ್ಥ್ಯವನ್ನು ಹೊಂದಿರುವುದರಿಂದ ಅನೇಕ ಕ್ಯಾಬ್ ಕಾನ್ಫಿಗರೇಶನ್‌ಗಳು ಸಹ ಇದರಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ.

ಬಾಹ್ಯ ವಿನ್ಯಾಸವು ಬಾಕ್ಸಿ ಡಿಸೈನ್‌ನೊಂದಿಗೆ ರಗಡ್ ಲುಕ್‌ ಪಡೆದುಕೊಂಡಿದ್ದು, ಒಳಾಂಗಣದ ವಿನ್ಯಾಸ ಕೂಡ ಪ್ರೀಮಿಯಂ ಆಗಿದೆ. ಸಾಮಾನ್ಯ ಡಬಲ್ ಕ್ಯಾಬ್ 5.4 ಮೀಟರ್ ಉದ್ದವನ್ನು ಹೊಂದಿರುವ ಈ ಪಿಕಪ್ ಟ್ರಕ್, ವೇರಿಯೆಂಟ್‌ಗಳನ್ನು ಅವಲಂಬಿಸಿ ಗ್ರೌಂಡ್ ಕ್ಲಿಯರೆನ್ಸ್ 252 ಎಂಎಂ ವರೆಗೆ ಇರುತ್ತದೆ. ಹಾಗೆಯೇ ವಿವಿಧ ಭೂಪ್ರದೇಶಗಳಲ್ಲಿ ಪ್ರಯಾಣಿಸಲು ಸ್ನೋ, ಮಡ್, ರಾಕ್ ಮತ್ತು ಸ್ಯಾಂಡ್‌ನಂತಹ ಮೋಡ್‌ಗಳನ್ನು ಹೊಂದಿದೆ.

toyota-hilux-rival-kia-tasman-fully-unveiled

2.5 ಲೀಟರಿನ ಪೆಟ್ರೋಲ್ ಎಂಜಿನ್ 281 ಬಿಹೆಚ್ ಪವರ್ ಹಾಗೂ 421 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ 210 ಬಿಹೆಚ್ ಪವರ್ ಹಾಗೂ 441 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇವೆರಡೂ 8-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಜೊತೆಗೆ ಬರುತ್ತವೆ. ಡೀಸೆಲ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ಸಹ ಹೊಂದಿದೆ.

ಬೇಸ್ ವೇರಯೆಂಟ್ ಮಾತ್ರ 2WD ಕಾನ್ಫಿಗರೇಶನ್‌ನೊಂದಿಗೆ ಖರೀದಿಸಬಹುದು, ಉಳಿದ ಎಲ್ಲವೂ 4WD ಲೇಔಟ್‌ನೊಂದಿಗೆ ಬರುತ್ತವೆ. ಹೆಚ್ಚು ಕಠಿಣ ಭೂಪ್ರದೇಶಗಳನ್ನು ನಿಭಾಯಿಸಲು ಎಕ್ಸ್-ಪ್ರೊ ಟ್ರಿಮ್ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ (ಇ-ಎಲ್ ಡಿ) ಮತ್ತು ಎಕ್ಸ್-ಟ್ರೆಕ್ ಮೋಡ್ ಅನ್ನು ಒಳಗೊಂಡಿದೆ. ಇದರ ಫೀಚರ್ಸ್ ಸೇರಿದಂತೆ ಹೆಚ್ಚಿನ ವಿಶೇಷಗಳು ಕೆಳಗಿನಂತಿವೆ.

toyota-hilux-rival-kia-tasman-fully-unveiled

ಎಂಟು ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಆಡಿಯೊ, ಸೆಂಟರ್ ಕನ್ಸೋಲ್‌ನಲ್ಲಿ ಫೋಲ್ಡಿಂಗ್ ಟೇಬಲ್, ಬಯೋ-ಪಿಯು ಸಿಂಥೆಟಿಕ್ ಲೆದರ್ ಅಪ್ಹೋಲ್ಸ್ಟರಿ, ರೆಕ್ಲೈನಬಲ್ ಹಿಂಭಾಗದ ಸೀಟುಗಳು, ಸ್ಲೈಡಿಂಗ್ ಕಾರ್ಗೋ ಫ್ಲೋರ್ ಒಳಗೊಂಡಿರುವ ಇಂಟಿಗ್ರೇಟೆಡ್ ಪ್ಯಾನಲ್, 12.3-ಇಂಚಿನ ಇನ್ಸ್ಟ್ರುಮೆಂಟ್ ಕನ್ಸೋಲ್, 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಐದು ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್ಪ್ಲೇ ನೀಡಲಾಗಿದೆ.

ಲ್ಯಾಡರ್-ಫ್ರೇಮ್ ಚಾಸಿಸ್ ಹೊಂದಿರುವ ಪಿಕಪ್ ಟ್ರಕ್, ಲೀಫ್ ಸ್ಪ್ರಿಂಗ್ಸ್ ಮತ್ತು ಮೌಂಟೆಡ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಗಟ್ಟಿಯಾದ ಹಿಂಭಾಗದ ಆಕ್ಸಲ್ ಅನ್ನು ಹೊಂದಿದೆ. ಕಿಯಾ ಕಂಪನಿಯ ಫ್ರೀಕ್ವೆನ್ಸಿ ಸೆಲೆಕ್ಟಿವ್ ಡ್ಯಾಂಪರ್ ಕಂಟ್ರೋಲ್ ಮತ್ತು ಹೈಡ್ರಾಲಿಕ್ ರೀಬೌಂಡ್ ಸ್ಟಾಪ್ ಟೆಕ್‌ನೊಂದಿಗೆ ವರ್ಧಿಸಲಾದ ಸಸ್ಪೆಂಷನ್ ಸಿಸ್ಟಮ್ ಸವಾಲಿನ ಭೂಪ್ರದೇಶಗಳಲ್ಲಿ ಉತ್ತಮ ಪ್ರಯಾಣ ಅನುಭವ ನೀಡುತ್ತವೆ. ಜೊತೆಗೆ ಡಬಲ್ ವಿಶ್ ಬೋನ್ ಫ್ರಂಟ್ ಸಸ್ಪೆಂಷನ್ ಕೂಡ ಹೊಂದಿದೆ.

toyota-hilux-rival-kia-tasman-fully-unveiled

ಪ್ರತಿಸ್ಪರ್ಧಿಗಳು: ಹೊಸ ಕಿಯಾ ಟಸ್ಮ್ಯಾನ್ ಪಿಕಪ್ ಟ್ರಕ್, ಫೋಕ್ಸ್ ವ್ಯಾಗನ್ ಅಮಾರೋಕ್, ಇಸುಜು ಡಿ-ಮ್ಯಾಕ್ಸ್, ಮಾಜ್ಡಾ ಬಿಟಿ -50, ಫೋರ್ಡ್ ರೇಂಜರ್, ಮಿಟ್ಸುಬಿಷಿ ಟ್ರೈಟನ್, ನಿಸ್ಸಾನ್ ನವರಾ, ಇತ್ಯಾದಿಗಳಿಗೆ ಪೈಪೋಟಿ ನೀಡಲಿದೆ. ಮಿಡ್ಸೈಜ್ ಪಿಕಪ್ ಬ್ರಾಂಡ್ ಪ್ರಕಾರ ಉತ್ತಮ ಆಫ್-ರೋಡ್ ಸಾಮರ್ಥ್ಯಗಳು ಮತ್ತು ಪ್ರಾಯೋಗಿಕತೆಯೊಂದಿಗೆ ಬಹುಮುಖ ಬಾಹ್ಯವನ್ನು ಹೊಂದಿದೆ. ಗ್ರಾಹಕರು ಹೆಚ್ಚಿನ ಮಟ್ಟದ ಕಸ್ಟಮೈಸೇಶನ್ ಕೂಡ ಪಡೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, November 2, 2024, 12:32 [IST]
English summary
Toyota hilux rival kia tasman fully unveiled
Read more on kia motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+